MPV ಕಿಂಗ್ ಇನ್ನೋವಾ ಕ್ರಿಸ್ಟಾಗೆ ಸೆಕೆಂಡ್‌ಹ್ಯಾಂಡ್ ಮಾರುಕಟ್ಟೆಯಲ್ಲೂ ಅದೇ ಕ್ರೇಜ್
ಭಾರತದಲ್ಲಿ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರುಗಳಿಗೆ ಎಷ್ಟು ಬೇಡಿಕೆ ಇದೆಯೆಂದರೆ ಕೇವಲ ಹೊಸ ವಾಹನಗಳು ಮಾತ್ರವಲ್ಲ ಸೆಕೆಂಡ್‌ಹ್ಯಾಂಡ್ ಇನ್ನೋವಾ ಕ್ರಿಸ್ಟಾಗಳನ್ನು ಖರೀದಸಲು ಕೂಡ ಜನ ಮುಗಿಬೀಳುತ್ತಾರೆ. ಹಾಗಾಗಿಯೇ ಇನ್ನೋವಾ ಇಂದು ಭಾರತದಲ್ಲಿ ಬಳಸಿದ ಕಾರು ಮಾರುಕಟ್ಟೆಯಲ್ಲಿ ಲಭ್ಯವಿರುವ ನಂ.1 ಕಾರಾಗಿದೆ.
ಮೊದಲು ಟೊಯೋಟಾದ ಹಾಟ್ ಮಾಡೆಲ್ ಆಗಿದ್ದ ಕ್ವಾಲಿಸ್ ಮೂಲಕ ಜನಮನ ಗೆದ್ದಿರುವ ಈ ಜಪಾನಿ ಬ್ರಾಂಡ್, ಕ್ವಾಲಿಸ್ ಬದಲಾಗಿ ಇನ್ನೋವಾವನ್ನು ಪರಿಚಯಿಸಿತು. ಟೊಯೊಟಾ ಕ್ವಾಲಿಸ್‌ಗೆ ಬದಲಿಯಾಗಿ ಇನ್ನೋವಾವನ್ನು ಮೊದಲ ಬಾರಿಗೆ 2004 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು. ಬಳಿಕ ಒಂದು ದಶಕದ ನಂತರ 2015 ರಲ್ಲಿ, ಟೊಯೋಟಾ ತನ್ನ ಎರಡನೇ ತಲೆಮಾರಿನ ಪುನರಾವರ್ತನೆಯನ್ನು ಇನ್ನೋವಾ ಕ್ರಿಸ್ಟಾದೊಂದಿಗೆ ಪ್ರಾರಂಭಿಸಿತು.

ಅಂದಿನಿಂದ ಕ್ರಿಸ್ಟಾ ಎಂಬ ಹೆಸರೊಂದಿಗೆ ಇನ್ನೋವಾ ಮಾರುಕಟ್ಟೆಯಲ್ಲಿ ಮುಂದುವರಿಯುತ್ತಿದೆ. ಈ MPV ಈಗಾಗಲೇ ಮಾರುಕಟ್ಟೆಯಲ್ಲಿ 8 ವರ್ಷಗಳನ್ನು ಕಳೆದಿದೆ. ಹಾಗಾಗಿ ನಿಮಗೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಇನ್ನೋವಾ ಕ್ರಿಸ್ಟಾಗಳು ಬೇಕಾದಷ್ಟು ಸಿಗುತ್ತವೆ. ಒಂದು ವೇಳೆ ಬಳಸಿದ ಕ್ರಿಸ್ಟಾವನ್ನು ನೀವು ಖರೀದಿಸಲು ಯೋಜಿಸುತ್ತಿದ್ದರೆ, ವಾಹನದ ಕೆಲವು ಸಾಧಕ-ಬಾಧಕಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
ಈ ವಿಷಯಗಳ ಅರಿವಿದ್ದರೆ ನಿರಾಸೆಗೊಳ್ಳುವುದಿಲ್ಲ: ಟೊಯೊಟಾ ಇನ್ನೋವಾ ಕ್ರಿಸ್ಟಾ ಇಂದಿನ ಆಧುನಿಕ ಪ್ರತಿಸ್ಪರ್ಧಿಗಳ ವಿರುದ್ಧ ತನ್ನದೇ ಆದ ಹಿಡಿತ ಸಾಧಿಸಲು ಸಾಧ್ಯವಾದರೆ, ಅದಕ್ಕಿಂತ ಇನ್ನೇನು ಬೇಕು? ಆದರೆ ಇಲ್ಲಿ ಮುಖ್ಯವಾಗಿ ಎದುರಾಗುವ ಸಮಸ್ಯೆ ಎಂದರೆ ಬೆಲೆ. ಇಂದಿಗೂ ಉತ್ತಮವಾಗಿ ನಿರ್ವಹಣೆಯಲ್ಲಿರುವ ಸೆಕೆಂಡ್ ಹ್ಯಾಂಡ್ ವಾಹನ ಹೊಂದಬಹುದು, ಆದರೆ ಬೆಲೆ ತುಸು ಹೆಚ್ಚಾಗುತ್ತದೆ.

ವಾಸ್ತವವೆಂದರೆ ಸ್ಥಿತಿಯ ಆಧಾರದ ಮೇಲೆ, ನೀವು ರೂ. 12 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಉತ್ತಮವಾಗಿರುವ ಟೊಯೊಟಾ ಇನ್ನೋವಾ ಕ್ರಿಸ್ಟಾವನ್ನು ಪಡೆಯದಿರಬಹುದು. ಹಾಗೆಯೇ ಸೆಕೆಂಡ್ ಹ್ಯಾಂಡ್ ಇನ್ನೋವಾ ಕ್ರಿಸ್ಟಾದಲ್ಲಿ ಸನ್‌ರೂಫ್, ವೈರ್‌ಲೆಸ್ ಚಾರ್ಜರ್ ಅಥವಾ ಆಧುನಿಕ ಎಸ್‌ಯುವಿಗಳಂತಹ ಏರ್ ಪ್ಯೂರಿಫೈಯರ್‌ನಂತಹ ವೈಶಿಷ್ಟ್ಯಗಳನ್ನು ಪಡೆಯದಿರಬಹುದು.
ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಶೇಷ ಆವೃತ್ತಿಯಲ್ಲಿ ವೈರ್‌ಲೆಸ್ ಚಾರ್ಜರ್ ಅನ್ನು ಉಡುಗೊರೆಯಾಗಿ ನೀಡಿದೆ. ಇನ್ನೋವಾ ಕ್ರಿಸ್ಟಾದ ಕ್ಯಾಬಿನ್ ಸುಸಜ್ಜಿತವಾಗಿದ್ದರೂ, ಒಳಗೆ ಬಳಸಲಾದ ಪ್ಲಾಸ್ಟಿಕ್‌ಗಳ ಗುಣಮಟ್ಟವು ಟೀಕೆಗೆ ಗುರಿಯಾಗಿದೆ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನೀವು ಸೆಕೆಂಡ್ ಹ್ಯಾಂಡ್ ಇನ್ನೋವಾ ಕ್ರಿಸ್ಟಾ ಖರೀದಿಸಿದರೆ ನಿರಾಶೆಗೊಳ್ಳುವುದಿಲ್ಲ.

ನಿರ್ಮಾಣ ಗುಣಮಟ್ಟ: ಇನ್ನೋವಾ ಕ್ರಿಸ್ಟಾದ ನಿರ್ಮಾಣ ಗುಣಮಟ್ಟದ ಬಗ್ಗೆ ಹೇಳುವುದಾದ್ರೆ, ಕ್ರಿಸ್ಟಾ ಅಸಾಧಾರಣ ರೀತಿಯಲ್ಲಿ ಟೊಯೊಟಾ ತಯಾರಿಸಿದ ಕಾರು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಫಿಟ್ ಮತ್ತು ಫಿನಿಶ್ ಎಲ್ಲವೂ ತುಂಬಾ ಉತ್ತಮವಾಗಿದೆ. ಆದರೆ ಮೊದಲ ಮಾಲೀಕನಿಂದ ಉತ್ತಮ ನಿರ್ವಹಣೆಯಲ್ಲಿದ್ದರೇ ಯಾವುದೇ ಚಿಂತೆಯಿಲ್ಲದೇ ಖರೀದಿಸಿ ಹಲವು ವರ್ಷಗಳು ಓಡಿಸಬಹುದು.
ಇನ್ನು ಟೊಯೊಟಾ ಇನ್ನೋವಾ ಕ್ರಿಸ್ಟಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇವೆರಡೂ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಬಂದಿರುವುದು ಸ್ವಾಗತಾರ್ಹ. ಎರಡೂ ಪರ್ಫಾಮೆನ್ಸ್‌ನಲ್ಲಿ ಬಲವಾದ ಅಂಕಿಅಂಶಗಳನ್ನು ಒದಗಿಸುತ್ತವೆ. ಆದರೂ ನಮ್ಮನ್ನು ಕೇಳಿದ್ರೆ ಕ್ರಿಸ್ಟಾ ಡೀಸೆಲ್ ಆವೃತ್ತಿಯನ್ನು ಖರೀದಿಸಲು ಹೆಚ್ಚು ಶಿಫಾರಸು ಮಾಡುತ್ತೇವೆ.

Innova Crysta ವಿಶಾಲವಾದ ಒಳಾಂಗಣ ಮತ್ತು ಹಲವು ವೈಶಿಷ್ಟ್ಯಗಳಿಂದ ಸಜ್ಜುಗೊಂಡಿದೆ. ಈ ಬಹುಪಯೋಗಿ ವಾಹನದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್, ಶಕ್ತಿಶಾಲಿ ಎಸಿ ಮತ್ತು ಐಚ್ಛಿಕ ಎರಡನೇ ಸಾಲಿನ ಕ್ಯಾಪ್ಟನ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ಸೇರಿಸುವಲ್ಲಿ ಜಪಾನೀಸ್ ಬ್ರ್ಯಾಂಡ್ ವಿಶೇಷ ಕಾಳಜಿಯನ್ನು ತೆಗೆದುಕೊಂಡಿದೆ.
ಇದರಲ್ಲಿ ಮೊದಲಿನಿಂದಲೂ ಏಳು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC) ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿದೆ. ಹಾಗಾಗಿ ಸೆಕೆಂಡ್‌ಹ್ಯಾಂಡ್‌ನಲ್ಲಿ ಕ್ರಿಸ್ಟಾವನ್ನು ಖರೀದಿಸುವ ಮುನ್ನ ಮೇಲೆ ತಿಳಿಸಲಾದ ವೈಶಿಷ್ಟ್ಯಗಳನ್ನು ಜಾಗರೂಕತೆಯಿಂದ ಪರಿಶೀಲಿಸುವುದನ್ನು ಮರಿಯದಿರಿ.


Click it and Unblock the Notifications