5-ಸೀಟರ್.. 34 ಕಿ.ಮೀ ಮೈಲೇಜ್, 5.60 ಲಕ್ಷ.. ಈ ಜನಪ್ರಿಯ ಕಾರು 2,000 ಗ್ರಾಹಕರಿಂದ ಖರೀದಿ.. ಆದ್ರೂ ಸೇಲ್ಸ್ ಕುಸಿತ!
ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಇದು ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ನಗರ ಸಂಚಾರಕ್ಕೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಈ ಜೂನ್ ತಿಂಗಳು ಒಟ್ಟು 2038 ಯುನಿಟ್ ಸೆಲೆರಿಯೊ ಕಾರುಗಳನ್ನು ಮಾರಾಟ ಮಾಡಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 31.73% ಕುಸಿತವಾಗಿದೆ. 2024 ಇದೇ ಅವಧಿಯಲ್ಲಿ 2,985 ಯುನಿಟ್‌ಗಳನ್ನು ಮಾರಲಾಗಿದೆ.
ಈ ವರ್ಷದ ಮೊದಲ 5 ತಿಂಗಳಲ್ಲೂ ಮಾರುತಿ ಸುಜುಕಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಹಾವು - ಏಣಿ ಆಟ ಮುಂದುವರಿದಿದೆ. ಬರೋಬ್ಬರಿ 11,783 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ, ಪ್ರತಿ ತಿಂಗಳು 2,300 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

ಮಾರುತಿ ಸುಜುಕಿ ಸೆಲೆರಿಯೊ ವಿಶೇಷತೆಗಳೇನು:
ಈ ಹ್ಯಾಚ್‌ಬ್ಯಾಕ್ ಅತಿ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಮಧ್ಯಮ ಹಾಗೂ ಶ್ರೀಮಂತ ಗ್ರಾಹಕರು ಸುಲಭವಾಗಿ ಮನೆಗೆ ತರಬಹುದು. ರೂ.5.64 ಲಕ್ಷದಿಂದ ರೂ.7.37 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ವಿಎಕ್ಸ್ಐ, ಎಲ್ಎಕ್ಸ್ಐ ಮತ್ತು ಝಡ್ಎಕ್ಸ್ಐ ಎಂಬ ರೂಪಾಂತರಗಳೊಂದಿಗೂ (ವೇರಿಯೆಂಟ್) ದೊರೆಯುತ್ತದೆ.
ನೂತನ ಸೆಲೆರಿಯೊ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಸೆಳೆಯುವಂತಿದೆ. ಗ್ಲಿಸ್ಟೆನಿಂಗ್ ಗ್ರೇ, ಆರ್ಕ್ಟಿಕ್ ವೈಟ್, ಸಿಲ್ಕಿ ಸಿಲ್ವರ್, ಸಾಲಿಡ್ ಫೈರ್ ರೆಡ್ ಹಾಗೂ ಕೆಫೀನ್ ಬ್ರೌನ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಇದು 3,695 ಎಂಎಂ ಉದ್ದ, 1,655 ಅಗಲ & 1,555 ಎಂಎಂ ಎತ್ತರವು ಇದೆ. ಜೊತೆಗೆ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,435 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

ಈ ಕಾರು ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. 1-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲದ ರೀತಿಯಲ್ಲಿ 24 ರಿಂದ 34 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.
ಇದು 5 ಆಸನಗಳನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಜಾಸ್ತಿ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 313 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ಹಾಗೆಯೇ 32 ಲೀಟರ್‌ನ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ.

ಹೊಸ ಸೆಲೆರಿಯೊದ ಕ್ಯಾಬಿನ್ ಕೂಡ ತುಂಬಾ ಚೆನ್ನಾಗಿದೆ. 7-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಅಡ್ಜಸ್ಟಬಲ್ ಹೆಡ್‌ರೆಸ್ಟ್‌ಗಳು, ಸೆಂಟ್ರಲ್ ಆರ್ಮ್‌ರೆಸ್ಟ್, ರೇರ್ ಎಸಿ ವೆಂಟ್‌ಗಳು, ಕೀಲೆಸ್ ಎಂಟ್ರಿ, ಐಡಲ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಪವರ್ ವಿಂಡೋಗಳು, ಏರ್ ಕಂಡಿಷನರ್, ಸೆಂಟ್ರಲ್ ಲಾಕಿಂಗ್ ಹಾಗೂ ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಹೋಲ್ಡ್ ಅಸಿಸ್ಟ್, ರೇರ್ ಮಿಡಲ್ 3 ಪಾಯಿಂಟ್ ಸೀಟ್‌ಬೆಲ್ಟ್, ಸೀಟ್ ಬೆಲ್ಟ್ ವಾರ್ನಿಂಗ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್‌ಗಳು, ಚೈಲ್ಡ್ ಸೇಫ್ಟಿ ಲಾಕ್‌ಗಳು, ಎಂಜಿನ್ ಇಮೊಬಿಲೈಸರ್ & ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿದೆ.


Click it and Unblock the Notifications