ಎಂಜಿ ಕಾರುಗಳ ಬೆಲೆ ಇಳಿಕೆ ಘೋಷಣೆ: 3.4 ಲಕ್ಷ ರೂ.ವರೆಗೆ ಕಡಿತ: ಎಸ್‌ಯುವಿಗಳು ಇನ್ನೂ ಅಗ್ಗ!

ಜನಪ್ರಿಯ ಕಾರು ತಯಾರಕರಾದ ಎಂಜಿ ಮೋಟಾರ್, ಇಂದು ಆಸ್ಟರ್, ಹೆಕ್ಟರ್ ಮತ್ತು ಗ್ಲೋಸ್ಟರ್ ಸೇರಿದಂತೆ ತನ್ನ ಸಂಪೂರ್ಣ ಎಸ್‌ಯುವಿಗಳನ್ನು ಇತ್ತೀಚಿನ ಜಿಎಸ್‌ಟಿ ಕಡಿತಕ್ಕೆ ಅನ್ವಯವಾಗುವಂತೆ ಮಾರಾಟ ಮಾಡುವುದಾಗಿ ಘೋಷಿಸಿದೆ. ಕಂಪನಿಯ ಜನಪ್ರಿಯ ಎಂಜಿ ಎಸ್‌ಯುವಿಗಳನ್ನು ಬುಕ್ ಮಾಡಿದ ಗ್ರಾಹಕರಿಗೆ ಪ್ರಯೋಜನಗಳು ಸೆಪ್ಟೆಂಬರ್ 07, 2025 ರಿಂದ ಜಾರಿಗೆ ಬರಲಿವೆ. ಈ ಬೆಳವಣಿಗೆಯು ಕಾರುಗಳ ಬೆಲೆಯಲ್ಲಿ ಪ್ರಮುಖ ಬದಲಾವಣೆ ಮತ್ತು ಭಾರತೀಯ ವಾಹನ ಮಾರುಕಟ್ಟೆಯಾದ್ಯಂತ ಹಬ್ಬದ ಸೀಸನ್‌ನಲ್ಲಿ ಮಾರಾಟವನ್ನು ಉತ್ತೇಜಿಸುವ ನಿರೀಕ್ಷೆಯಿದೆ ಎಂದು ಎಂಜಿ ವಿಶ್ವಾಸ ವ್ಯಕ್ತಪಡಿಸಿದೆ.

ಇತ್ತೀಚಿನ ಜಿಎಸ್‌ಟಿ 2.0 ನಂತರ ಈ ಬೆಲೆ ಕಡಿತ ಮಾಡಲಾಗಿದೆ, ಇದು ಸಣ್ಣ ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ (350 ಸಿಸಿಗಿಂತ ಕಡಿಮೆ) ಜಿಎಸ್‌ಟಿಯನ್ನು ಶೇ18 ಕ್ಕೆ ಇಳಿಸಿದ್ದು, ಹೆಚ್ಚುವರಿ ಸೆಸ್ ಅನ್ನು ತೆಗೆದುಹಾಕಲಾಗಿದೆ. ಜೊತೆಗೆ ಎಲ್ಲಾ ಆಟೋ ಬಿಡಿಭಾಗಗಳಿಗೆ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಲಾಗಿದೆ. ದೊಡ್ಡ ಕಾರುಗಳು ಮತ್ತು ಎಸ್‌ಯುವಿಗಳು ಈಗ ಏಕರೂಪದ ಶೇ40 ಜಿಎಸ್‌ಟಿ ದರವನ್ನು ಹೊಂದಿವೆ.

mg-motor-india-extends-full-gst-benefits-to-customers

ಅಂದರೆ ದೊಡ್ಡ ಎಸ್‌ಯುವಿಗಳ (ಗ್ಲೋಸ್ಟರ್ ಮತ್ತು ಹೆಕ್ಟರ್ ನಂತಹ) GST ದರವನ್ನು ಒಟ್ಟು ಶೇ50 (GST + ಸೆಸ್) ರಿಂದ ಏಕರೂಪದ ಶೇ40 ಕ್ಕೆ ಇಳಿಸಲಾಗಿದೆ. ಆಸ್ಟರ್ ನಂತಹ ಮಧ್ಯಮ ಗಾತ್ರದ ವಾಹನಗಳು ಶೇ45 ರಿಂದ ಶೇ40ಕ್ಕೆ ಇಳಿದಿದೆ. ಇದು ನೇರವಾಗಿ ಕಡಿಮೆ ಎಕ್ಸ್-ಶೋರೂಂ ಬೆಲೆಗಳಿಗೆ ಕಾರಣವಾಗುತ್ತದೆ. ಹೊಸ ಬೆಲೆಗಳು ಸೆಪ್ಟೆಂಬರ್ 7, 2025 ರಿಂದ ತಕ್ಷಣ ಅನ್ವಯಿಸುತ್ತವೆ.

ಜಿಎಸ್‌ಟಿಯನ್ನು ತರ್ಕಬದ್ಧಗೊಳಿಸುವ ಸರ್ಕಾರದ ನಿರ್ಧಾರವು ಖರೀದಿದಾರರಿಗೆ ಕಾರುಗಳನ್ನು ಕೈಗೆಟುಕುವಂತೆ ಮಾಡಲಿದೆ. ನಮ್ಮ ಎಸ್‌ಯುವಿಗಳಾದ್ಯಂತ ಈ ಸುಧಾರಣೆಯ ಸಂಪೂರ್ಣ ಪ್ರಯೋಜನವನ್ನು ವಿಸ್ತರಿಸುವ ಮೂಲಕ, ಗ್ರಾಹಕರು ಈ ಬೆಲೆಗಳಲ್ಲಿನ ಬದಲಾವಣೆಗೆ ತಕ್ಷಣ ಪ್ರತಿಕ್ರಿಯಿಸಿ ನಾವು ಬಯಸಿದಂತೆ ಉತ್ತಮ ಮಾರಾಟಕ್ಕೆ ಸಹಕರಿಸಲಿದ್ದಾರೆ ಎಂಬ ವಿಶ್ವಾಸವನ್ನು ಎಂಜಿ ವ್ಯಕ್ತಪಡಿಸಿದೆ.

mg-motor-india-extends-full-gst-benefits-to-customers

ಬೇಡಿಕೆ ಬಲಗೊಳ್ಳುವ ಸಮಯದಲ್ಲಿ, ವಿಶೇಷವಾಗಿ ಹಬ್ಬದ ಋತುವಿನಲ್ಲಿ ನಮ್ಮ ಎಸ್‌ಯುವಿಗಳಾದ ಆಸ್ಟರ್, ಹೆಕ್ಟರ್ ಮತ್ತು ಗ್ಲೋಸ್ಟರ್ ಅನ್ನು ಹೆಚ್ಚು ಖರೀದಿಸಬಹುದಾದ ಮತ್ತು ಆಕರ್ಷಕವಾಗಿಸುವತ್ತ ನಮ್ಮ ಗಮನವಿದೆ. ಪ್ರಯೋಜನಗಳನ್ನು ವರ್ಗಾಯಿಸುವುದಕ್ಕಿಂತ ಹೆಚ್ಚಾಗಿ, ಈ ಕ್ರಮವು ವಿಶ್ವಾಸವನ್ನು ಬಲಪಡಿಸುತ್ತದೆ. ಹೊಸ ಬೆಲೆ ಕಡಿತಗಳು ಹೆಚ್ಚಿನ ಗ್ರಾಹಕರು ಎಂಜಿಯನ್ನು ಸ್ವೀಕರಿಸಲು ಪ್ರೋತ್ಸಾಹಿಸುತ್ತದೆ ಎಂದು ಕಂಪನಿಯ ಮುಖ್ಯ ವಾಣಿಜ್ಯ ಅಧಿಕಾರಿ ವಿನಯ್ ರೈನಾ ಹೇಳಿದರು.

ಯಾವ ಮಾಡಲ್‌ ಮೇಲೆ ಎಷ್ಟು ಬೆಲೆ ಇಳಿಕೆ

ಮಾಡಲ್ ಪ್ರಸ್ತುತ GST + ಸೆಸ್ ಹೊಸ GST ಬೆಲೆ ಇಳಿಕೆ
ಆಸ್ಟರ್ 45% 40% 54,000 ರೂ.
ಹೆಕ್ಟರ್ 45% (ಪೆಟ್ರೋಲ್)
50% (ಡೀಸೆಲ್)
40% 1,49,000 ರೂ.
ಗ್ಲೋಸ್ಟರ್ 50% 40% 3,04,000 ರೂ.

ಈ ಕಡಿತಗಳು ಉದ್ಯಮ - ವ್ಯಾಪಿ ಜಿಎಸ್‌ಟಿ ಸುಧಾರಣೆಗಳಿಗೆ ಹೊಂದಿಕೆಯಾಗುತ್ತವೆ. ಹಬ್ಬದ ಋತುವಿನ ಬೇಡಿಕೆಯನ್ನು ಹೆಚ್ಚಿಸುವ ಮತ್ತು ಭಾರತದಲ್ಲಿ ಪ್ರಮುಖ ಕಾರುಗಳ ಮಾರಾಟದಲ್ಲಿ ಧಿಡೀರ್ ಏರಿಕೆಯಾಗಲಿದೆ. ಗ್ರಾಹಕರು ಪರಿಷ್ಕೃತ ಬೆಲೆಗಳಿಂದಾಗಿ ಒಟ್ಟು ವೆಚ್ಚದ ಲಾಭವನ್ನು ನೇರವಾಗಿ ಪಡೆಯಲಿದ್ದಾರೆ. ಇದು ಜಿಎಸ್‌ಟಿ 2.0 ನಂತರ ಎಂಜಿಯ ಸಂಪೂರ್ಣ ಎಸ್‌ಯುವಿಗಳನ್ನು ಮತ್ತಷ್ಟು ಸ್ಪರ್ಧಾತ್ಮಕವಾಗಿಸುತ್ತದೆ.

mg-motor-india-extends-full-gst-benefits-to-customers

ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್‌ನಂತಹ ಇತರ ವಾಹನ ತಯಾರಕರು ಸಹ ಜಿಎಸ್‌ಟಿ ಕೌನ್ಸಿಲ್‌ನ ತೆರಿಗೆ ತರ್ಕಬದ್ಧಗೊಳಿಸುವ ನೀತಿಗೆ ಪ್ರತಿಕ್ರಿಯೆಯಾಗಿ ಇದೇ ರೀತಿಯ ಬೆಲೆ ಕಡಿತವನ್ನು ಘೋಷಿಸಿವೆ. ಇದು ಗ್ರಾಹಕರಿಗೆ ಕೈಗೆಟುಕುವಿಕೆಯನ್ನು ಹೆಚ್ಚಿಸುವುದಲ್ಲದೆ, ಆಟೋ ವಲಯದಲ್ಲಿ ಒಟ್ಟಾರೆ ವಿಶ್ವಾಸವನ್ನು ಬಲಪಡಿಸಿದೆ. ಹಬ್ಬದ ಋತುವಿನ ಮೊದಲೇ ಕಾರುಗಳ ಮಾರಾಟಕ್ಕೆ ವೇಗವನ್ನು ನೀಡುವುದರ ಜೊತೆಗೆ, ಬೇಡಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಒಟ್ಟಾರೆ ಭಾರತದ ಅತ್ಯಂತ ಆಕರ್ಷಕ ಪ್ರೀಮಿಯಂ ಪೂರ್ಣ-ಗಾತ್ರದ ಎಸ್‌ವಿಗಳಲ್ಲಿ ಒಂದಾಗಿರುವ ಎಂಜಿ ಗ್ಲೋಸ್ಟರ್, ಈಗ ರೂ.3.04 ಲಕ್ಷ ಬೆಲೆ ಕಡಿತವು ಅದರ ವಿಭಾಗದ ಸ್ಪರ್ಧಾತ್ಮಕತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಈ ಪರಿಷ್ಕೃತ ಬೆಲೆ ನಿಗದಿಯು ಟೊಯೋಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್‌ನಂತಹ ಪ್ರಮುಖ ಪ್ರತಿಸ್ಪರ್ಧಿಗಳೊಂದಿಗೆ ಅಂತರವನ್ನು ಕಡಿಮೆ ಮಾಡುತ್ತದೆ.

More from DriveSpark

Article Published On: Monday, September 8, 2025, 17:40 [IST]
English summary
Mg motor india extends full gst benefits to customers
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+