ಎಂಜಿ M9 ಲಿಮೋಸಿನ್ ಕಾರಿನ ಬುಕಿಂಗ್ ಪ್ರಾರಂಭ: ಇನ್ನೋವಾಗೆ ಸೆಡ್ಡು... ದೈತ್ಯ ಫ್ಯಾಮಿಲಿ ಕಾರಿದು!

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2025 ರಲ್ಲಿ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ತನ್ನ ಜನಪ್ರಿಯ ಎಂ9 ಅನ್ನು ಲಿಮೋಸಿನ್ ಕಾರಿನ್ನು ಭಾರತದಲ್ಲಿ ಪ್ರಸ್ತುತಪಡಿಸಲಾಗಿತ್ತು. ಇದೀಗ ಈ ಕಾರನ್ನು ರಸ್ತೆಗೆ ಇಳಿಸುವ ಸಮಯ ಬಂದಿದೆ. ಎಂಜಿ ಮೋಟಾರ್ ಎಂ 9 ಎಲೆಕ್ಟ್ರಿಕ್ ಎಂಪಿವಿಯನ್ನು ಶೀಘ್ರದಲ್ಲೆ ಬಿಡುಗಡೆ ಮಾಡಲಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎಂ9 ಎಲೆಕ್ಟ್ರಿಕ್ ಲಿಮೋಸಿನ್ ಕಾರಿನ ಬುಕಿಂಗ್ ಅಧಿಕೃತವಾಗಿ ಈಗ ಪ್ರಾರಂಭಿಸಿದೆ. ರೂ. 51,000 ಟೋಕನ್ ಮೊತ್ತವನ್ನು ಪಾವತಿಸಿ ಕಾರನ್ನು ಬುಕ್ ಮಾಡಿಕೊಳ್ಳಬಹುದು.

ವಿಶೇಷತೆಗಳು: ಎಂಜಿ ಎಂ 9 ಎಲೆಕ್ಟ್ರಿಕ್ ಎಂಪಿವಿಯ ಒಳಾಂಗಣವನ್ನು ಐಷಾರಾಮಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಎರಡನೇ ಸಾಲಿನಲ್ಲಿ ಒಟ್ಟೋಮನ್ ಸೀಟುಗಳನ್ನು ಒಳಗೊಂಡಿದೆ. ಈ ಆಸನಗಳು ತಂಪಾಗಿಸುವಿಕೆ ಮತ್ತು ಮಸಾಜ್ ಆಯ್ಕೆಗಳು, 3 - ಝೋನ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಮ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದಿವೆ.

mg-m9-limousine-bookings-opened-in-india-at-rs-51k

ಇವೆಲ್ಲವನ್ನು ಹ್ಯಾಂಡ್‌ರೈಲ್‌ನಲ್ಲಿರುವ ಟಚ್ಸ್ಕ್ರೀನ್ ಪ್ಯಾನಲ್ ಮೂಲಕ ಕಂಟ್ರೋಲ್ ಮಾಡಬಹುದು. ಇದು ಬಳಕೆದಾರರಿಗೆ ಮಸಾಜ್ ಸೆಟ್ಟಿಂಗ್ ಗಳನ್ನು ಸರಿಹೊಂದಿಸಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ಹಿಂಭಾಗದ ಆಸನಗಳಲ್ಲಿ ವೈಯಕ್ತಿಕ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ಹಾಗೆಯೇ ಎಂಜಿ ಮೋಟಾರ್ ಡ್ಯುಯಲ್ - ಪ್ಯಾನ್ ಸನ್ ರೂಫ್ ಅನ್ನು ಅಳವಡಿಸಿದೆ.

ಮುಂದಿನ ಸಾಲಿನಲ್ಲಿ ಸುವ್ಯವಸ್ಥಿತ ಡ್ಯಾಶ್ಬೋರ್ಡ್ ಇದ್ದು, ಇದು ಇನ್ಫೋಟೈನ್ಮೆಂಟ್ ಮತ್ತು ಚಾಲನಾ ಮಾಹಿತಿಗೆ ಮೀಸಲಾಗಿರುವ ಎರಡು ವಿಭಿನ್ನ ಸ್ಕ್ರೀನ್‌ಗಳನ್ನು ಒಳಗೊಂಡಿದೆ. ಕ್ಲೈಮೆಟ್ ಕಂಟ್ರೋಲ್ ಮತ್ತು ಹೆಚ್ಚುವರಿ ಕಾರ್ಯಗಳನ್ನು ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಕೆಳಗೆ ಇರುವ ಟಚ್ ಬಟನ್‌ಗಳ ಮೂಲಕ ಆಪರೇಟ್ ಮಾಡಬಹುದು. ಎರಡೂ ಮುಂಭಾಗದ ಆಸನಗಳು ವೆಂಟಿಲೇಟೆಡ್ ಮತ್ತು ಎಲೆಕ್ಟ್ರಾನಿಕ್ ಹೊಂದಾಣಿಕೆ ಸಾಮರ್ಥ್ಯಗಳನ್ನು ಹೊಂದಿವೆ.

mg-m9-limousine-bookings-opened-in-india-at-rs-51k

ಎಂಜಿ ಎಂ9 ನ ಎಲೆಕ್ಟ್ರಿಕ್ ಮೋಟಾರು 241 ಬಿಹೆಚ್ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂ9 ಇವಿ ಗರಿಷ್ಠ 180 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಇದು ಗಮನಾರ್ಹ 90 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

11 ಕಿಲೋವ್ಯಾಟ್ ಚಾರ್ಜರ್ ಬಳಸುವ ಮೂಲಕ 8.5 ಗಂಟೆಗಳಲ್ಲಿ ಬ್ಯಾಟರಿಯನ್ನು ಶೇಕಡಾ 5 ರಿಂದ ಶೇ100 ರಷ್ಟು ಸಂಪೂರ್ಣವಾಗಿ ರೀಚಾರ್ಜ್ ಮಾಡಬಹುದು ಎಂದು ಎಂಜಿ ಹೇಳಿದೆ. ಇದಲ್ಲದೆ, ಇದು ಡಿಸಿ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. ಇದರಲ್ಲಿ ಬ್ಯಾಟರಿಯನ್ನು ಕೇವಲ 30 ನಿಮಿಷಗಳಲ್ಲಿ ಶೇಕಡಾ 30 ರಿಂದ 80 ರಷ್ಟು ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ.

mg-m9-limousine-bookings-opened-in-india-at-rs-51k

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಈ ಎಲೆಕ್ಟ್ರಿಕ್ ಲಿಮೋಸಿನ್ ಕಾರನ್ನು ಹೊಸದಾಗಿ ಸ್ಥಾಪಿಸಲಾದ ಎಂಜಿ ಸೆಲೆಕ್ಟ್ ಡೀಲರ್ ಶಿಪ್ ಗಳ ಮೂಲಕ ಖರೀದಿಗೆ ಮಾರಾಟ ಮಾಡುವುದಾಗಿ ಹೇಳಿದೆ. ಇದೇ ಡೀಲರ್‌ಶಿಪ್‌ನಲ್ಲಿ ಎಂಜಿ ಮೋಟಾರ್‌ನ ಹೊಸ ಸೈಬರ್ ಸ್ಟರ್ ಅನ್ನು ಸಹ ಮಾರಾಟ ಮಾಡುವುದಾಗಿ ಕಂಪನಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, May 7, 2025, 10:10 [IST]
English summary
Mg m9 limousine bookings opened in india at rs 51k
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+