ಮರ್ಸಿಡಿಸ್-ಬೆಂಜ್ ಇಕ್ಯೂಎಸ್ ಎಲೆಕ್ಟ್ರಿಕ್ ಕಾರು ಮತ್ತಷ್ಟು ಅಗ್ಗ: 821 Km ಓಡುತ್ತೆ, 5-ಸೀಟರ್ ಆಯ್ಕೆಯಲ್ಲಿ ಬಿಡುಗಡೆ
ಜರ್ಮನಿ ಮೂಲದ ಮರ್ಸಿಡಿಸ್-ಬೆಂಜ್ (Mercedes-Benz) ದುಬಾರಿ ಬೆಲೆಯ ಐಷಾರಾಮಿ ಕಾರು ತಯಾರಿಕೆಗೆ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಇಕ್ಯೂಎಸ್ 450 (5-ಸೀಟರ್) ಹಾಗೂ ಜಿ-ಕ್ಲಾಸ್ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವುದರೊಂದಿಗೆ ಹೊಸ ವರ್ಷವನ್ನು ಶುಭಾರಂಭ ಮಾಡಿದೆ. ನಾವಿಲ್ಲಿ ನೂತನ 'ಇಕ್ಯೂಎಸ್ 450' ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ ಎಷ್ಟು.. ವಿನ್ಯಾಸ ಹೇಗಿದೆ.. ವೈಶಿಷ್ಟ್ಯಗಳೇನು ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.
ನೂತನ ಮರ್ಸಿಡಿಸ್-ಬೆಂಜ್ ಇಕ್ಯೂಎಸ್ 450 (Mercedes-Benz EQS 450) ಎಲೆಕ್ಟ್ರಿಕ್ ಕಾರು ಮತ್ತಷ್ಟು ಕೈಗೆಟುಕುವ ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. 7-ಸೀಟರ್ ಹೊಂದಿದ್ದ ಇಕ್ಯೂಎಸ್ 580 (EQS 580) ರೂ.1.42 ಕೋಟಿ ಬೆಲೆಯನ್ನು ಪಡೆದಿದೆ. ಅದಕ್ಕೆ ಹೋಲಿಕೆ ಮಾಡಿದರೆ, 5-ಸೀಟರ್ ಒಳಗೊಂಡಿರುವ ಈ ಕಾರು, ರೂ.1.28 ಕೋಟಿ (ಎಕ್ಸ್ - ಶೋರೂಂ) ದರವನ್ನು ಹೊಂದಿದೆ.

ಈ ಹೊಚ್ಚ ಹೊಸ ಮರ್ಸಿಡಿಸ್-ಬೆಂಜ್ ಇಕ್ಯೂಎಸ್ 450 ಎಲೆಕ್ಟ್ರಿಕ್ ಎಸ್‌ಯುವಿ, ಹೊರ ಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಆದರೆ, ಬಹುತೇಕ 'ಇಕ್ಯೂಎಸ್ 580' ಕಾರಿನಂತೆಯೇ ಇದೆ. ಕ್ಲೋಸ್ಡ್-ಆಫ್ ಗ್ರಿಲ್, ದೊಡ್ಡದಾದ 'ಮರ್ಸಿಡಿಸ್-ಬೆಂಜ್' ಲೋಗೋ, ಆಕರ್ಷಕವಾದ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ಫೆಂಡರ್‌ನಲ್ಲಿ ಚಾರ್ಜಿಂಗ್ ಫ್ಲಾಪ್ ಹಾಗೂ ಕನೆಕ್ಟ್ಡ್ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.
ನೂತನ ಕಾರಿನ ಕ್ಯಾಬಿನ್ ಒಳಭಾಗವು ಸಾಕಷ್ಟು ಉತ್ತಮವಾಗಿದೆ. ಇದು 17.7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕೋ-ಡ್ರೈವರ್‌ಗಾಗಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್‌ಪ್ಲೇ, ಮಲ್ಟಿ ಕಲರ್ ಆಂಬಿಯೆಂಟ್ ಲೈಟಿಂಗ್, ಮಲ್ಟಿಪಲ್ ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಮರ್ಸಿಡಿಸ್-ಬೆಂಜ್ ಇಕ್ಯೂಎಸ್ 450 ಎಲೆಕ್ಟ್ರಿಕ್ ಎಸ್‌ಯುವಿ, 122 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 821 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ದೂರದ ಊರುಗಳಿಗೆ ತೆರಳಬಹುದು.
ಈ ಕಾರಿನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 360 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 809 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಇದು ಕೇವಲ 6 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಜೊತೆಗೆ ಆಲ್-ವೀಲ್-ಡ್ರೈವ್ (ಎಡಬ್ಲ್ಯೂಡಿ) ಟೆಕ್ನಾಲಜಿಯನ್ನು ಒಳಗೊಂಡಿದೆ.
7-ಸೀಟರ್ ಮರ್ಸಿಡಿಸ್-ಬೆಂಜ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಎಸ್‌ಯುವಿ ವಿಶೇಷತೆ ಬಗ್ಗೆ ಹೇಳುವುದಾದರೆ, ಇದು 122 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 809 ಕಿಲೋಮೀಟರ್ ಓಡುತ್ತದೆ. ಇದರಲ್ಲಿ ಉಪಯೋಗಿಸರುವ ಎಲೆಕ್ಟ್ರಿಕ್ ಮೋಟಾರ್, 544 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 858 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








