ಪೆಟ್ರೋಲ್‌ಗಿಂತ CNG ಕಾರುಗಳು ಏಕೆ ದುಬಾರಿ? ಶೇ99 ಜನರಿಗೆ ನಿಜವಾದ ಕಾರಣ ತಿಳಿದಿಲ್ಲ!

ಸಿಎನ್‌ಜಿ(Compressed Natural Gas) ಯಲ್ಲಿ ಚಲಿಸುವ ವಾಹನಗಳು ಇಂಧನ ಚಾಲಿತ ವಾಹನಗಳಿಗಿಂತ ಅನೇಕ ರೀತಿಯಲ್ಲಿ ಉತ್ತಮವಾಗಿವೆ. ಅಂದರೇ ಮೈಲೇಜ್ ಆಗಿರಲಿ ಪರಿಸರಕ್ಕೆ ಹಾನಿ ಮಾಡುವುದಾಗಿರಲಿ ಇಂಧನ ಚಾಲಿತ ವಾಹನಗಳಿಗಿಂತ ಬೆಸ್ಟ್ ಎಂದು ಹೇಳಬಹುದು. ಆದ್ರೆ ಬೆಲೆ ವಿಷಯದಲ್ಲಿ ಮಾತ್ರ ICE ವಾಹನಗಳಿಗಿಂತ ಏಕೆ ದುಬಾರಿಯಾಗಿರುತ್ತವೆ ಎಂಬುದನ್ನು ಇಲ್ಲಿ ತಿಳಿಯೋಣ.

CNG ಕಾರುಗಳು ಪೆಟ್ರೋಲ್ ಮಾದರಿಯಂತೆ ಕಾಣುತ್ತವೆ, ಬಹುತೇಕ ಎಲ್ಲಾ ವೈಶಿಷ್ಟ್ಯಗಳು ಪೆಟ್ರೋಲ್ ಮಾದರಿಗಳಂತೆಯೇ ಬರುತ್ತವೆ. ಕಡಿಮೆ ಹಾನಿಕಾರಕ ಅನಿಲಗಳನ್ನು ಹೊರಸೂಸುತ್ತವೆ. ಜೊತೆಗೆ ಹೆಚ್ಚಿನ ಮೈಲೇಜ್ ಕೂಡ ನೀಡುತ್ತವೆ, ಆದರೂ ಸಿಎನ್‌ಜಿ ಕಾರುಗಳು ಸಾಮಾನ್ಯವಾಗಿ ತಮ್ಮ ಪೆಟ್ರೋಲ್ ಮಾದರಿಗಳಿಗಿಂತ 1 ರಿಂದ 1.5 ಲಕ್ಷ ರೂ. ದುಬಾರಿಯಾಗಿರುತ್ತವೆ. ವಾಸ್ತವವಾಗಿ, ಸಿಎನ್‌ಜಿ ಕಾರುಗಳು ದುಬಾರಿಯಾಗಲು ಅನೇಕ ಕಾರಣಗಳಿವೆ. ನೀವು ಸಿಎನ್‌ಜಿ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಒಳ್ಳೆಯ ನಿರ್ಣಯವೆಂದು ನಾವು ಹೇಳುತ್ತೇವೆ. ಆದ್ರೆ ದುಬಾರಿಯೆಂದು ಹಿಂದೇಟು ಹಾಕುವವರು ಅದರ ಹಿಂದಿನ ಕಾರಣವನ್ನು ಕೂಡ ತಿಳಿದುಕೊಳ್ಳುವ ಅವಶ್ಯಕತೆ ಕೂಡ ಇದೆ.

why-cng-cars-more-expensive-than-petrol-models-know-the-reason

ಹೆಚ್ಚಿನ ಬೆಲೆಗೆ ಮುಖ್ಯ ಕಾರಣಗಳು: ಸಿಎನ್‌ಜಿ ಕಾರುಗಳ ಆರಂಭಿಕ ಬೆಲೆಯೇ ಹೆಚ್ಚು, ಅಂದರೆ ಕಂಪನಿಯು ಅವುಗಳನ್ನು ತಯಾರಿಸುವಾಗಲೇ ವೆಚ್ಚ ಹೆಚ್ಚಾಗಿರುತ್ತದೆ. ಸಿಎನ್‌ಜಿ ಕಾರು ಹೆಚ್ಚಿನ ಒತ್ತಡದ ಶೇಖರಣಾ ಟ್ಯಾಂಕ್, ಫಿಲ್ಲಿಂಗ್ ನಾಜಿಲ್, ಪ್ರೆಶರ್ ರೆಗ್ಯುಲೇಟರ್ ಮತ್ತು ಪೈಪ್‌ಗಳಂತಹ ಗುಣಮಟ್ಟದ ದುಬಾರಿ ಘಟಕಗಳನ್ನು ಒಳಗೊಂಡಿರುತ್ತದೆ. ಇವೆಲ್ಲವನ್ನು ತುಂಬಾ ಭದ್ರವಾಗಿ ತಯಾರಿಸುವ ಅನಿವಾರ್ಯತೆ ಇರುವುದರಿಂದ ನಿರ್ಮಾಣ ವೆಚ್ಚ ಕೂಡ ಹೆಚ್ಚಾಗುತ್ತದೆ.

ಇನ್ನೂ ವಿವರವಾಗಿ ಹೇಳಬೇಕೆಂದರೆ, ಕಾರಿನಲ್ಲಿರುವ ಸಿಎನ್‌ಜಿ ಪೈಪ್ ಲೈನ್ ತುಕ್ಕು ನಿರೋಧಕವಾಗಿರುತ್ತದೆ, ಇದನ್ನು ತಯಾರಿಸಲು ಹೆಚ್ಚು ವೆಚ್ಚವಾಗುತ್ತದೆ. ಸಿಎನ್‌ಜಿಯಲ್ಲಿ ಚಲಿಸಲು ಎಂಜಿನ್‌ಗೆ ಬಲವಾದ ಪಿಸ್ಟನ್‌ಗಳು, ವಾಲ್ವ್‌ಗಳು ಮತ್ತು ಫ್ಯೂಯಲ್ ಇಂಜೆಕ್ಷನ್ ಸಿಸ್ಟಮ್‌ನಲ್ಲಿನ ಬದಲಾವಣೆಗಳಂತಹ ಕೆಲವು ಬದಲಾವಣೆಗಳು ಬೇಕಾಗುತ್ತವೆ. ಈ ಕಾರಣಗಳಿಂದಾಗಿ, ಕಾರಿನ ಬೆಲೆ ಹೆಚ್ಚಾಗುತ್ತದೆ.

why-cng-cars-more-expensive-than-petrol-models-know-the-reason

ಇವಿಷ್ಟೇ ಅಲ್ಲದೇ CNG ಕಾರುಗಳಿಗೆ ಕಠಿಣ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗುತ್ತದೆ. CNG ಸುಡುವ ಅನಿಲವಾಗಿರುವುದರಿಂದ, ಸಿಎನ್‌ಜಿ ಟ್ಯಾಂಕ್‌ನಲ್ಲಿ ಅನಿಲ ಸೋರಿಕೆ ಅಥವಾ ಟ್ಯಾಂಕ್‌ನಲ್ಲಿ ದೋಷವಿದ್ದರೆ ಸ್ಫೋಟದ ಅಪಾಯವಿರುತ್ತದೆ. ಆದ್ದರಿಂದ, ಈ ಟ್ಯಾಂಕ್‌ಗಳನ್ನು ಹೆಚ್ಚು ಬಲವಾಗಿ ಮತ್ತು ಸುರಕ್ಷಿತವಾಗಿ ನಿರ್ಮಿಸುವುದರಿಂದ, ವೆಚ್ಚವನ್ನು ಹೆಚ್ಚಿಸುತ್ತದೆ. ಕಾರಿನ ಸಿಎನ್‌ಜಿ ಕಿಟ್‌ಗೆ ನಿಯಮಿತ ಸೇವೆ ಮತ್ತು ನಿರ್ವಹಣೆಯ ಅಗತ್ಯ ಕೂಡ ಇದೆ. ಅವುಗಳ ಭಾಗಗಳ ಬದಲಿ ವೆಚ್ಚವೂ ಹೆಚ್ಚಾಗಿರುತ್ತದೆ. ಅಲ್ಲದೆ, ಸಿಎನ್‌ಜಿ ಕಾರುಗಳಿಗೆ ತರಬೇತಿ ಪಡೆದ ಮೆಕ್ಯಾನಿಕ್‌ಗಳ ಸಂಖ್ಯೆ ಕಡಿಮೆ, ಇದು ದುರಸ್ತಿ ಮತ್ತು ನಿರ್ವಹಣೆಯ ವೆಚ್ಚವನ್ನು ಹೆಚ್ಚಿಸುತ್ತದೆ.

ಸಿಎನ್‌ಜಿ ಕಾರುಗಳು ಹೆಚ್ಚಿನ ಮೈಲೇಜ್ ನೀಡುತ್ತವೆ ಎಂದು ಹೇಳಬಹುದು, ಆದರೆ ಹೆಚ್ಚಿನ ಆರಂಭಿಕ ವೆಚ್ಚವನ್ನು ಕೂಡ ಹೊಂದಿರುತ್ತವೆ. ಉತ್ತಮ ಸುರಕ್ಷತಾ ಮಾನದಂಡ ಮತ್ತು ಲಭ್ಯತೆಯ ಕೊರತೆಯಿಂದಾಗಿ ಸಿಎನ್‌ಜಿ ಕಾರುಗಳು ದುಬಾರಿಯಾಗಿ ಮಾರಾಟವಾಗುತ್ತವೆ. ಆದರೆ ಉತ್ತಮ ಮೈಲೇಜ್ ಮತ್ತು ಕಡಿಮೆ ಇಂಧನ ವೆಚ್ಚದಿಂದಾಗಿ, ದೀರ್ಘಾವಧಿಯಲ್ಲಿ ಸಿಎನ್‌ಜಿ ಕಾರುಗಳನ್ನು ಓಡಿಸುವುದು ಹಣಕ್ಕೆ ಯೋಗ್ಯವೆನಿಸುತ್ತದೆ.

why-cng-cars-more-expensive-than-petrol-models-know-the-reason

ಭಾರತೀಯ ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲಾ ಬ್ರಾಂಡ್‌ಗಳು ಸಿಎನ್‌ಜಿ ಕಾರುಗಳನ್ನು ಪರಿಚಯಿಸುತ್ತಿದ್ದಾರೆ. ಈ ವಾಹನಗಳಿಗೆ ಬೇಡಿಕೆ ಕೂಡ ಹೆಚ್ಚಾಗುತ್ತಿರುವ ಕಾರಣ ಎಲ್ಲಾ ಹೊಸ ಇಂಧನ ಚಾಲಿತ ವಾಹನಗಳು ಬಿಡುಗಡೆಯಾದ ಒಂದೆರಡು ತಿಂಗಳುಗಳಲ್ಲಿ ಸಿನ್‌ಜಿನಲ್ಲೂ ಬಿಡುಗಡೆಯಾಗುತ್ತಿವೆ. ಇವು ಪರಿಸರಕ್ಕೆ ಹಾನಿ ಮಾಡುವುದು ಕಡೆಮೆಯಾದ್ದರಿಂದ ಇವುಗಳ ಖರೀದಿಗೆ ಸರ್ಕಾರಗಳು ಕೂಡ ಪ್ರೋತ್ಸಾಹಿಸುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Tuesday, May 7, 2024, 13:35 [IST]
English summary
Why cng cars more expensive than petrol models know the reason
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+