ದೇಶದಲ್ಲಿ ಸಿದ್ಧಗೊಳ್ಳುತ್ತಿವೆ ಪ್ರಮುಖ ಎಕ್ಸ್‌ಪ್ರೆಸ್‌ವೇಗಳು, ಕರ್ನಾಟಕದಲ್ಲಿ ಎಲ್ಲಿ?.. ಬೇಗ ಹೋಗಬಹುದು!

ದೇಶದಲ್ಲಿ ಆರ್ಥಿಕ ಅಭಿವೃದ್ಧಿಗೆ ಹೆದ್ದಾರಿಗಳು ಮಹತ್ತರವಾದ ಕೊಡುಗೆ ನೀಡುತ್ತವೆ. ಹೊಸ ರಸ್ತೆ ನಿರ್ಮಾಣದಿಂದ ಸಾರಿಗೆ ಸಂಪರ್ಕ ವೃದ್ಧಿಗೊಂಡು ಕೈಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿಯಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳನ್ನು ಸಂಪರ್ಕಿಸುವ ಸಲುವಾಗಿ ಹಲವು ಎಕ್ಸ್‌ಪ್ರೆಸ್‌ವೇ (Expressway)ಗಳನ್ನು ನಿರ್ಮಾಣ ಮಾಡುತ್ತಿದೆ. ಕೆಲವು ಹೆದ್ದಾರಿಗಳು ಈ ವರ್ಷಾಂತ್ಯದೊಳಗೆ ಲೋಕಾರ್ಪಣೆಗೊಂಡರೆ, ಮತ್ತಷ್ಟು ರಸ್ತೆಗಳು ಮುಂಬರುವ ವರ್ಷಗಳಲ್ಲಿ ಉದ್ಘಾಟನೆಗೊಳುವ ನಿರೀಕ್ಷೆಯಿದೆ. ಸದ್ಯ ಕರ್ನಾಟಕ ಒಳಗೊಂಡಂತೆ ದೇಶಾದ್ಯಂತ ಸಿದ್ಧಗೊಳ್ಳುತ್ತಿರುವ ಪ್ರಮುಖ ಎಕ್ಸ್‌ಪ್ರೆಸ್‌ವೇಗಳ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ (Delhi-Mumbai Expressway): ವಾಣಿಜ್ಯ ನಗರಿ ಮುಂಬೈ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯನ್ನು ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ನಿರ್ಮಾಣ ಹಂತದಲ್ಲಿದೆ. ಆದಾಗ್ಯೂ ಹಲವೆಡೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದು ದೇಶದ ಮೊದಲ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 1350 ಕಿಲೋಮೀಟರ್ ಉದ್ದವಿದೆ.

Upcoming Top 5 Expressway In India Where Is In Karnataka Easy Journey

ಈ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಸಂಪೂರ್ಣ ನಿರ್ಮಾಣಗೊಂಡ ನಂತರ ದೆಹಲಿ (Delhi) ಹಾಗೂ ಮುಂಬೈ (Mumbai) ನಗರಗಳ ಮಧ್ಯೆಯಿರುವ ಪ್ರಯಾಣದ ಅವಧಿ 12 ಗಂಟೆಗಳಿಗೆ ಕಡಿಮೆಯಾಗಲಿದ್ದು, ದೆಹಲಿ, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ದಾದ್ರಾ - ನಗರ ಹವೇಲಿ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾದುಹೋಗುತ್ತದೆ.

ಅಮೃತಸರ-ಜಾಮ್‌ನಗರ ಎಕ್ಸ್‌ಪ್ರೆಸ್‌ವೇ (Amritsar-Jamnagar Expressway): ಪಂಜಾಬ್‌ನ ಅಮೃತಸರದಿಂದ ಗುಜರಾತ್‌ನ ಜಾಮ್‌ನಗರದವರೆಗೆ ಈ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು 1,316 ಕಿಲೋಮೀಟರ್ ಉದ್ದವಿದ್ದು, ದೇಶದ ಎರಡನೇ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಎಂಬ ಹಿರಿಮೆಗೂ ಶೀಘ್ರದಲ್ಲೇ ಭಾಜನವಾಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2025ರ ಡಿಸೆಂಬರ್‌ನೊಳಗೆ ನೂತನ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲಿದೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ರಸ್ತೆ ನಿರ್ಮಾಣದ ಕೆಲಸಗಳು ಮುಗಿದಿವೆ.

Upcoming Top 5 Expressway In India Where Is In Karnataka Easy Journey

ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ (Delhi-Amritsar-Katra Expressway): ಈ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿದೆ. ಹೊಸ ಎಕ್ಸ್‌ಪ್ರೆಸ್‌ವೇ 669 ಕಿಲೋಮೀಟರ್ ಉದ್ದವಿದ್ದು, ದೆಹಲಿ ಹಾಗೂ ಕತ್ರಾ ನಡುವಿನ ಪ್ರಯಾಣದ ಸಮಯ 6 ಗಂಟೆಗಳಿಗೆ ಇಳಿಕೆಯಾಗಲಿದೆ. ಹೊಸ ಹೆದ್ದಾರಿಯು ದೆಹಲಿ, ಹರಿಯಾಣ, ಪಂಜಾಬ್ ಹಾಗೂ ಜಮ್ಮು-ಕಾಶ್ಮೀರಗಳನ್ನು ಸಂಪರ್ಕಿಸುತ್ತದೆ.

ಹೈದರಾಬಾದ್-ವಿಶಾಖಪಟ್ಟಣಂ ಎಕ್ಸ್‌ಪ್ರೆಸ್‌ವೇ (Hyderabad-Visakhapatnam Expressway): ತೆಲಂಗಾಣದ ರಾಜಧಾನಿ ಹೈದರಾಬಾದ್ ಹಾಗೂ ಆಂಧ್ರ ಪ್ರದೇಶದ ಕರಾವಳಿ ನಗರ ವಿಶಾಖಪಟ್ಟಣಂ ಅನ್ನು ಸಂಪರ್ಕಿಸಲು ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ಕೆಲವೇ ತಿಂಗಳಲ್ಲಿ ಈ ಹೆದ್ದಾರಿ ಉದ್ಘಾಟನೆಗೊಳ್ಳುವ ನೀರೀಕ್ಷೆಯಿದೆ. ನೂತನ ರಸ್ತೆಯಿಂದ ಹೈದರಾಬಾದ್-ವಿಶಾಖಪಟ್ಟಣಂ ಮಧ್ಯೆಯಿರುವ ಅಂತರ 56 ಕಿಲೋಮೀಟರ್ ಕಡಿಮೆಯಾಗಲಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru-Chennai Expressway): ಈ ಹೆದ್ದಾರಿಯು ವರ್ಷಾಂತ್ಯದೊಳಗೆ ಲೋಕಾರ್ಪಣೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ರಸ್ತೆಯನ್ನು ನಿರ್ಮಿಸುವ ಜವಾಬ್ದಾರಿ ಹೊತ್ತಿದೆ. 262 ಕಿಮೀ ಉದ್ದದ ರಸ್ತೆ ಇದಾಗಿದ್ದು, ಬೆಂಗಳೂರು-ಚೆನ್ನೈ ನಡುವೆ ಪ್ರಯಾಣದ ಅವಧಿ 3 ಗಂಟೆಗೆ ಇಳಿಕೆಯಾಗಲಿದೆ. ಪ್ರಸ್ತುತ, 4 ಪಥದ ಹೆದ್ದಾರಿಯಾಗಿರಲಿದೆ.

ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಕೂಡ ಅಭಿವೃದ್ಧಿ ಹಂತದಲ್ಲಿದ್ದು, ದೆಹಲಿ, ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳನ್ನು ಸಂಪರ್ಕಿಸುತ್ತದೆ. ವಾರಣಾಸಿ-ರಾಂಚಿ-ಕೋಲ್ಕತ್ತಾ ಎಕ್ಸ್‌ಪ್ರೆಸ್‌ವೇಯೂ ನಿರ್ಮಾಣವಾಗುತ್ತಿದೆ. ಇದು 612 ಕಿಲೋಮೀಟರ್‌ ಉದ್ದವಿದ್ದು, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಹಾದು ಹೋಗುತ್ತದೆ. ಸೂರತ್-ನಾಸಿಕ್-ಸೋಲಾಪುರ ಎಕ್ಸ್‌ಪ್ರೆಸ್‌ವೇ ಹಾಗೂ ಇಂದೋರ್-ಹೈದರಾಬಾದ್ ಎಕ್ಸ್‌ಪ್ರೆಸ್‌ವೇ ಕಾಮಗಾರಿಯೂ ನಡೆಯುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, July 3, 2024, 10:27 [IST]
English summary
Upcoming top 5 expressway india where karnataka easy journey
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+