Maruti Suzuki: ಹೊಸ ದರ ಪಟ್ಟಿ.. 3.50 ಲಕ್ಷ ರೂಪಾಯಿಗೆ ಹೊಸ ಕಾರು, ಯಾವುದಕ್ಕೆ ಎಷ್ಟು?

ಇಂದಿನಿಂದ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಅಧಿಕೃತವಾಗಿ ಜಾರಿಗೆ ಬರಲಿವೆ. ಇದರ ಸಂಪೂರ್ಣ ಲಾಭವನ್ನು ಮಾರುತಿ ಸುಜುಕಿ ಇಂಡಿಯಾ (Maruti Suzuki India) ತನ್ನ ಗ್ರಾಹಕರಿಗೆ ವರ್ಗಾಯಿಸುತ್ತಿದೆ. ವಿಶೇಷವಾಗಿ ಅರೆನಾ ಡೀಲರ್‌ಶಿಪ್‌ ಮಾರಾಟಗೊಳ್ಳುವ ವಿವಿಧ ಕಾರುಗಳ ಬೆಲೆಯನ್ನು ರೂ.46,400 ರಿಂದ ರೂ.1.29 ಲಕ್ಷವರೆಗೆ ಇಳಿಸಿದೆ. ಬನ್ನಿ, ಯಾವ ಕಾರು ಎಷ್ಟು 'ಎಕ್ಸ್-ಶೋರೂಂ' ಬೆಲೆಯನ್ನು ಹೊಂದಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ:

ಇದು ಹ್ಯಾಚ್‌ಬ್ಯಾಕ್ ಆಗಿದೆ. ರೂ.1.29 ಲಕ್ಷವರೆಗೆ ದರ ಇಳಿಕೆಯಾಗಿದ್ದು, ಕನಿಷ್ಠ ರೂ.3.50 ಲಕ್ಷ ಹಾಗೂ ಗರಿಷ್ಠ ರೂ.5.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1-ಲೀಟರ್ ಪೆಟ್ರೋಲ್ ಮತ್ತು 1-ಲೀಟರ್ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. 24 ರಿಂದ 33 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 5-ಆಸನಗಳನ್ನು ಹೊಂದಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

Maruti Suzuki Arena Models New Price List S-Presso Alto K10 Swift Dzire Brezza To Ertiga

ಮಾರುತಿ ಸುಜುಕಿ ಆಲ್ಟೊ ಕೆ10:

ಈ ಹ್ಯಾಚ್‌ಬ್ಯಾಕ್‌ನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ರೂ.1.07 ಲಕ್ಷವರೆಗೆ ಬೆಲೆ ಕಡಿಮೆಯಾಗಿದೆ. ರೂ.3.70 ಲಕ್ಷದಿಂದ ರೂ.5.45 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 24 ರಿಂದ 34 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5-ಆಸನಗಳನ್ನು ಹೊಂದಿದೆ.

ಮಾರುತಿ ಸುಜುಕಿ ಸೆಲೆರಿಯೊ:

ಇದು ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್‌ ಆಗಿದೆ. ರೂ.94,100 ವರೆಗೆ ದರ ಇಳಿಮುಖವಾಗಿದೆ. ಕನಿಷ್ಠ ರೂ.4.70 ಲಕ್ಷ ಮತ್ತು ಗರಿಷ್ಠ ರೂ.6.73 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 24 ರಿಂದ 34 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5-ಆಸನಗಳನ್ನು ಹೊಂದಿದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಕಾರಿನ ಹೆಸರು ಹೊಸ ಎಕ್ಸ್-ಶೋರೂಂ ದರ
ಎಸ್-ಪ್ರೆಸ್ಸೊ ರೂ.3.50 ಲಕ್ಷದಿಂದ ರೂ.5.25 ಲಕ್ಷ
ಆಲ್ಟೊ ಕೆ10 ರೂ.3.70 ಲಕ್ಷದಿಂದ ರೂ.5.45 ಲಕ್ಷ
ಸೆಲೆರಿಯೊ ರೂ.4.70 ಲಕ್ಷದಿಂದ ರೂ.6.73 ಲಕ್ಷ
ವ್ಯಾಗನ್ಆರ್ ರೂ.4.99 ಲಕ್ಷದಿಂದ ರೂ.6.84 ಲಕ್ಷ
ಸ್ವಿಫ್ಟ್ ರೂ.5.79 ಲಕ್ಷದಿಂದ ರೂ.8.80 ಲಕ್ಷ
ಡಿಜೈರ್ ರೂ.6.25 ಲಕ್ಷದಿಂದ ರೂ.9.32 ಲಕ್ಷ
ಬ್ರೆಝಾ ರೂ.5.79 ಲಕ್ಷದಿಂದ ರೂ.8.80 ಲಕ್ಷ
ಎರ್ಟಿಗಾ

ರೂ.8.80 ಲಕ್ಷದಿಂದ ರೂ.12.94 ಲಕ್ಷ

ಮಾರುತಿ ಸುಜುಕಿ ವ್ಯಾಗನ್ಆರ್:

ಈ ಹ್ಯಾಚ್‌ಬ್ಯಾಕ್‌ನ ಬೆಲೆಯು ರೂ.79,600 ವರೆಗೆ ಕಡಿಮೆಯಾಗಿದೆ. ರೂ.4.99 ಲಕ್ಷದಿಂದ ರೂ.6.84 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.2-ಲೀಟರ್ ಪೆಟ್ರೋಲ್ ಹಾಗೂ 1-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 23 ರಿಂದ 34 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 5-ಆಸನಗಳನ್ನು ತನ್ನದಾಗಿಸಿಕೊಂಡಿದೆ.

Maruti Suzuki Arena Models New Price List S-Presso Alto K10 Swift Dzire Brezza To Ertiga

ಮಾರುತಿ ಸುಜುಕಿ ಸ್ವಿಫ್ಟ್:

ಇದು ಹ್ಯಾಚ್‌ಬ್ಯಾಕ್‌ ಆಗಿದೆ. ರೂ.84,600 ದರ ಇಳಿಕೆಯಾಗಿದೆ. ಕನಿಷ್ಠ ರೂ.5.79 ಲಕ್ಷ ಹಾಗೂ ಗರಿಷ್ಠ ರೂ.8.80 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 24 ರಿಂದ 32.85 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5-ಆಸನಗಳನ್ನು ಪಡೆದಿದೆ. 9 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಮಾರುತಿ ಸುಜುಕಿ ಡಿಜೈರ್:

ಈ ಸೆಡಾನ್ ದರವು ರೂ.87,700 ವರೆಗೆ ಕಡಿಮೆಯಾಗಿದೆ. ರೂ.6.25 ಲಕ್ಷದಿಂದ ರೂ.9.32 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀಟರ್ ಪೆಟ್ರೋಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 24 ರಿಂದ 33 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 5-ಆಸನಗಳನ್ನು ತನ್ನದಾಗಿಸಿಕೊಂಡಿದೆ.

Maruti Suzuki Arena Models New Price List S-Presso Alto K10 Swift Dzire Brezza To Ertiga

ಮಾರುತಿ ಸುಜುಕಿ ಬ್ರೆಝಾ:

ಇದು ಎಸ್‌ಯುವಿಯಾಗಿದ್ದು, ರೂ.1.13 ಲಕ್ಷವರೆಗೆ ಬೆಲೆ ಇಳಿಕೆಯಾಗಿದೆ. ಕನಿಷ್ಠ ರೂ.8 26 ಲಕ್ಷ ಮತ್ತು ಗರಿಷ್ಠ ರೂ.12 86 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಮೈಲ್ಡ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಹಾಗೂ 1.5-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 17 ರಿಂದ 25.51 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಎರ್ಟಿಗಾ & ಇಕೋ:

ಎರ್ಟಿಗಾ ಪ್ರಮುಖ ಎಂಪಿವಿಯಾಗಿದೆ. ರೂ.46,400 ವರೆಗೆ ದರ ಕಡಿಮೆಯಾಗಿದೆ. ರೂ.8.80 ಲಕ್ಷದಿಂದ ರೂ.12.94 ಲಕ್ಷ ಬೆಲೆಯನ್ನು ಒಳಗೊಂಡಿದೆ. ಇಕೋ ಕೂಡ ಸಣ್ಣ ಗಾತ್ರದ ಎಂಪಿವಿಯಾಗಿದೆ. ರೂ.68,000 ವರೆಗೆ ದರ ಇಳಿಕೆಯಾಗಿದೆ. ಕನಿಷ್ಠ ರೂ.5.21 ಹಾಗೂ ಗರಿಷ್ಠ ರೂ.6.36 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.

More from DriveSpark

Article Published On: Monday, September 22, 2025, 16:30 [IST]
English summary
Maruti suzuki arena models new price list s presso alto k10 swift dzire brezza to ertiga
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+