2025 ಆಟೋ ಎಕ್ಸ್‌ಪೋದಲ್ಲಿ ಎರಡು ಗೇಮ್‌ ಚೇಂಜರ್ ವಾಣಿಜ್ಯ ವಾಹನಗಳ ಬಿಡುಗಡೆ!

2025 ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Bharat Mobility Global Expo 2025) ದಲ್ಲಿ ಮೋಂಟ್ರಾ ಎಲೆಕ್ಟ್ರಿಕ್ ಕಂಪನಿಯು 'ಇವಿಯೇಟರ್' (ಇಎಸ್‌ಸಿವಿ) ಮತ್ತು ಸೂಪರ್ ಕಾರ್ಗೋ (ಇ 3-ವೀಲರ್) ವಾಹನಗಳನ್ನು ಬಿಡುಗಡೆ ಮಾಡಿದೆ. ಈ ವಾಹನವು ದೈನಂದಿನ ವಾಹನ ಬಳಕೆಯನ್ನು ಹೆಚ್ಚಿಸಲು ಕಸ್ಟಮೈಸ್ ಮಾಡಿದ ಚಾರ್ಜಿಂಗ್ ಮತ್ತು ಆಫ್ಟರ್‌ಮಾರ್ಕೆಟ್ ಪರಿಹಾರಗಳಿಗೂ ಹೊಂದಿಕೊಳ್ಳುತ್ತದೆ ಎಂದು ಮೋಂಟ್ರಾ ಎಲೆಕ್ಟ್ರಿಕ್ ಕಂಪನಿ ಹೇಳಿದೆ.

3.5 ಟನ್ ಒಟ್ಟು ವಾಹನ ತೂಕದ EVIATOR (e-SCV) ಮತ್ತು 1.2 ಟನ್ ಒಟ್ಟು ವಾಹನ ತೂಕದ ಸೂಪರ್ ಕಾರ್ಗೋ (e 3-ವೀಲರ್) ಬಿಡುಗಡೆ ಮಾಡಲಾಗಿದೆ. EVIATOR (e-SCV) ಉದ್ಯಮದ ಪ್ರಮುಖ ಪ್ರಮಾಣೀಕೃತ ರೇಂಜ್ 245 ಕಿ.ಮೀ ಮತ್ತು 170 ಕಿ.ಮೀ ರಿಯಲ್ ವರ್ಲ್ಡ್ ರೇಂಜ್ ಜೊತೆಗೆ ಅತ್ಯುನ್ನತ ಶಕ್ತಿ - 80 kW ಪವರ್ ಮತ್ತು 300 Nm ಟಾರ್ಕ್‌ನೊಂದಿಗೆ ಬರುತ್ತದೆ.

montra-electric-launches-cargo-vehicles-at-bharat-mobility-global-expo-2025

ಇದು 7 ವರ್ಷಗಳು ಅಥವಾ 2.5 ಲಕ್ಷ ಕಿ.ಮೀ ವರೆಗೆ ವಾರೆಂಟಿಯೊಂದಿಗೆ ಬರುತ್ತದೆ. ಬೆಲೆ ರೂ. 15.99 ಲಕ್ಷ (ಎಕ್ಸ್-ಶೋರೂಂ) ಇದೆ. ಸೂಪರ್ ಕಾರ್ಗೋ (e-3W) ವಿಷಯಕ್ಕೆ ಬಂದರೆ ಇದು 200+ ಕಿ.ಮೀ ರೇಂಜ್ ಮತ್ತು ರಿಯಲ್‌ ವರ್ಲ್ಡ್‌ನಲ್ಲಿ 150 ಕಿ.ಮೀ ರೇಂಜ್‌ನೊಂದಿಗೆ ಬರುತ್ತದೆ. 3 ಕಾರ್ಗೋ ಬಾಡಿ ಪ್ರಕಾರಗಳಲ್ಲಿ ಲಭ್ಯವಿದೆ. ಇದು 15 ನಿಮಿಷಗಳ ಪೂರ್ಣ ಚಾರ್ಜ್ ಆಯ್ಕೆಯೊಂದಿಗೆ ಲಭ್ಯವಿದೆ. ರೂ. 4.37 ಲಕ್ಷ (ಎಕ್ಸ್-ಶೋರೂಂ) ಬೆಲೆಯಿದೆ.

EVIATOR ಭಾರತದ ಮೊದಲ TRU-EV ಆಗಿದ್ದು, ಇದು ತನ್ನ ಅತ್ಯಾಧುನಿಕ ವಿನ್ಯಾಸ, ದೃಢ ಕಾರ್ಯಕ್ಷಮತೆ ಮತ್ತು ಸಾಟಿಯಿಲ್ಲದ ಬಾಳಿಕೆಯೊಂದಿಗೆ ಪ್ರಮಾಣೀಕೃತ 245 ಕಿ.ಮೀ ರೇಂಜ್ ಹೊಂದಿದೆ. EVIATOR ಸಣ್ಣ ವಾಣಿಜ್ಯ ವಾಹನ ಕ್ಷೇತ್ರದಲ್ಲಿ ಗೇಮ್-ಚೇಂಜರ್ ಆಗಲಿದೆ. ಸುಧಾರಿತ ಟೆಲಿಮ್ಯಾಟಿಕ್ಸ್ ಅನ್ನು ಕೂಡ ಸಪೋರ್ಟ್ ಮಾಡುತ್ತದೆ. ಇದು ಶೇ95 ಕ್ಕಿಂತ ಹೆಚ್ಚು ಫ್ಲೀಟ್ ಅಪ್‌ಟೈಮ್ ಅನ್ನು ಖಚಿತಪಡಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಸೂಪರ್-ಕಾರ್ಗೋ (ಇ 3-ವೀಲರ್) ಅನ್ನು ಆಳವಾದ ಗ್ರಾಹಕರ ಒಳನೋಟಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಚಾಲಕನ ಸೀಟ್ ಬೆಲ್ಟ್, ಮುಂಭಾಗದ ಡಿಸ್ಕ್ ಬ್ರೇಕ್‌ಗಳು ಮತ್ತು ವಿಶಾಲವಾದ ಚಾಲಕನ ಕ್ಯಾಬಿನ್‌ನಂತಹ ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 15 ನಿಮಿಷಗಳ ಪೂರ್ಣ ಚಾರ್ಜಿಂಗ್ ಆಯ್ಕೆಯು B2B ಆಟಗಾರರಿಗೆ ಕೊಡುಗೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ವ್ಯಾಪಕ ರೇಂಜ್ ಕೊಡುಗೆಯೊಂದಿಗೆ, ಸೂಪರ್ - ಕಾರ್ಗೋ ಫ್ಲೀಟ್ ಆಪರೇಟರ್‌ಗಳು ಮತ್ತು ವೈಯಕ್ತಿಕ ಉದ್ಯಮಿಗಳಿಗೆ ವಿವಿಧ ಅಪ್ಲಿಕೇಶನ್‌ಗಳಿಗೆ ಸೂಕ್ತವಾಗಿದೆ. ನಮ್ಮ ವಿಸ್ತರಿಸುತ್ತಿರುವ ಡೀಲರ್ ನೆಟ್‌ವರ್ಕ್ ರಾಷ್ಟ್ರದಾದ್ಯಂತ ಅಪ್‌ಟೈಮ್ ಅನ್ನು ಖಚಿತಪಡಿಸುತ್ತದೆ. ಇದು ಸದ್ಯ ತನ್ನ ವಿಭಾಗದಲ್ಲಿ ಇತರ ಪ್ರತಿಸ್ಪರ್ಧಿಗಳಿಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಕಂಪನಿ ಹೇಳಿದೆ.

ಭಾರತದ ಮೊದಲ ಎಲೆಕ್ಟ್ರಿಕ್ ಹೆವಿ ಕಮರ್ಷಿಯಲ್ 55 ಟನ್ ಟ್ರಕ್ RHINO ಕೂಡ ಇಲ್ಲಿ ಪ್ರದರ್ಶನದಲ್ಲಿ ಇಡಲಾಗಿತ್ತು. ಇದು ಈಗಾಗಲೇ ಬಹು ಗ್ರಾಹಕರೊಂದಿಗೆ 5 ಮಿಲಿಯನ್+ ಕಿ.ಮೀ ದೂರ ಕ್ರಮಿಸಿದೆ. 3W ಲಾಸ್ಟ್ ಮೈಲ್, ಸಣ್ಣ ಕಮರ್ಷಿಯಲ್, ಹೆವಿ ಕಮರ್ಷಿಯಲ್ ಮತ್ತು ಇ-ಟ್ರಾಕ್ಟರ್‌ಗಳ 4 ವ್ಯವಹಾರಗಳಲ್ಲಿ ತನ್ನ ಉಪಸ್ಥಿತಿಯೊಂದಿಗೆ ಮೋಂಟ್ರಾ ಎಲೆಕ್ಟ್ರಿಕ್ 2070 ರ ವೇಳೆಗೆ ಶೂನ್ಯ ಇಂಗಾಲದ ಹೊರಸೂಸುವಿಕೆ ಸಾಧಿಸುವ ಗುರಿ ಹೊಂದಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, January 18, 2025, 15:37 [IST]
English summary
Montra electric launches cargo vehicles at bharat mobility global expo 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+