ಮಾರುತಿಯ ನಂ.1 SUV: ಜನಮನ ಗೆದ್ದಿದೆ... ಫುಲ್ ಡಿಮ್ಯಾಂಡ್: 14 ಸಾವಿರ ಕಾರುಗಳು ಉಡೀಸ್

2025 ರಲ್ಲಿ ಮಾರುತಿ ಬ್ರೆಝಾ ತನ್ನ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ SUV ಆಗಿ ಗುರ್ತಿಸಿಕೊಂಡಿದೆ. ವಿಶೇಷವಾಗಿ ಜುಲೈ 2025 ರಲ್ಲಿ 14,065 ಯುನಿಟ್‌ ಕಾರುಗಳ ಮಾರಾಟದೊಂದಿಗೆ ಪ್ರಾಬಲ್ಯ ಸಾಧಿಸಿದೆ. ಭಾರತದಲ್ಲಿ ಇದರ ದೀರ್ಘಕಾಲದ ಉಪಸ್ಥಿತಿ ಮತ್ತು ಟೈಯರ್ 2 ಹಾಗೂ ಟೈಯರ್ 3 ನಗರಗಳಲ್ಲಿ ಮಾರುತಿಯ ಬಲವಾದ ಬ್ರ್ಯಾಂಡ್ ಪರಿಚಿತತೆಯು ಈ ಜನಪ್ರಿಯತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ. ಖರೀದಿದಾರರು ಬ್ರೆಝಾವನ್ನು ಅದರ ವಿಶಾಲತೆ, ಪ್ರಾಯೋಗಿಕತೆ, ಹೆಚ್ಚಿನ ಮೈಲೇಜ್, ವಿಶ್ವಾಸಾರ್ಹತೆ ಮತ್ತು ಹೆಚ್ಚಿನ ಮರುಮಾರಾಟ ಮೌಲ್ಯ ಹೊಂದಿರುವುದರಿಂದ ಹೆಚ್ಚಾಗಿ ಖರೀದಿಸುತ್ತಿದ್ದಾರೆ.

ಹೆಚ್ಚುವರಿಯಾಗಿ, ಬ್ರೆಝಾ CNG ವೇರಿಯೆಂಟ್‌ಗಳಲ್ಲಿಯೂ ಲಭ್ಯವಾಗುತ್ತಿರುವುದರಿಂದ ಗ್ರಾಹಕರು ಮುಗಿಬಿದ್ದು ಕರೀದಿಸುತ್ತಿದ್ದಾರೆ. ಇದು ಟಾಟಾ ನೆಕ್ಸಾನ್‌ನಂತಹ ಸ್ಪರ್ಧಿಗಳಿಗೆ ಹೋಲಿಸಿದರೆ ಹೆಚ್ಚು ಕೈಗೆಟುಕುವ ಕಾರಾಗಿದೆ. ಬ್ರೆಝಾ ಬಿಡುಗಡೆಯಾದಾಗಿನಿಂದ ಭಾರತದಲ್ಲಿ 1.24 ಮಿಲಿಯನ್ ಯೂನಿಟ್‌ ಕಾರುಗಳಿಗಿಂತ ಹೆಚ್ಚು ಮಾರಾಟವಾಗಿದೆ ಎಂದು ವರದಿಯಾಗಿದೆ.

maruti-suzuki-brezza-july-2025-sales-report

ಇದರ ಯಶಸ್ಸಿನ ಹಿಂದಿನ ಪ್ರಮುಖ ಅಂಶಗಳು

ಬೆಲೆಯು ಕೇವಲ ರೂ. 8.69 ಲಕ್ಷದಿಂದ ರೂ. 14.14 ಲಕ್ಷ (ಎಕ್ಸ್‌ ಶೋರೂಂ) ಇದೆ. ಹೆಚ್ಚಿನ ಇಂಧನ ದಕ್ಷತೆ (ಪೆಟ್ರೋಲ್‌ನಲ್ಲಿ ಸುಮಾರು 19.8 ಕಿ.ಮೀ ಮತ್ತು ಸಿಎನ್‌ಜಿಯಲ್ಲಿ ಸುಮಾರು 25 ಕಿ.ಮೀ/ಕೆಜಿ) ಇರುವುದರಿಂದ ಮೈಲೇಜ್ ವಿಷಯದಲ್ಲೂ ಈ ಎಸ್‌ಯುವಿ ಭಾರತದಲ್ಲಿ ಮಿಡಿಲ್ ಕ್ಲಾಸ್ ಕುಟುಂಬಗಳ ಫೇವರೆಟ್ ಆಯ್ಕೆಯಾಗಿದೆ. ಹಾಗೆಯೇ ಮಾರುತಿಯ ವ್ಯಾಪಕ ಸೇವಾ ಜಾಲ ಮತ್ತು ಮಾರಾಟದ ನಂತರದ ಸೇವೆಯು ಗ್ರಾಹಕರ ವಿಶ್ವಾಸಾರ್ಹತೆ ಗಳಿಸಿದೆ.

ಮಾರುತಿ ಬ್ರೆಝಾ ಡ್ಯುಯಲ್ ಟೋನ್ ಒಳಾಂಗಣದಲ್ಲಿ 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ನಿಡಲಾಗಿದ್ದು, ಇದು ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಅನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೆ, ಇದು ಪ್ರೀಮಿಯಂ 6-ಸ್ಪೀಕರ್ ಆಡಿಯೊ ಸಿಸ್ಟಮ್, ಎಲೆಕ್ಟ್ರಿಕ್ ಸನ್ ರೂಫ್, ಕ್ರೂಸ್ ಕಂಟ್ರೋಲ್ ಮತ್ತು ವೈರ್ ಲೆಸ್ ಫೋನ್ ಚಾರ್ಜಿಂಗ್ ನಂತಹ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.

maruti-suzuki-brezza-july-2025-sales-report

ಹಾಗೆಯೇ ಹಿಂಭಾಗದ ಎಸಿ ವೆಂಟ್‌ಗಳು, ಹೆಡ್ಸ್-ಅಪ್ ಡಿಸ್ ಪ್ಲೇ, ಫಾಸ್ಟ್ ಚಾರ್ಜಿಂಗ್ ಯುಎಸ್‌ಬಿ ಪೋರ್ಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಮತ್ತು ಕೂಲ್ಡ್ ಗ್ಲೋವ್ ಬಾಕ್ಸ್ ನಂತಹ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಸಹ ಇದರಲ್ಲಿ ನೀಡಲಾಗಿದೆ. ಇವಿಷ್ಟೇ ಅಲ್ಲದೇ ಸುರಕ್ಷತೆಗಾಗಿ ಎಲ್ಲಾ ವೇರಿಯೆಂಟ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತಗೊಳಿಸಲಾಗಿದೆ.

ಮೊದಲೇ ಹೇಳಿದಂತೆ ಮಾರುತಿ ಬ್ರೆಝಾ ಎಸ್‌ಯುವಿ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಲಭ್ಯವಿದೆ. ಇದರ 1.5 ಲೀಟರಿನ ಕೆ-ಸೀರಿಸ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ 101.6 ಬಿಹೆಚ್ ಪವರ್ ಹಾಗೂ 136.8 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳನ್ನು ಹೊಂದಿದೆ.

maruti-suzuki-brezza-july-2025-sales-report

ಒಟ್ಟಾರೆ 2025 ರ ಮಧ್ಯಭಾಗದ ವೇಳೆಗೆ ಶೇ25 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿರುವ ಸಬ್-4-ಮೀಟರ್ SUV ವಿಭಾಗದಲ್ಲಿ ಈ ಕಾರು ಮುಂಚೂಣಿಯಲ್ಲಿದೆ. ಕೈಗೆಟುಕುವ ಬೆಲೆ, ಆರ್ಥಿಕ ಚಾಲನಾ ವೆಚ್ಚಗಳು, ವೈಶಿಷ್ಟ್ಯ-ಭರಿತ ಕೊಡುಗೆ ಮತ್ತು ಮಾರುತಿಯ ಬ್ರ್ಯಾಂಡ್ ಬಲದ ಸಂಯೋಜನೆಯು ಭಾರತದಲ್ಲಿ ತನ್ನ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ SUV ಆಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, August 24, 2025, 10:30 [IST]
English summary
Maruti suzuki brezza july 2025 sales report
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+