ಜನಪ್ರಿಯ ಮಾರುತಿ ಗ್ರ್ಯಾಂಡ್ ವಿಟಾರಾ ಕಾರಿನ ಫ್ಯಾಂಟಮ್ ಬ್ಲ್ಯಾಕ್ ಎಡಿಷನ್ ಪರಿಚಯ.. ಬೆಲೆ ಎಷ್ಟು, ವಿಶೇಷತೆಗಳೇನು?

ಮಾರುತಿ ಸುಜುಕಿಯು ಪ್ರೀಮಿಯಂ ಕಾರುಗಳನ್ನು ಮಾರಾಟಗೊಳಿಸುವ ನೆಕ್ಸಾ (Nexa) ಡೀಲರ್‌ಶಿಪ್‌ ನೆಟ್‌ವರ್ಕ್, ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದೆ. 2015ರಿಂದ ಇಲ್ಲಿವರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟ ಮಾಡಲಾಗಿದೆ. ನೆಕ್ಸಾದ ದಶಮಾನೋತ್ಸವದ ಸವಿನೆನಪಿಗಾಗಿ ಕಂಪನಿಯು ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಹೊಚ್ಚ ಹೊಸ 'ಫ್ಯಾಂಟಮ್ ಬ್ಲ್ಯಾಕ್ ಎಡಿಷನ್'ನ್ನು ಅನಾವರಣಗೊಳಿಸಿದೆ. ಬನ್ನಿ, ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಮುಂದಿನ ದಿನಗಳಲ್ಲಿ ಈ ನೂತನ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಫ್ಯಾಂಟಮ್ ಬ್ಲ್ಯಾಕ್ ಎಡಿಷನ್ (Maruti Suzuki Grand Vitara Phantom Blaq edition) ಕಾರಿನ ಬೆಲೆಯಲ್ಲಿ ಘೋಷಿಸುವ ಸಾಧ್ಯಯಿದೆ. ಇದು ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಎಂಡ್ ವೇರಿಯೆಂಟ್), 'ಆಲ್ಫಾ ಪ್ಲಸ್ ಸ್ಟ್ರಾಂಗ್ ಹೈಬ್ರಿಡ್'ನ್ನು ಆಧರಿಸಿದ್ದು, ರೂ.20 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಮಾರಾಟಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ.

10 Years Of Nexa Maruti Suzuki Grand Vitara Phantom Blaq Edition Introduced Details

ಹೊಸ 'ಫ್ಯಾಂಟಮ್ ಬ್ಲ್ಯಾಕ್' ಹೊರಭಾಗದ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಸಾಮಾನ್ಯ 'ಗ್ರ್ಯಾಂಡ್ ವಿಟಾರಾ'ದಂತಿದೆ. ಅದರ ಹೊರತಾಗಿ ಆಲ್-ಬ್ಲ್ಯಾಕ್ ಪೇಂಟ್ ಸ್ಕೀಮ್‌ನ್ನು ಪಡೆದಿದೆ. ಗ್ರಿಲ್, ಅಲಾಯ್ ವೀಲ್‌ಗಳು, ರೂಫ್ ರೈಲ್‌ಗಳು, ಟೈಲ್‌ಗೇಟ್, ಡೋರ್ ಹ್ಯಾಂಡಲ್‌ಗಳು ಹಾಗೂ ಡಿ-ಪಿಲ್ಲರ್ ಅಸೆಂಟ್‌ಗಳು ಸಹ ಕಪ್ಪು (ಬ್ಲ್ಯಾಕ್) ಬಣ್ಣವನ್ನೇ ಹೊಂದಿವೆ.

ಈ ಕಾರಿನ ಕ್ಯಾಬಿನ್ ವಿನ್ಯಾಸವು ತುಂಬಾ ಅಚ್ಚುಕಟ್ಟಾಗಿದೆ. ಇದು ಬ್ಲ್ಯಾಕ್ ಪೇಂಟ್ ಸ್ಕೀಮ್‌ನ್ನೇ ಒಳಗೊಂಡಿದೆ. 9-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿರುವ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪನೋರಮಿಕ್ ಸನ್‌ರೂಫ್, ಹೆಡ್-ಅಪ್ ಡಿಸ್‌ಪ್ಲೇ, ಪ್ರೀಮಿಯಂ ಕ್ಲಾರಿಯನ್ ಸೌಂಡ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಚಾರ್ಜಿಂಗ್, 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ಇದು 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್ ಆಯ್ಕೆಯನ್ನು ಹೊಂದಿದೆ. 115 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 141 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 27.97 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು.

ಸದ್ಯ ಖರೀದಿಗೆ ದೊರೆಯುವ ಇತರೆ 'ಗ್ರ್ಯಾಂಡ್ ವಿಟಾರಾ' ಎಸ್‌ಯುವಿಯಂತೆ 'ಫ್ಯಾಂಟಮ್ ಬ್ಲ್ಯಾಕ್ ಎಡಿಷನ್' ಕೂಡ 5 - ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ & ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು 373 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.

ಈ ಕಾರಿನ ಸುರಕ್ಷಿತ ವೈಶಿಷ್ಟ್ಯದಲ್ಲೂ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿಲ್ಲ. 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ - ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ - ಡಿಸೆಂಟ್ ಕಂಟ್ರೋಲ್‌, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಇನ್ನು, ನೂತನ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಫ್ಯಾಂಟಮ್ ಬ್ಲ್ಯಾಕ್ ಎಡಿಷನ್ ಕಾರನ್ನು ಪರಿಚಯಿಸಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಆಕರ್ಷಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಮುಂಬರುವ ದಿನಗಳಲ್ಲಿ ಈ ಎಸ್‌ಯುವಿಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Article Published On: Monday, August 11, 2025, 9:33 [IST]
English summary
10 years of nexa maruti suzuki grand vitara phantom blaq edition introduced details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+