ಕಿಮ್‌ಗೆ ಪುಟಿನ್‌ರಿಂದ ಶಸ್ತ್ರಸಜ್ಜಿತ ರಷ್ಯಾ 'ರೋಲ್ಸ್-ರಾಯ್ಸ್' ಕಾರು ಗಿಫ್ಟ್: ವಿಶೇಷತೆಗಳೇನು?
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian president Vladimir Putin), 24 ವರ್ಷಗಳ ಬಳಿಕ ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ್ದಾರೆ. ಸ್ನೇಹದ ಸಂತೇಕವಾಗಿ ಕಿಮ್ ಜಾಂಗ್ ಉನ್‌ಗೆ ರಷ್ಯಾ ನಿರ್ಮಿತ ಐಷಾರಾಮಿ ಲಿಮೋಸಿನ್ ಔರಸ್ ಸೆನಾಟ್ (limousine Aurus Senat) ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ನಾಯಕರು ಹೊಸ ಕಾರಿನಲ್ಲಿ ಟೆಸ್ಟ್ ಡ್ರೈವ್ ಮಾಡಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವಿಡಿಯೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಪ್ಪು (ಬ್ಲ್ಯಾಕ್) ಬಣ್ಣದ ಶಸ್ತ್ರಸಜ್ಜಿತ 'ಔರಸ್' ಕಾರನ್ನು ಚಾಲನೆ ಮಾಡಿದ್ದಾರೆ. ಪ್ರಯಾಣಿಕರ ಆಸನದಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಕುಳಿತುಕೊಂಡಿರುವುದನ್ನು ನೋಡಬಹುದು. ಪುಟಿನ್ ಕಳೆದ ಫೆಬ್ರವರಿಯಲ್ಲಿ ಕಿಮ್‌ಗೆ ಮೊದಲ ಲಿಮೋಸಿನ್ ಔರಸ್ ಕಾರನ್ನು ನೀಡಿದ್ದರು. ಸದ್ಯ ಮತ್ತೊಂದು ಕಾರನ್ನು ಉಡೊಗೊರೆ ರೂಪದಲ್ಲಿ ಕೊಟ್ಟಿದ್ದಾರೆ ಎನ್ನಲಾಗಿದೆ.

ಈ ಲಿಮೋಸಿನ್ ಔರಸ್ ಕಾರಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು ಸ್ಟ್ಯಾಂಡರ್ಡ್ ಸೆನಾಟ್, ಸೆನಾಟ್ ಲಾಂಗ್ ಹಾಗೂ ಸೆನಾಟ್ ಲಿಮೋಸಿನ್ ಎಂಬ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಸಿಗುತ್ತದೆ. 4.4-ಲೀಟರ್ ಟ್ವಿನ್-ಟರ್ಬೊ ವಿ8 ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 598 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 880 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಕಿಮ್ ಜಾಂಗ್ ಉನ್‌ಗೆ ಉಡೊಗೊರೆಯಾಗಿ ನೀಡಿರುವ 'ಲಿಮೋಸಿನ್ ಔರಸ್ ಸೆನಾಟ್' ವಿನ್ಯಾಸ (ಡಿಸೈನ್) 'ರೋಲ್ಸ್ ರಾಯ್ಸ್ ಘೋಸ್ಟ್' ಕಾರಿಗೆ ಹೋಲಿಕೆಯಾಗುತ್ತದೆ. ಇದೊಂದು ಶಸ್ತ್ರಸಜ್ಜಿತ (Armoured) ಕಾರಾಗಿದ್ದು, ADAS ಎಂದರೇನು (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಎಮೆರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಎಮೆರ್ಜೆನ್ಸಿ ಕಾಲ್ ಸಪೋರ್ಟ್, ಎಲ್ಇಡಿ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ವೈಫೈ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಔರಸ್ ಮೋಟಾರ್ಸ್ (Aurus Motors), 2021ರಲ್ಲಿ ರಷ್ಯಾದ ಟಾಟರ್‌ಸ್ತಾನ್ ಪ್ರದೇಶದಲ್ಲಿ ತನ್ನ ಕಾರುಗಳ ತಯಾರಿಕೆಯನ್ನು ಪ್ರಾರಂಭಿಸಿತ್ತು. ಕಳೆದ ತಿಂಗಳು, ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಹಳೆಯ ಟೊಯೊಟಾ ಕಾರ್ಖಾನೆ (Toyota factory)ಯಲ್ಲಿಯೂ ನೂತನ ಔರಸ್ ಕಾರುಗಳ ಉತ್ಪಾದನೆ ಶುರು ಮಾಡುತ್ತಿರುವುದಾಗಿ ರಷ್ಯಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.
ದೇಶೀಯವಾಗಿ ಖರೀದಿಗೆ ಲಭ್ಯವಿರುವ ರೋಲ್ಸ್-ರಾಯ್ಸ್ ಘೋಸ್ಟ್ (Rolls-Royce Ghost) ಕಾರು ರೂ.6.95 ರಿಂದ ರೂ.7.95 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು 6.75-ಲೀಟರ್ ಟ್ವಿನ್ ಟರ್ಬೊ ವಿ12 ಪೆಟ್ರೋಲ್ ಎಂಜಿನ್ ಪಡೆದಿದ್ದು, 571 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 850 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಈ ರೋಲ್ಸ್-ರಾಯ್ಸ್ ಘೋಸ್ಟ್ ಕಾರು ಕೇವಲ 4.8 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ಗರಿಷ್ಠ ವೇಗವನ್ನು ಪಡೆಯಲಿದ್ದು, 250 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 1300ಡಬ್ಲ್ಯೂ ಆಡಿಯೋ ಸಿಸ್ಟಮ್, ಹೆಡ್ - ಅಪ್ ಡಿಸ್ಪ್ಲೇ, ಇಲ್ಯುಮಿನೇಟೆಡ್ ಡ್ಯಾಶ್‌ಬೋರ್ಡ್, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications