BYD: ಚೀನಾ ಕಾರಿಗೆ ಫುಲ್ ಡಿಮ್ಯಾಂಡ್: 5-ಸ್ಟಾರ್ ರೇಟಿಂಗ್... ಭಾರತದಲ್ಲಿ ಬೆಲೆಯೆಷ್ಟು?
ಭಾರತದಲ್ಲಿ ಚೀನಾ ಮೂಲದ ಪ್ರಮುಖ ಕಂಪನಿಯೊಂದು ಭಾರೀ ಸದ್ದು ಮಾಡುತ್ತಿದೆ. ಹೌದು, ಕೇವಲ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ತಯಾರಿಸಿ ಮಾರಾಟ ಮಾಡುವ ಚೀನಾದ ಪ್ರಮುಖ ಕಾರು ತಯಾರಕ ಕಂಪನಿ 'ಬಿವೈಡಿ' (BYD) ಪ್ರಸ್ತುತ ಜಾಗತಿಕವಾಗಿ ಸುದ್ದಿಯಲ್ಲಿದೆ. ಚೀನಾ ವಸ್ತುಗಳು ಎಂದಾಕ್ಷಣ ಡಮ್ಮಿ ಎಂದುಕೊಳ್ಳುವ ಭಾರತೀಯರಿಗೆ ಅದು ತಪ್ಪು ಕಲ್ಪನೆ ಎಂದು ನಿರೂಪಿಸಿದೆ. ಬಿವೈಡಿ ಕಂಪನಿಯು ತನ್ನ ಸೀಲಿಯನ್-7 ಕಾರನ್ನು ಭಾರತ್ ಮೊಬಿಲಿಟಿ ಎಕ್ಸ್ ಪೋ 2025 ರಲ್ಲಿ ಪ್ರದರ್ಶಿಸಿತ್ತು, ನಂತರ ಇದೇ ವರ್ಷದ ಫೆಬ್ರವರಿಯಲ್ಲಿ ಭಾರತದಲ್ಲಿ ಈ ಕಾರನ್ನು 48.90 ಲಕ್ಷ ರೂ.ಗಳ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿತು.
ಈ ಎಲೆಕ್ಟ್ರಿಕ್ ಕ್ರಾಸ್ಒವರ್ ಅನ್ನು ಇತ್ತೀಚೆಗೆ ಯುರೋ ಎನ್‌ಸಿಎಪಿಯಲ್ಲಿ ಕ್ರ್ಯಾಶ್ ಟೆಸ್ಟ್ ಮಾಡಲಾಗಿದ್ದು, ಪರಿಪೂರ್ಣ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಇದು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ಶೇಕಡಾ 87 ರಷ್ಟು ಮತ್ತು ಮಕ್ಕಳ ಪ್ರಯಾಣಿಕರ ಸುರಕ್ಷತೆಯಲ್ಲಿ ಶೇಕಡಾ 93 ರಷ್ಟು ಸುರಕ್ಷತೆಯನ್ನು ಗಳಿಸಿ ಎಲ್ಲರನ್ನು ಅಚ್ಚರಿಗೊಳಿಸಿದೆ.

ಬಿವೈಡಿಯ ಸೀಲಿಯನ್ 7 ಹಲವಾರು ಪ್ರಭಾವಶಾಲಿ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇತರ ಅನೇಕ ಕಾರುಗಳಿಗಿಂತ ಭಿನ್ನವಾಗಿ, ಈ ಕಾರಿನಲ್ಲಿ 11 ಏರ್ ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಬಿವೈಡಿ ಸೀಲಿಯನ್ 7 ಎಲೆಕ್ಟ್ರಿಕ್ ಎಸ್‌ಯುವಿ ಪ್ರೀಮಿಯಂ ಮತ್ತು ಪರ್ಫಾಮೆನ್ಸ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಪ್ರೀಮಿಯಂ ಮಾದರಿಯ ಬೆಲೆಯು ರೂ.48.90 ಲಕ್ಷಗಳಾದರೆ, ಪರ್ಫಾಮೆನ್ಸ್ ಮಾದರಿಯ ಬೆಲೆಯು ರೂ.54.90 ಲಕ್ಷಗಳಾಗಿದೆ. (ಎಕ್ಸ್ ಶೋರೂಂ)
ಪ್ರೀಮಿಯಂ ವೇರಿಯೆಂಟ್ ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 567 ಕಿ.ಮೀ ಓಡಿಸಬಹುದು, ಹಾಗೆಯೇ ಪರ್ಫಾಮೆನ್ಸ್ ವೇರಿಯೆಂಟ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ 542 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ಹೆಳಿಕೊಂಡಿದೆ. ಈ ಕಾರು 11 ಏರ್ ಬ್ಯಾಗ್‌ಗಳು ಮತ್ತು ಲೆವೆಲ್ 2 ADAS ಸೂಟ್ ನೊಂದಿಗೆ ಬರುತ್ತದೆ. ಆಟೋಮ್ಯಾಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಇದೆ.

ಹೊಸ ಬಿವೈಡಿ ಸೀಲಿಯನ್ 7 ಎಲೆಕ್ಟ್ರಿಕ್ ಎಸ್‍ಯುವಿ ಕ್ಯಾಬಿನ್ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು 10.25-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 15.6-ಇಂಚಿನ ತಿರುಗುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ನ್ಯಾಪಾ ಲೆದರ್ ಅಪ್ ಹೋಲ್ಸ್ಟರಿ ಮತ್ತು 12 ಸ್ಪೀಕರ್ ಆಡಿಯೊ ಸಿಸ್ಟಂ ಅನ್ನು ಅಳವಡಿಸಲಾಗಿದೆ.
ಇವಿಷ್ಟೇ ಅಲ್ಲದೆ, ಈ ಕಾರಿನಲ್ಲಿ ಪನರೊಮಿಕ್ ಸನ್‌ರೂಫ್, ಹಿಟೀಂಗ್ ಮತ್ತು ವಿಟಿಲಿಷನ್ ನೊಂದಿಗೆ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು, ಡ್ಯುಯಲ್ ಝೋನ್ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಹೆಡ್ - ಅಪ್ ಡಿಸ್ ಪ್ಲೇ ಮತ್ತು ADAS ಸೂಟ್ ಅನ್ನು ಹೊಂದಿದೆ.

ಪ್ರೀಮಿಯಂ ವೇರಿಯೆಂಟ್ ಸಿಂಗಲ್ ಎಲೆಕ್ಟ್ರಿಕ್ ಮೋಟರ್, ರಿಯರ್ ವೀಲ್ ಡ್ರೈವ್ (ಆರ್ ಡಬ್ಲ್ಯುಡಿ) ಸೆಟಪ್, 308 ಬಿಹೆಚ್ ಪವರ್ ಮತ್ತು 380 ಎನ್ಎಂ ಟಾರ್ಕ್ ಅನ್ನು ಹೊಂದಿದೆ. ಪರ್ಫಾಮೆನ್ಸ್ ವೇರಿಯೆಂಟ್ ಆಲ್ ವ್ಹೀಲ್ ಡ್ರೈವ್ (ಎಡಬ್ಲ್ಯುಡಿ) ಸಿಸ್ಟಂ ಹೊಂದಿದ್ದು, 523 ಬಿಹೆಚ್ ಪವರ್ ಮತ್ತು 690 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








