MG Windsor: 449 ಕಿ.ಮೀ ರೇಂಜ್.. ಹೊಸ ಫೀಚರ್ಸ್, ಬಹುನಿರೀಕ್ಷಿತ 'ಎಂಜಿ ವಿಂಡ್ಸರ್ ಇವಿ ಪ್ರೊ' ಬಿಡುಗಡೆ.. ಬೆಲೆ ಎಷ್ಟು?
ಬಹುನಿರೀಕ್ಷಿತ ಎಂಜಿ ವಿಂಡ್ಸರ್ ಇವಿ ಪ್ರೊ (MG Windsor EV Pro) ಎಲೆಕ್ಟ್ರಿಕ್ ಎಸ್‌ಯುವಿ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದು ಹಲವು ಹೊಸತನಗಳಿಗೆ ಸಾಕ್ಷಿಯಾಗಿದ್ದು, ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿದೆ. ಟಾಟಾ ಕರ್ವ್ ಇವಿ, ಮಹೀಂದ್ರಾ ಎಕ್ಸ್‌ಯುವಿ400 ಹಾಗೂ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರುಗಳಿಗೆ ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಬನ್ನಿ, ಈ ನೂತನ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ ಎಷ್ಟು ಹಾಗೂ ವಿಶೇಷತೆಗಳೇನು ಎಂಬುದನ್ನು ತಿಳಿಯೋಣ.
ಹೊಚ್ಚ ಹೊಸ ಎಂಜಿ ವಿಂಡ್ಸರ್ ಇವಿ ಪ್ರೊ ರೂ.17.49 ಲಕ್ಷ ಎಕ್ಸ್-ಶೋರೂಂ ದರವನ್ನು ಹೊಂದಿದೆ. ಈ ಕಾರಿಗಾಗಿ ಕಂಪನಿಯು ಮೇ.8 ರಿಂದ ಅಧಿಕೃತವಾಗಿ ಬುಕ್ಕಿಂಗ್‌ನ್ನು ಪಡೆದುಕೊಳ್ಳಲಿದೆ. ವಿಶೇಷವಾಗಿ ಈ ಪರಿಚಯಾತ್ಮಕ ಬೆಲೆಯಲ್ಲಿ ನೂತನ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಕೇವಲ 8,000 ಗ್ರಾಹಕಾರಿಗಷ್ಟೇ ಮಾರಾಟ ಮಾಡಲಾಗುತ್ತದೆ.

ಎಂಜಿ ವಿಂಡ್ಸರ್ ಇವಿ ಪ್ರೊ ಹೊರಭಾಗದಲ್ಲಿ ಸ್ಟ್ಯಾಂಡರ್ಡ್ ವಿಂಡ್ಸರ್ ರೀತಿಯಲ್ಲಿಯೇ ವಿನ್ಯಾಸವನ್ನು ಹೊಂದಿದೆ. ಸ್ಪ್ಲಿಟ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಲೈಟ್ ಬಾರ್‌ಗಳು, ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳನ್ನು ಪಡೆದಿದೆ. ಇದರೊಟ್ಟಿಗೆ ಪವರ್ಡ್ ಟೈಲ್‌ಗೇಟ್ ಮತ್ತು ಎಂಜಿ ಹೆಕ್ಟರ್‌ನಂತೆ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.
ಹೊಸ ಎಂಜಿ ವಿಂಡ್ಸರ್ ಇವಿ ಪ್ರೊ ಎಲೆಕ್ಟ್ರಿಕ್ ಕಾರು ಸೆಲಾಡಾನ್ ಬ್ಲೂ, ಗ್ಲೇಜ್ ರೆಡ್ & ಅರೋರಾ ಸಿಲ್ವರ್ ಎಂಬ 3 ಹೊಸ ಬಣ್ಣಗಳೊಂದಿಗೂ ದೊರೆಯುತ್ತದೆ. ಜೊತೆಗೆ ಈ ಕಾರು ಒಳಭಾಗವು ಹೆಚ್ಚು ಅತ್ಯುತ್ತಮವಾದ ವಿನ್ಯಾಸವನ್ನು ಪಡೆದಿದೆ. ಡುಯಲ್-ಟೋನ್ ಐವರಿ & ಬ್ಲ್ಯಾಕ್ ಪೈಂಟ್ ಸ್ಕೀಮ್ ಅನ್ನು ಒಳಗೊಂಡಿದೆ. ಇದರಲ್ಲಿಯೂ 5 ಆಸನಗಳಿದ್ದು, ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದು.

ನೂತನ ವಿಂಡ್ಸರ್ ಇವಿ ಪ್ರೊನಲ್ಲಿರುವ ಬಹುದೊಡ್ಡ ಬದಲಾವಣೆಯೆಂದರೆ, ಹೆಚ್ಚು ಶಕ್ತಿಯುತವಾದ 52.9 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿರುವುದು ಆಗಿದೆ. ಈ ಹಿನ್ನೆಲೆ, ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಸಂಪೂರ್ಣ ಚಾರ್ಜ್‌ನಲ್ಲಿ 449 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಈಗಿರುವ ವಿಂಡ್ಸರ್ ಇವಿ 38 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿಯನ್ನು ಹೊಂದಿದ್ದು, ಪೂರ್ತಿ ಚಾರ್ಜ್‌ನಲ್ಲಿ 331 ಕಿಲೋಮೀಟರ್ ಕ್ರಮಿಸುತ್ತದೆ.
ಈ ಹೊಸ ಕಾರಿನ ವೈಶಿಷ್ಟ್ಯದಲ್ಲಿ ಯಾವುದೇ ಪ್ರಮಖವಾದ ಮಾರ್ಪಾಡನ್ನು ಮಾಡಲಾಗಿಲ್ಲ. ಇದು 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪೋರ್ಟ್ ಹಾಗೂ ಬಟನ್ ಸ್ಟಾರ್ಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಎಂಜಿ ವಿಂಡ್ಸರ್ ಇವಿ ಪ್ರೊ ಪ್ರಯಾಣಿಕರ ರಕ್ಷಣೆಗಾಗಿ ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯವನ್ನು ಪಡೆದಿದೆ. ಇದು ಟ್ರಾಫಿಕ್ ಜಾಮ್ ಅಸಿಸ್ಟ್ & ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಒಳಗೊಂಡಂತೆ ಹಲವು ಸುರಕ್ಷಿತ ಅಂಶಗಳನ್ನು ಹೊಂದಿದೆ. ಹಾಗೆಯೇ ಸ್ಟ್ಯಾಂಡರ್ಡ್ ವಿಂಡ್ಸರ್ ಹೊಂದಿರುವಂತೆ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications