Best selling 7-seater: ಜನ ಮುಗಿಬಿದ್ದು ಖರೀದಿ: 7-ಸೀಟರ್‌ಗೆ ಫುಲ್ ಡಿಮ್ಯಾಂಡ್: 26.11 ಕಿ.ಮೀ ಮೈಲೇಜ್
Best selling 7-seater: ಭಾರತದಲ್ಲಿ ಈಗ ಪ್ರತಿಯೊಬ್ಬರು ಕಾರು ಖರೀದಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಲವು ಹಣಕಾಸು ಯೋಜನೆಗಳು, ಕಡಿಮೆ ಡೌನ್ ಪೇಮೆಂಟ್ ಹಾಗೂ ಕಡಿಮೆ ಬಡ್ಡಿ ದರದೊಂದಿಗಿನ ಇಎಂಐಗಳಿಂದಾಗಿ ಎಲ್ಲರು ತಮ್ಮ ನೆಚ್ಚಿನ ಕಾರುಗಳನ್ನು ಖರೀದಿಸಬಹುದಾಗಿದೆ. ಆದರೆ ಆ ಕಾರು ಬಜೆಟ್ ಬೆಲೆಯಲ್ಲಿ ಲಭ್ಯವಾದರೆ ಇನ್ನೂ ಸುಲಭವಾಗಿ ಖರೀದಿಸಿಬಹುದಾಗಿದೆ. ಇನ್ನು ದೊಡ್ಡ ಕುಟುಂಬಗಳಿಗಾಗಿ ಸಿಗುವ 7 - ಆಸನಗಳ ಬೆರಳೆಣಿಕೆಯ ಎಂಪಿವಿಗಳು ಕೂಡ ಬೆಜೆಟ್ ಬೆಲೆಯಲ್ಲಿ ಸಿಗುತ್ತವೆ ಅವುಗಳಲ್ಲಿ ಅತಿಹೆಚ್ಚು ಮಾರಾಟವಾಗುವ ಮಾರುತಿ ಸುಜುಕಿಯ ಪ್ರಮುಖ ಕಾರೊಂದನ್ನು ಪ್ರತಿ ತಿಂಗಳು ಜನ ಮುಗಿಬಿದ್ದು ಖರೀದಿಸುತ್ತಾರೆ.
ಹೌದು ದೊಡ್ಡ ಕುಟುಂಬಗಳ ದೂರದ ಪ್ರಯಾಣಗಳಿಗೆ ಹೇಳಿಮಾಡಿಸಿದ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಭಾರತದಲ್ಲಿ ಅತೀಹೆಚ್ಚು ಮಾರಾಟ ಕಾಣುವ 7 - ಸೀಟರ್ ಎಂಪಿವಿಯಾಗಿದೆ. ಜುಲೈ 2025 ರಲ್ಲಿ ಭಾರತದಲ್ಲಿ ಮಾರುತಿ ಸುಜುಕಿ ಎರ್ಟಿಗಾದ 16,604 ಯುನಿಟ್ ಕಾರುಗಳು ಮಾರಾಟವಾಗಿವೆ. ಅದರ ಕೈಗೆಟುಕುವಿಕೆ, ವೈಶಿಷ್ಟ್ಯಗಳು ಮತ್ತು ದಕ್ಷತೆಯಿಂದಾಗಿ ಕುಟುಂಬಗಳಲ್ಲಿ ಅತ್ಯಂತ ಜನಪ್ರಿಯ ಆಯ್ಕೆಯಾಗಿ ತನ್ನ ಸ್ಥಾನಮಾನವನ್ನು ಕಾಯ್ದುಕೊಂಡಿದೆ.

ಮಾರುತಿ ಎರ್ಟಿಗಾ ಕಾರಿನ ಮೂಲ ಮಾದರಿಯ ಬೆಲೆ ರೂ. 9.12 ಲಕ್ಷದಿಂದ ಪ್ರಾರಂಭವಾಗಿ ಟಾಪ್ ಮಾದರಿಯ ಬೆಲೆ ರೂ. 13.41 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ. ಪೆಟ್ರೋಲ್ (ಮ್ಯಾನುಯಲ್/ಸ್ವಯಂಚಾಲಿತ) ಮತ್ತು CNG (ಮ್ಯಾನುಯಲ್) ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಟಾಪ್ ಟ್ರಿಮ್‌ಗಳು AMT ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಒಳಗೊಂಡಿವೆ.
ಸುರಕ್ಷತೆ: ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು ಪ್ರಮಾಣಿತವಾಗಿವೆ, ಎಲ್ಲಾ 7 ಪ್ರಯಾಣಿಕರಿಗೆ 3 - ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್‌ಗಳನ್ನು ಈ ಕಾರಿನಲ್ಲಿ ನೀಡಲಾಗಿದೆ. 2ನೇ ಮತ್ತು 3ನೇ ಸಾಲುಗಳಿಗೆ ಹಿಂಭಾಗದ AC ವೆಂಟ್‌ಗಳು, ಟೈಪ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS, ಟಾಪ್ ಮಾಡೆಲ್) ಹೊಂದಿದೆ.

7 - ಇಂಚಿನ ಟಚ್‌ಸ್ಕ್ರೀನ್, ಸಂಪರ್ಕಿತ ವೈಶಿಷ್ಟ್ಯಗಳು, ಹಿಂಬದಿಯ ಕ್ಯಾಮೆರಾ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಸ್ವಲ್ಪ ಉದ್ದವಾದ ಕಾರಾಗಿರುವ ಕಾರಣದಿಂದಾಗಿ ಸುಧಾರಿತ 3ನೇ ಸಾಲಿನ ಲೆಗ್‌ರೂಮ್, ಹೊಂದಿಕೊಳ್ಳುವ ಲಗೇಜ್/ಪ್ರಯಾಣಿಕರ ನಿರ್ವಹಣೆಗಾಗಿ ಟಂಬಲ್ ಫೋಲ್ಡ್ ಸೀಟ್‌ಗಳು ಇದರಲ್ಲಿ ಕಾಣಬಹುದು.
ಈ ಮಾರುತಿ ಸುಜುಕಿ ಎರ್ಟಿಗಾ 7 - ಸೀಟರ್ ಕಾರಿನ ಇತರ ಅಪ್‌ಗ್ರೇಡ್‌ಗಳ ವಿಷಯಕ್ಕೆ ಬಂದರೆ ಹಿಂಬದಿಯ ಸ್ಪಾಯ್ಲರ್, ಪಾರ್ಕಿಂಗ್ ಸೆನ್ಸರ್‌ಗಳು, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ ಇದೆ. ಹೆಚ್ಚಿನ ಟ್ರಿಮ್‌ಗಳಲ್ಲಿ ಹಿಂಭಾಗದ ಪ್ರಯಾಣಿಕರಿಗೆ USB - C ಟೈಪ್ ಫಾಸ್ಟ್ ಚಾರ್ಜರ್‌ಗಳು, PM 2.5 ಏರ್ ಫಿಲ್ಟರ್ (ಟಾಪ್ ಮಾಡೆಲ್) ನೀಡಲಾಗುತ್ತದೆ.

ಮೈಲೇಜ್ ವಿಷಯಕ್ಕೆ ಬಂದರೆ ಚಾಲನಾ ಶೈಲಿ ಮತ್ತು ಪರಿಸ್ಥಿತಿಗಳ ಆಧಾರದ ಮೇಲೆ ಬದಲಾಗಬಹುದಾದರೂ, ಹಲವರು ಬಳೆಕದಾದರರ ಪ್ರತಿಕ್ರಿಯೆಗಳನ್ನು ಆಧರಿಸಿ ಈ 7 - ಆಸನಗಳ ಎರ್ಟಿಗಾ ತನ್ನ ಇಂಧನ ದಕ್ಷತೆಗೆ ನಿರಂತರವಾಗಿ ಪ್ರಶಂಸಿಸಲ್ಪಟ್ಟಿದೆ. ಮ್ಯಾನುಯಲ್ ಪೆಟ್ರೋಲ್ ನಲ್ಲಿ 20.51 ಕಿ.ಮೀ (ARAI ಪ್ರಮಾಣೀಕೃತ) ಮೈಲೇಜ್, ಆಟೋಮ್ಯಾಟಿಕ್ ಪೆಟ್ರೋಲ್ ನಲ್ಲಿ 20.3 ಕಿಮೀ ಹಾಗೂ ಮ್ಯಾನುಯಲ್ CNG ನಲ್ಲಿ 26.11 ಕಿಮೀ/ಕೆ.ಜಿ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಎರ್ಟಿಗಾ ಒಂದು MPV ಆಗಿದ್ದು, ಸಾಕಷ್ಟು ಆಧುನಿಕ ವೈಶಿಷ್ಟ್ಯಗಳನ್ನು ಹಣಕ್ಕೆ ಉತ್ತಮ ಮೌಲ್ಯದೊಂದಿಗೆ ಸಂಯೋಜಿಸುತ್ತದೆ. ಇದರ ವಿಶಾಲವಾದ ಮತ್ತು ಪ್ರಾಯೋಗಿಕ ಮೂರು-ಸಾಲಿನ ಕ್ಯಾಬಿನ್ ಬಹುಮುಖತೆಯನ್ನು ಒದಗಿಸುತ್ತದೆ, ಬಳಕೆದಾರ ಸ್ನೇಹಿ ಕಾರ್ಯಕ್ಷಮತೆ ಮತ್ತು CNG ದಕ್ಷತೆಯಿಂದ ಪೂರಕವಾಗಿದೆ. ಏಳು ಆಸನಗಳ ಪ್ಯಾಕೇಜ್ ಅನ್ನು ನೀಡುವುದರಿಂದ ಇದು ಸೌಕರ್ಯ ಮತ್ತು ಕ್ರಿಯಾತ್ಮಕತೆ ಎರಡನ್ನೂ ಬಯಸುವವರಿಗೆ ಸೂಕ್ತ ಆಯ್ಕೆಯಾಗಿದೆ.


Click it and Unblock the Notifications








