ನಿನ್ನೆಯಷ್ಟೆ ಬಿಡುಗಡೆಯಾದ MG ಹೆಕ್ಟರ್ ವಿಶೇಷತೆಗಳು: 11.99 ಲಕ್ಷಕ್ಕೆ ಪ್ರೀಮಿಯಂ SUV ಸಿಗಲಿದೆ!

ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ನಿನ್ನೆಯಷ್ಟೆ ಹೊಸ ಎಂಜಿ ಹೆಕ್ಟರ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಇದು ಎಸ್‌ಯುವಿ ವಿಭಾಗದಲ್ಲಿ ದಿಟ್ಟ ವಿನ್ಯಾಸ, ಅಪ್ರತಿಮ ಸೌಕರ್ಯ, ಪ್ರವರ್ತಕ ತಂತ್ರಜ್ಞಾನ ಮತ್ತು ಕ್ರಿಯಾತ್ಮಕ ಚಾಲನಾ ಅನುಭವ ನೀಡುತ್ತದೆ. ಒಳಾಂಗಣವು 5-ಸೀಟರ್ ಟ್ರಿಮ್‌ನಲ್ಲಿ ಡ್ಯುಯಲ್ ಟೋನ್ ಐಸ್ ಗ್ರೇ ಥೀಮ್ ಮತ್ತು 6 ಮತ್ತು 7-ಸೀಟರ್ ಟ್ರಿಮ್‌ಗಳಿಗೆ ಡ್ಯುಯಲ್ ಟೋನ್ ಅರ್ಬನ್ ಟ್ಯಾನ್ ಅನ್ನು ಹೊಂದಿದೆ. ಹೊಸ ಹೆಕ್ಟರ್ ಬೆಲೆ ಈಗ ರೂ. 11.99 ಲಕ್ಷ (ಎಕ್ಸ್-ಶೋರೂಂ) ದಿಂದ ಆರಂಭವಾಗುತ್ತದೆ.

2019 ರಲ್ಲಿ ಭಾರತದ ಮೊದಲ ಇಂಟರ್ನೆಟ್ ಕಾರು ಎಂದು ಬಿಡುಗಡೆಯಾದ MG ಹೆಕ್ಟರ್, ತಂತ್ರಜ್ಞಾನ, ಸುರಕ್ಷತೆ ಮತ್ತು ಶೈಲಿಯ ಆಕರ್ಷಕ ಸಂಯೋಜನೆಯೊಂದಿಗೆ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಂಡಿತ್ತು. ಇದೀಗ ಎಂಜಿ ಹೆಕ್ಟರ್ ಅನುಕೂಲಕ್ಕಾಗಿ ಅಟೋಮ್ಯಾಟಿಕ್ ಟೈಲ್‌ಗೇಟ್, i-ಸ್ಮಾರ್ಟ್ ಅಪ್ಲಿಕೇಶನ್‌ನಲ್ಲಿ AC ಮತ್ತು ಮೂಡ್ ಲೈಟ್ ಮತ್ತು ಮುಂಭಾಗದ ಪಾರ್ಕಿಂಗ್ ಸೆನ್ಸರ್, PM 2.5 ಫಿಲ್ಟರ್‌ನೊಂದಿಗೆ ಏರ್ ಪ್ಯೂರಿಫೈಯರ್, ರೈನ್ ಸೆನ್ಸಾರ್ ವೈಪರ್‌ಗಳು, ಆಡಿಯೋಗಾಗಿ ರಿಮೋಟ್ ಕಂಟ್ರೋಲ್‌‌ಗಳನ್ನು ಸಹ ನೀಡಲಾಗಿದೆ.

new-mg-hector-price-features-design-engine-details

ಇವಿಷ್ಟೆ ಅಲ್ಲದೆ ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್, 8-ಬಣ್ಣದ ಆಂಬಿಯೆಂಟ್ ಮೂಡ್ ಲೈಟಿಂಗ್ ಮತ್ತು 70+ ವೈಶಿಷ್ಟ್ಯಗಳೊಂದಿಗೆ MG ಯ ಸುಧಾರಿತ i-SMART ಸಂಪರ್ಕಿತ ತಂತ್ರಜ್ಞಾನ, 35.56 cm (14 - ಇಂಚಿನ) HD ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸುಧಾರಿತ ADAS ಸೂಟ್‌ನಂತಹ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಹಳೆಯ ಮಾಡಲ್‌ಗಿಂತ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.

ಹೊಸ ಹೆಕ್ಟರ್ ಸ್ಮಾರ್ಟ್ ಕೀ ಮತ್ತು ಆಂಟಿ ಥೆಫ್ಟ್ ಇಮ್ಮೊಬಿಲೈಸೇಶನ್‌ನೊಂದಿಗೆ ಪುಶ್ ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಅನ್ನು ಸಹ ಒಳಗೊಂಡಿದೆ. 1.5L ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (CVT & MT) 143 PS ಪವರ್ ಮತ್ತು 250 NM ಟಾರ್ಕ್ ಅನ್ನು ನೀಡುವುದರಿಂದ, ಹೊಸ ಹೆಕ್ಟರ್ ಅನ್ನು ಎಂದಿಗಿಂತಲೂ ಹೆಚ್ಚು ಸ್ಟೈಲಿಶ್ ಪವರ್‌ಫುಲ್ ಕಾರಾಗಿದೆ.

new-mg-hector-price-features-design-engine-details

ಹೊಸ MG ಹೆಕ್ಟರ್ ಸೀಟುಗಳ ಮೇಲಿನ ಫ್ಯಾಬ್ರಿಕ್ ಇನ್ಸರ್ಟ್‌ಗಳು, ಟೆಲಿಸ್ಕೋಪಿಕ್ ಮತ್ತು ಟಿಲ್ಟ್ ಹೊಂದಾಣಿಕೆ ಮಾಡಬಹುದಾದ ಸ್ಟೀರಿಂಗ್ ಮತ್ತು 6-ವೇ ಪವರ್ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಸೇರಿದಂತೆ ಲೆದರ್ ಪ್ಯಾಕ್ ಡ್ಯಾಶ್‌ಬೋರ್ಡ್, ಮುಂಭಾಗದ ವೆಂಟಿಲೇಟೆಡ್ ಸೀಟುಗಳು ದೈನಂದಿನ ಪ್ರಾಯೋಗಿಕತೆಯ ಪರಿಪೂರ್ಣ ಸೌಕರ್ಯವನ್ನು ಹೆಚ್ಚಿಸುತ್ತವೆ.

ಇಂಟೀರಿಯರ್ ಫೀಚರ್ಸ್ ವಿಷಯಕ್ಕೆ ಬಂದರೆ 17.78 ಸೆಂ.ಮೀ ಎಂಬೆಡೆಡ್ ಎಲ್‌ಸಿಡಿ ಸ್ಕ್ರೀನ್ ಹೊಂದಿರುವ ಪೂರ್ಣ ಡಿಜಿಟಲ್ ಕ್ಲಸ್ಟರ್, ಅತಿದೊಡ್ಡ- ಇನ್ -ಸೆಗ್ಮೆಂಟ್ (14-ಇಂಚಿನ) HD ಪೋರ್ಟ್ರೇಟ್ ಟಚ್ ಸ್ಕ್ರೀನ್ ಸ್ಮಾರ್ಟ್ ಬೂಸ್ಟ್ ಸಿಸ್ಟಮ್, ಮ್ಯೂಸಿಕ್ ಮತ್ತು ನ್ಯಾವಿಗೇಷನ್‌ಗಾಗಿ ಎರಡು ಮತ್ತು ಮೂರು - ಬೆರಳಿನ ಸ್ವೈಪ್‌ಗಳಂತಹ ಮಲ್ಟಿ-ಟಚ್ ಕಾರ್ಯಾಚರಣೆ, ಐ-ಸ್ವೈಪ್ ಟಚ್ ಗೆಸ್ಚರ್ ಕಂಟ್ರೋಲ್, AC ಮತ್ತು ಡಿಜಿಟಲ್ ಬ್ಲೂಟೂತ್ ಕೀ ಒದಗಿಸಲಾಗಿದೆ.

new-mg-hector-price-features-design-engine-details

ಹೊಸ ಹೆಕ್ಟರ್ ತನ್ನ ಬಳಕೆದಾರರಿಗೆ ABS, EBD, ESP, TCS, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಬ್ರೇಕ್ ಅಸಿಸ್ಟ್‌ನಂತಹ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ವೀಲ್ ವ್ಯೂ ನೀಡುವ 360° HD ಕ್ಯಾಮೆರಾದೊಂದಿಗೆ ಸುರಕ್ಷತೆ ಮತ್ತು ಅನುಕೂಲತೆಯನ್ನು ಹೆಚ್ಚಿಸುತ್ತದೆ. ಈ ವರ್ಧಿತ ವೈಶಿಷ್ಟ್ಯಗಳು ಈಗ ಪ್ರಯಾಣಿಕರಿಗೆ ನೆಮ್ಮದಿಯ ಪ್ರಯಾಣವನ್ನು ಖಚಿತಪಡಿಸುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 16, 2025, 10:20 [IST]
English summary
New mg hector price features design engine details
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+