430 ಕಿ.ಮೀ ರೇಂಜ್, ರಸ್ತೆ ಮೇಲಿನ ಅರಮನೆಯಂತಿರುವ ಎಂಜಿ ಕಾರು ಬಿರುಗಾಳಿ ಎಬ್ಬಿಸಲು ಸಜ್ಜು

ಎಂಜಿ ಮೋಟಾರ್ ಹೊಸ ಎಲೆಕ್ಟ್ರಿಕ್ ಎಂಪಿವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಭಾಗವಾಗಿ, ಎಂಜಿ ಕಂಪನಿಯು Mifa 9 ಎಂಪಿವಿಯ ಹೊಸ ಟೀಸರ್ ಅನ್ನು ಸಹ ಬಿಡುಗಡೆ ಮಾಡಿದೆ. ಮುಂಬರುವ 2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಎಂಜಿ ಅಡಾರ್ ಮಾದರಿಯನ್ನು ಪರಿಚಯಿಸುತ್ತದೆ ಎಂದು ದೃಢಪಡಿಸಲಾಗಿದೆ. ಬ್ರ್ಯಾಂಡ್‌ನ ಪ್ರೀಮಿಯಂ ನೆಟ್‌ವರ್ಕ್ ಆದ MG ಸೆಲೆಕ್ಟ್ ಅಡಿಯಲ್ಲಿ ಕಾರು ಮಾರಾಟವಾಗಲಿದೆ.

ಈ Mifa ಭಾರತದಲ್ಲಿನ ಐಷಾರಾಮಿ ಎಂಪಿವಿ ವಿಭಾಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲು ಸಜ್ಜಾಗುತ್ತಿದೆ. ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರಾರಂಭವಾದ ನಂತರ, ಅಂತರರಾಷ್ಟ್ರೀಯವಾಗಿ ಮ್ಯಾಕ್ಸಸ್ 9 ಎಂದು ಕರೆಯಲ್ಪಡುವ ಬಹುಪಯೋಗಿ ವಾಹನವು 2025ರ ಮಾರ್ಚ್ ತಿಂಗಳಿನಲ್ಲಿ ಭಾರತದಲ್ಲಿ ಮಾರಾಟವಾಗಲಿದೆ ಎಂದು ವರದಿಯಾಗಿದೆ. ಬೆಲೆಯು ಸುಮಾರು 65 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

MG Mifa 9 Electric MPV

ಈ Mifa 9 ಇತ್ತೀಚೆಗೆ ಬಿಡುಗಡೆಯಾದ ಕಿಯಾ ಕಾರ್ನಿವಲ್ ಎಂಪಿವಿಯಂತಹ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಎಂಜಿ Mifa 9 ಎಂಪಿವಿಯ ಬಗ್ಗೆ ಹೇಳುವುದಾದರೆ, ಇದು ಫುಲ್ ಅಗಲದ ಎಲ್ಇಡಿ ಲೈಟ್ ಬಾರ್, ಕ್ರೋಮ್ ಅಸ್ಸೆಂಟ್ ಮತ್ತು ಲಂಬವಾದ ಡ್ರಾಪ್-ಡೌನ್ ಟೈಲ್ ಲ್ಯಾಂಪ್‌ಗಳೊಂದಿಗೆ ಹೊರಭಾಗವು ನಿಜವಾಗಿಯೂ ಐಷಾರಾಮಿಯಾಗಿದೆ. ಆಕರ್ಷಕ ವಿನ್ಯಾಸದ ಮುಖ್ಯಾಂಶಗಳೊಂದಿಗೆ ಬಾಕ್ಸ್ ಎಂಪಿವಿ ಆಕಾರವನ್ನು ಒಳಗೊಂಡಿದೆ.

5.2 ಮೀಟರ್ ಉದ್ದ, 2 ಮೀಟರ್ ಅಗಲ ಮತ್ತು 1.8 ಮೀಟರ್ ಎತ್ತರವನ್ನು ಹೊಂದಿರುವ ಎಂಜಿ Mifa 9 ಗಾತ್ರದಲ್ಲಿ ಕಿಯಾ ಕಾರ್ನಿವಲ್ ಮತ್ತು ಟೊಯೊಟಾ ವೆಲಾಸಿಟಿಗಿಂತ ದೊಡ್ಡದಾಗಿರುತ್ತದೆ. ಹಾಗಾಗಿ ಪ್ರಯಾಣಿಕರಿಗೆ ಕಾರಿನೊಳಗೆ ದೊಡ್ಡ ಸ್ಪೇಸ್ ಸಿಗುವುದರಲ್ಲಿ ಸಿಗುವುದರಲ್ಲಿ ಸಂಶಯವಿಲ್ಲ. ಸಾಕಷ್ಟು ಆಂತರಿಕ ಸ್ಥಳಾವಕಾಶದೊಂದಿಗೆ, ವಾಹನವನ್ನು 7 ಅಥವಾ 8 ಸೀಟರ್ ಆಯ್ಕೆಗಳಲ್ಲಿ ಬರಬಹುದು.

MG Mifa 9 Electric MPV

ಎಂಜಿ Mifa 9 ಎಂಪಿವಿಯಲ್ಲಿನ ಇತರ ಐಷಾರಾಮಿ ವೈಶಿಷ್ಟ್ಯಗಳು ಮಸಾಜ್ ಫಂಕ್ಷನ್ ಗಳೊಂದಿಗೆ ಚಾಲಿತ ಮುಂಭಾಗ ಮತ್ತು ಹಿಂಭಾಗದ ಸೀಟುಗಳು, ಫೋಲ್ಡ್-ಔಟ್ ಒಟ್ಟೋಮನ್ ಸೀಟುಗಳು, ಚಾಲಿತ ಸ್ಲೈಡಿಂಗ್ ಹಿಂಭಾಗದ ಡೋರುಗಳು, ಫೋಲ್ಡ್-ಔಟ್ ಒಟ್ಟೋಮನ್ ಸೀಟುಗಳು, ಚಾಲಿತ ಸ್ಲೈಡಿಂಗ್ ಹಿಂಭಾಗದ ಡೋರುಗಳು ಮತ್ತು ಟ್ವಿನ್ ಸನ್‌ರೂಫ್‌ಗಳನ್ನು ಒಳಗೊಂಡಿವೆ. ಇದರ ಹೊರತಾಗಿ ವಾಹನದ ಹಿಂಭಾಗದ ಮನರಂಜನಾ ಡಿಸ್ ಪ್ಲೇ, ಪ್ರೀಮಿಯಂ ಆಡಿಯೊ ಸಿಸ್ಟಮ್ ಮತ್ತು ಸುಧಾರಿತ ಸಂಪರ್ಕ ವೈಶಿಷ್ಟ್ಯಗಳೊಂದಿಗೆ ಸಮೃದ್ಧವಾಗಿದೆ.

ಎಂಜಿ Mifa 9 ಎಂಪಿವಿ ಮಾದರಿಯು ಟೊಯೋಟಾ ವೆಲ್‌ಫೈರ್ ಮತ್ತು ಕಿಯಾ ಕಾರ್ನಿವಲ್‌ನಂತೆ ಪೆಟ್ರೋಲ್ ಅಥವಾ ಡೀಸೆಲ್ ಕಾರ್ ಅಲ್ಲ. Mifa 9 ಮಾದರಿಯು ಸಂಪೂರ್ಣ ಎಲೆಕ್ಟ್ರಿಕ್ ಕಾರ್ ಆಗಿದೆ. ಈ Mifa 9 ಮಾದರಿಯು 90 kW ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದ್ದು, ಇದು 245 bhp ಪವರ್ ಮತ್ತು 350 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

MG Mifa 9 Electric MPV

ಈ ಪ್ರೀಮಿಯಂ ಎಲೆಕ್ಟ್ರಿಕ್ ಎಂಪಿವಿಯು ಸಿಂಗಲ್ ಚಾರ್ಜ್‌ನಲ್ಲಿ 430 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಐಷಾರಾಮಿ ಎಲೆಕ್ಟ್ರಿಕ್ ಎಂಪಿವಿಯನ್ನು ಎಂಜಿ ಸೆಲೆಕ್ಟ್ ಅಡಿಯಲ್ಲಿ ಮಾರಾಟ ಮಾಡಲಾಗುವುದು. ಇದು ಎಂಜಿ ಮೋಟಾರ್ ಇಂಡಿಯಾದ ಪ್ರೀಮಿಯಂ ಡೀಲರ್‌ಶಿಪ್ ನೆಟ್‌ವರ್ಕ್. ಈ ಬಹುನಿರೀಕ್ಷಿತ ಎಂಜಿ Mifa 9 ಎಂಪಿವಿಯ ಮಾದರಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 9, 2025, 11:44 [IST]
English summary
Mg mifa 9 electric mpv teased debut at 2025 bharat mobility expo details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+