10 ಲಕ್ಷದೊಳಗಿನ 5 ಪವರ್‌ಫುಲ್ ಕಾಂಪ್ಯಾಕ್ಟ್ SUVಗಳು ಬಿಡುಗಡೆಗೆ ಸಜ್ಜಾಗುತ್ತಿವೆ!

ಮಹೀಂದ್ರಾ XUV300 ಫೇಸ್‌ಲಿಫ್ಟ್, ಟೊಯೋಟಾ ಟೈಸರ್, ಹೊಸ ಸ್ಕೋಡಾ SUV, ಕಿಯಾ ಕ್ಲಾವಿಸ್ ಸೇರಿದಂತೆ ಮಾರುತಿಯಿಂದ ಒಂದು ಕಾರು ಬಿಡುಗಡೆಯಾಗಲಿದೆ. ಮುಂಬರುವ ತಿಂಗಳುಗಳಲ್ಲಿ ಸಬ್-4-ಮೀಟರ್ ಕಾಂಪ್ಯಾಕ್ಟ್ SUV ವಿಭಾಗಕ್ಕೆ ಬಹಳಷ್ಟು ಹೊಸ ಕಾರುಗಳು ಎಂಟ್ರಿ ಕೊಡುವುದು ಬಹುತೇಕ ಖಚಿತವಾಗಿದೆ. ಕೆಲವು ಮುಂದಿನ ವರ್ಷ ಬಿಡುಗಡೆಯಾಗಲಿವೆ.

ನೀವು ಹೊಸ ಕಾಂಪ್ಯಾಕ್ಟ್ SUV ಕಾರಿನ ಹುಡುಕಾಟದಲ್ಲಿದ್ದರೆ, ಪ್ರಸ್ತುತ ನಿಮ್ಮ ಬಜೆಟ್ ಹತ್ತು ಲಕ್ಷವಾಗಿದ್ದರೆ, ಮುಂಬರುವ ಈ ಕಾಂಪ್ಯಾಕ್ಟ್ SUV ಗಳು ನಿಮ್ಮ ಕಾಯುವಿಕಗೆ ಉತ್ತಮ ಆಯ್ಕೆಯಾಗಬಹುದು. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಪ್ರತಿ ಕಾರಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

upcoming-compact-suvs-under-10-lakhs-maruti-kia-toyota-skoda

1. ಮಹೀಂದ್ರಾ XUV300 ಫೇಸ್ ಲಿಫ್ಟ್: Mahindra XUV300 Facelift ಶೀಘ್ರದಲ್ಲೇ ಬಿಡುಗಡೆಗೆ ನಿಗದಿಪಡಿಸಲಾಗಿದೆ, ಫೇಸ್‌ಲಿಫ್ಟೆಡ್ ಮಹೀಂದ್ರಾ XUV300 ನವೀಕರಿಸಿದ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳನ್ನು ಪಡೆದಿದೆ. ಈ ಸಬ್-4-ಮೀಟರ್ SUV ಹೊಸ ವಿನ್ಯಾಸವು ಬ್ರ್ಯಾಂಡ್‌ನ ಮುಂಬರುವ BE ಸರಣಿಯ SUV ಗಳಿಂದ ಪ್ರೇರಿತವಾಗಿದೆ. ಕ್ಯಾಬಿನ್ ಒಳಗೆ, ಇದು ಹೊಸ 10.25-ಇಂಚಿನ ಇನ್ಫೋಟೈನ್‌ಮೆಂಟ್, ಅದೇ ಗಾತ್ರದ ಡ್ರೈವರ್ ಡಿಸ್‌ಪ್ಲೇಯನ್ನು ಪಡೆದಿದೆ.

ಮಹೀಂದ್ರಾ XUV300 ಫೇಸ್‌ಲಿಫ್ಟ್ 1.5-ಲೀಟರ್ ಟರ್ಬೊ ಡೀಸೆಲ್, 1.2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.2-ಲೀಟರ್ tGDi ಪೆಟ್ರೋಲ್ ಘಟಕ ಸೇರಿದಂತೆ ಪ್ರಸ್ತುತದ ಎಂಜಿನ್ ಆಯ್ಕೆಗಳೊಂದಿಗೆ ಮುಂದುವರಿಯುತ್ತದೆ. ಶಕ್ತಿಶಾಲಿ 1.2 ಲೀಟರ್ tGDi ಪೆಟ್ರೋಲ್ ಎಂಜಿನ್ ಹೊಸ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆಯಬಹುದು.

upcoming-compact-suvs-under-10-lakhs-maruti-kia-toyota-skoda

2.ಟೊಯೋಟಾ ಟೈಸರ್: Toyota Taisor, ಮಾರುತಿ ಸುಜುಕಿ ಫ್ರಾಂಕ್ಸ್-ಆಧಾರಿತ ಕೂಪೆ ಆಗಿದ್ದು, ಈ ಎಸ್‌ಯುವಿ 2024 ರ ಮೊದಲಾರ್ಧದಲ್ಲಿ ಪಾದಾರ್ಪಣೆ ಮಾಡಲಿದೆ. ಟೊಯೋಟಾ ಟೈಸರ್ 1.0-ಲೀಟರ್ ಬೂಸ್ಟರ್‌ಜೆಟ್ ಟರ್ಬೊ ಪೆಟ್ರೋಲ್ ಮೋಟಾರ್ ಜೊತೆಗೆ ಪೆಟ್ರೋಲ್ ಮತ್ತು CNG ಆಯ್ಕೆಗಳೊಂದಿಗೆ ಲಭ್ಯವಿರುವ ಪರಿಚಿತ 1.2 ಲೀಟರ್ K12C ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ವಿನ್ಯಾಸದ ವಿಷಯದಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್‌ಗೆ ಹೋಲಿಸಿಕೊಂಡರೆ ಬಂಪರ್‌ಗಳು, ಮುಂಭಾಗದ ಗ್ರಿಲ್ ಮತ್ತು ಅಲಾಯ್ ವೀಲ್‌ಗಳಲ್ಲಿ ಸೂಕ್ಷ್ಮ ಬದಲಾವಣೆಗಳಿರುತ್ತವೆ. ಸಜ್ಜುಗೊಳಿಸುವ ಕೆಲವು ಸಣ್ಣ ಬದಲಾವಣೆಗಳನ್ನು ಹೊರತುಪಡಿಸಿ ಒಳಾಂಗಣ ಮತ್ತು ಇನ್‌ಸ್ಟ್ರೂಮೆಂಟ್ ಸೆಟಪ್ ಒಂದೇ ಆಗಿರುತ್ತದೆ. ಹೆಚ್ಚಿನ ಮಾಹಿತಿ ಮುಂಬರುವ ದಿನಗಳಲ್ಲಿ ಹೊರಬರಲಿದೆ.

upcoming-compact-suvs-under-10-lakhs-maruti-kia-toyota-skoda

3. ಕಿಯಾ ಕ್ಲಾವಿಸ್: Kia Clavis ಅನ್ನು 2025 ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಕಿಯಾ ಕ್ಲಾವಿಸ್ ಕಾಂಪ್ಯಾಕ್ಟ್ ಎಸ್‌ಯುವಿ ಸೋನೆಟ್ ಮತ್ತು ಸೆಲ್ಟೋಸ್ ನಡುವೆ ಸ್ಥಾನ ಪಡೆಯುತ್ತದೆ. ಪರೀಕ್ಷೆ ವೇಳೆ ಇತ್ತೀಚೆಗೆ ಕೊರಿಯಾದಲ್ಲಿ ಇದನ್ನು ಗುರ್ತಿಸಲಾಗಿದ್ದು, 2024 ರ ಅಂತ್ಯದ ವೇಳೆಗೆ ಕ್ಲಾವಿಸ್ ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ. ಈ ಹೊಸ ಮಾದರಿಯನ್ನು ಶೀಘ್ರದಲ್ಲಿ ಅನಾವರಣಗೊಳಿಸಬಹುದು.

4. ಹೊಸ ಸ್ಕೋಡಾ ಕಾಂಪ್ಯಾಕ್ಟ್ SUV: ಸ್ಕೋಡಾದ ಅಗ್ಗದ ಬೆಲೆಯ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಮುಂದಿನ ವರ್ಷ ಬಿಡುಗಡೆ ಮಾಡಬಹುದು. ಇದನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲು ಭಾರತದಲ್ಲಿ ತಯಾರಿಸಲಾಗುತ್ತದೆ. ಇದು ಪರಿಚಿತ 1.0-ಲೀಟರ್ TSI ಎಂಜಿನ್‌ ಹಾಗೂ 115bhp ಪವರ್ ಮತ್ತು 178Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆಯು ಜನವರಿ 2025ರ ವೇಳೆಗೆ ಪ್ರಾರಂಭವಾಗುತ್ತದೆ.

upcoming-compact-suvs-under-10-lakhs-maruti-kia-toyota-skoda

5. ಮಾರುತಿ ಸುಜುಕಿ ಮೈಕ್ರೋ SUV: ಮಾರುತಿ ಸುಜುಕಿ ಮೈಕ್ರೋ SUV ಹೊಸ ಎಸ್‌ಯುವಿ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗಲಿದೆ. ಮುಂದಿನ ವರ್ಷ ಎಂಟ್ರಿ ಕೊಡುವ ನಿರೀಕ್ಷೆಗಳಿವೆ, ಹೊಸ ಮೈಕ್ರೋ-ಎಸ್‌ಯುವಿ ಬ್ರ್ಯಾಂಡ್‌ನ ಶ್ರೇಣಿಯಲ್ಲಿ ಬ್ರೆಜ್ಜಾಕ್ಕಿಂತ ಕೆಳಗಿರುತ್ತದೆ. ವಿವರಗಳು ವಿರಳವಾಗಿದ್ದರೂ, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಹೊರಬರಬಹುದು.

More from DriveSpark

Article Published On: Monday, February 12, 2024, 13:39 [IST]
English summary
Upcoming compact suvs under 10 lakhs maruti kia toyota skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+