Maruti Suzuki: ಸನ್‌ರೂಫ್‌ನೊಂದಿಗೆ ಮಿಂಚಲಿವೆ ಮುಂಬರುವ 2024ರ ಮಾರುತಿ ಸ್ವಿಫ್ಟ್, ಡಿಜೈರ್!
ಬಹುನಿರೀಕ್ಷಿತ 2024 ರ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳು ಸನ್‌ರೂಫ್‌ನೊಂದಿಗೆ ಬರಲಿವೆ. ಹೌದು, ಇತ್ತೀಚೆಗೆ ಮುಂಬರುವ ಸ್ವಿಫ್ಟ್ ಡಿಜೈರ್ ಅನ್ನು ರಸ್ತೆ ಪರೀಕ್ಷೆ ಮಾಡುವಾಗ ಸನ್‌ರೂಫ್‌ನೊಂದಿಗೆ ಕಾಣಿಸಿಕೊಂಡಿದೆ. ಈ ಕುರಿತ ಚಿತ್ರಗಳು ಕೂಡ ಸಖತ್ ವೈರಲ್ ಆಗಿವೆ.
ಮುಂಬರುವ ಮಾರುತಿ ಸ್ವಿಫ್ಟ್ ಹಾಗೂ ಡಿಜೈರ್ ಎರಡೂ ಮಾದರಿಗಳು ಹೆಚ್ಚಿನ ವೈಶಿಷ್ಟ್ಯಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹೆಚ್ಚಿನ ಮೈಲೇಜ್ ನೀಡಲಿವೆ ಎಂದು ಹೇಳಲಾಗುತ್ತಿದೆ. ಮಾರುತಿ ಸುಜುಕಿ ಮುಂಬರುವ ತಿಂಗಳುಗಳಲ್ಲಿ ಈ ಕಾರುಗಳನ್ನು ಬಿಡುಗಡೆ ಮಾಡಲು ಜೋರು ತಯಾರಿ ನಡೆಸಿದೆ. ಹಾಗಾಗಿಯೇ ವಿವಿಧ ಪ್ರದೇಶಗಳಲ್ಲಿ ಕಾರುಗಳನ್ನು ರೋಡ್ ಟೆಸ್ಟ್ ನಡೆಸುತ್ತಿದೆ.

ಮಾರುತಿ ಡಿಜೈರ್ ಕುತೂಹಲಕಾರಿಯಾಗಿ ಸನ್‌ರೂಫ್‌ನೊಂದಿಗೆ ಕಾಣಿಸಿಕೊಂಡಿದೆಯಾದರೂ, ಕಂಪನಿ ಈ ಬಗ್ಗೆ ಅಧಿಕೃತವಾಗಿ ಖಚಿತಪಡಿಸಲ್ಲ. ಆದರೆ ಟೆಸ್ಟಿಂಗ್ ವೇಳೆ ಕಾರಿನಲ್ಲಿ ಸನ್‌ರೂಫ್ ಕಾಣಿಸಿಕೊಂಡಿರುವು 100% ನಿಜ. ಫೋಟೋದಲ್ಲಿ ಕಾಣುವಂತೆ ಡಿಜೈರ್ ಕೆಲವು ವಿನ್ಯಾಸ ಬದಲಾವಣೆಗೆ ಒಳಗಾಗಿದೆ. ಡಿಜೈರ್ ಹಿಂಭಾಗವು ಹೊಸ ನವೀಕರಣ ಪಡೆದಿದ್ದು, ಈಗ ಮಾರಾಟದಲ್ಲಿರುವ ಡಿಜೈರ್‌ಗಿಂತ ಭಿನ್ನವಾಗಿ ಕಾಣುತ್ತಿದೆ.
ಮೈಲೇಜ್: ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳು ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರಲಿವೆ. ಮುಂಬರುವ ಈ ಹೊಸ ಮಾದರಿಗಳು ಭರ್ಜರಿ 24 ಕಿ.ಮೀ ಮೈಲೇಜ್ ನೀಡಲಿವೆ ಎನ್ನಲಾಗಿದೆ. ಈ ಕಾರುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ, ಅಂದರೆ 2024 ರ ಮಧ್ಯದಲ್ಲಿ ಅನಾವರಣಗೊಂಡು ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಹೊಸ ಎಂಜಿನ್: ಪ್ರಸ್ತುತವಿರುವ ಡಿಜೈರ್ ಹಾಗೂ ಸ್ವಿಫ್ಟ್‌ಗಳಿಗೆ ಹೋಲಿಸಿಕೊಂಡರೆ ಮುಂಬರಲಿರುವ ಕಾರುಗಳಲ್ಲಿ ಪವರ್ ಹಾಗೂ ಟಾರ್ಕ್ ಕಡಿಮೆಯಾಗಿದೆ. ಹೊಸ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳಲ್ಲಿ 80 bhp ಪವರ್ 108 Nm ಟಾರ್ಕ್ ಅನ್ನು ಹೊರಹಾಕುವಂತೆ ಟ್ಯೂನ್ ಮಾಡಲಾಗಿದೆ. ಆದರೆ ಈಗಿರುವ ಹಳೆಯ ಮಾದರಿಗಳು 88 bhp ಪವರ್ ಹಾಗೂ 113 Nm ಗರಿಷ್ಟ ಟಾರ್ಕ್ ಅನ್ನು ಹೊರಹಾಕುತ್ತವೆ.
ಇಂಟೀರಿಯರ್: ಎರಡೂ ಕಾರುಗಳು ಒಂದೇ ರಿತಿಯ ಕ್ಯಾಬಿನ್ ಪಡೆಯಲಿವೆ. ಮೂಲಗಳ ಪ್ರಕಾರ ಬಲೆನೋದಿಂದ ಸ್ಪೂರ್ತಿ ಪಡೆದ ಡ್ಯುಯಲ್ ಟೋನ್ ಡ್ಯಾಷ್‌ಬೋರ್ಡ್, ಟಚ್ ಸ್ಕ್ರೀನ್ ಇನ್‌ಫೋಟೈನ್‌ಮೆಂಟ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಬರಲಿದೆ. ಸದ್ಯ ಎಲ್ಲಾ ಬ್ರಾಂಡ್‌ಗಳು ಕಡಿಮೆ ಬೆಲೆಯಲ್ಲಿ ಉತ್ತಮ ಇಂಟೀರಿಯರ್ ನೀಡುತ್ತಿರುವುದರಿಂದ ಮಾರುತಿ ಕೂಡ ಈ ಬಾರಿ ಡಿಜೈರ್ ಹಾಗೂ ಸ್ವಿಫ್ಟ್‌ನಲ್ಲಿ ಪ್ರೀಮಿಯಂ ಆಗಿ ನೀಡಲಿದೆ.

ವೈಶಿಷ್ಟ್ಯಗಳು: ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಅನಲಾಗ್ ಡಯಲ್, ಡಿಜಿಟಲ್ ಮಲ್ಟಿ ಇನ್‌ಫರ್ಮೆಷನ್ ಡಿಸ್ಪ್ಲೆ ಹೊಂದಿರುವ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ನೀಡುವ ಸಾಧ್ಯತೆ ಇದೆ. ಎಂಜಿನ್ ವಿಷಯಕ್ಕೆ ಬಂದರೆ ಈಗಿರುವ ಎಂಜಿನ್ ಅನ್ನು ಸ್ಥಗಿತಗೊಳಿಸಿ Z-12 ಎಂಬ ಹೊಸ ಎಂಜಿನ್ ಅನ್ನು ಪರಿಚಯಿಸಲಿದ್ದಾರೆ. ಪ್ರಸ್ತುತವಿರುವ ಎಂಜಿನ್ 4 - ಸಿಲಿಂಡರ್ ಹೊಂದಿದ್ದರೇ ಮುಂಬರಲಿರುವುದು 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications