2-seater car: ಅತ್ಯಂತ ಅಗ್ಗದ ಬೆಲೆಯ 2-ಸೀಟರ್ ಕಾರು ಬಿಡುಗಡೆ: ಸನ್‌ರೂಫ್ ಕೂಡ ಇದೆ!

ವೇವ್ (Vayve) ಮೊಬಿಲಿಟಿಯು, ಭಾರತದ ಮೊದಲ ಸೋಲಾರ್ ಎಲೆಕ್ಟ್ರಿಕ್ 2-ಸೀಟರ್ (2-seater car) ಕಾರಾದ ಇವಾ (Eva) ವನ್ನು ರೂ. 3.25 ಲಕ್ಷ (ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಗೆ ಬಿಡುಗಡೆ ಮಾಡಿದೆ. 9 kWhr, 12 kWhr ಮತ್ತು 18 kWhr ಎಂಬ ಮೂರು ವಿಭಿನ್ನ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಬೆಲೆಗಳು ರೂ. 3.25 ಲಕ್ಷ (ಎಕ್ಸ್-ಶೋರೂಂ) ಆರಂಭವಾಗಿ ರೂ. 5.99 ಲಕ್ಷ (ಎಕ್ಸ್-ಶೋರೂಂ) ವರೆಗೆ ಇದೆ. ಗ್ರಾಹಕರು ಬ್ಯಾಟರಿ ಚಂದಾದಾರಿಕೆ ಆಯ್ಕೆಗಳೊಂದಿಗೆ ಲಭ್ಯವಿರುವ ವೇರಿಯೆಂಟ್ ಅವಲಂಬಿಸಿ ಆಯ್ಕೆ ಮಾಡಬಹುದು ಎಂದು ಕಂಪನಿ ಹೇಳಿದೆ.

ಕಾರಿಗಾಗಿ ಪ್ರಿ-ಬುಕಿಂಗ್‌ಗಳನ್ನು ತೆರೆದಿದಿದ್ದು, ಕೇವಲ ರೂ. 5,000 ಪಾವತಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು. ಗ್ರಾಹಕರು 2026 ರ ಉತ್ತರಾರ್ಧದಲ್ಲಿ ಕಾರಿನ ಡೆಲಿವರಿಗಳನ್ನು ಪಡೆಯಬಹುದು. ಮೊದಲ 25,000 ಗ್ರಾಹಕರು ವಿಸ್ತೃತ ಬ್ಯಾಟರಿ ಖಾತರಿ ಮತ್ತು 3 ವರ್ಷಗಳ ಉಚಿತ ವಾಹನ ಸಂಪರ್ಕದಂತಹ ಹೆಚ್ಚುವರಿ ಸವಲತ್ತುಗಳನ್ನು ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ.

vayve-mobility-launches-solar-electric-2-seater-car-at-auto-expo-2025

'ಇವಾ' ಆಧುನಿಕ ಭಾರತೀಯ ಕಾರು ಬಳಕೆದಾರರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಕಾರಾಗಿದ್ದು, ಲಿಕ್ವಿಡ್ ಬ್ಯಾಟರಿ ಕೂಲಿಂಗ್, ಪನೋರಮಿಕ್ ಗ್ಲಾಸ್ ರೂಫ್, ಲ್ಯಾಪ್‌ಟಾಪ್ ಚಾರ್ಜರ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಚಿಲ್ ಬಾಕ್ಸ್ ಮತ್ತು ಇತರ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಪ್ರೀಮಿಯಂ ಚಾಲನಾ ಅನುಭವವನ್ನು ನೀಡುತ್ತದೆ.

ಇವಾ 70 ಕಿ.ಮೀ ಟಾಪ್‌ ಸ್ಪೀಡ್ ಹೊಂದಿದ್ದು, ಇದು ನಗರ ಪ್ರಯಾಣಿಕರಿಗೆ ಸೂಕ್ತವಾಗಿದೆ. ಕೇವಲ 5 ಸೆಕೆಂಡುಗಳಲ್ಲಿ ಗಂಟೆಗೆ 40 ಕಿ.ಮೀ ವೇಗ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಪೆಟ್ರೋಲ್ ಹ್ಯಾಚ್‌ಬ್ಯಾಕ್‌ನ ಚಾಲನಾ ವೆಚ್ಚ ಪ್ರತಿ ಕಿ.ಮೀ.ಗೆ 5 ರೂ., ಆದರೆ ಇವಾ ಅದನ್ನು ಹತ್ತನೇ ಒಂದು ಭಾಗಕ್ಕೆ ಇಳಿಸಿ ಪ್ರತಿ ಕಿ.ಮೀ.ಗೆ 0.5 ರೂ.ಗೆ ಇಳಿಸುತ್ತದೆ.

vayve-mobility-launches-solar-electric-2-seater-car-at-auto-expo-2025

ಈ ಕಾರಿನ ಸಣ್ಣ ಗಾತ್ರ ಮತ್ತು ಹಗುರವಾದ ತೂಕದಿಂದಾಗಿ ಹೆಚ್ಚಿನ ರೇಂಜ್ ಪಡೆಯಬಹುದು. ಜೊತೆಗೆ ಇದರ ಹೆಚ್ಚುವರಿ ಸೋಲಾರ್ ಪ್ಯಾನಲ್‌ಗಳೊಂದಿಗೆ 3,000 ಕಿ.ಮೀ.ವರೆಗೆ ಉಚಿತ ಸೋಲಾರ್ ಚಾರ್ಜಿಂಗ್ ಅನ್ನು ಒದಗಿಸಲು ಇವಾಗೆ ಅನುವು ಮಾಡಿಕೊಡುತ್ತದೆ. ಇದು ಸಾಮಾನ್ಯ ನಗರ ಪ್ರಯಾಣಿಕರ ವಾರ್ಷಿಕ ಚಾಲನಾ ಅಗತ್ಯದ ಶೇ30 ವರೆಗೆ ಇರುತ್ತದೆ ಎಂದು ಕಂಪನಿ ತಿಳಿಸಿದೆ.

ಭಾರತದ ಜನದಟ್ಟಣೆಯ ಮಹಾನಗರಗಳಲ್ಲಿ, ಸಂಚಾರ ದಟ್ಟಣೆ ಮತ್ತು ಪಾರ್ಕಿಂಗ್ ಸ್ಥಳಗಳು ದಿನನಿತ್ಯದ ಸವಾಲುಗಳಾಗಳನ್ನು ಎದುರಿಸಲು ಇವಾ ಕಾರು ಸೂಕ್ತ ಆಯ್ಕೆಯಾಗಿದೆ. ಇದನ್ನು ಪ್ರೀಮಿಯಂ 2-ಸೀಟರ್ ಸ್ಲಿಮ್ ಸಿಟಿ ಕಾರಾಗಿ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ. ಇದು ನಗರ ಪ್ರಯಾಣದ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

vayve-mobility-launches-solar-electric-2-seater-car-at-auto-expo-2025

ನಮ್ಮ ಸೋಲಾರ್ ಪ್ಯಾನಲ್‌ಗಳು ಮತ್ತು ಎಲೆಕ್ಟ್ರಿಕ್ ಮೋಟಾರ್ ನಡುವಿನ ಸಿನರ್ಜಿ ವರ್ಷಗಳ ಸಂಶೋಧನೆಯ ಪರಿಣಾಮವಾಗಿದೆ. ಇದು ಪ್ರಮುಖ ಹಾರ್ಡ್‌ವೇರ್ ಮತ್ತು ಬುದ್ಧಿವಂತ ಸಾಫ್ಟ್‌ವೇರ್‌ನ ಏಕೀಕರಣವಾಗಿದೆ, ಈ ಮೂಲಕ ಕಾರ್ಯಕ್ಷಮತೆಯಲ್ಲಿ ರಾಜಿ ಮಾಡಿಕೊಳ್ಳದೆ ವಿಸ್ತೃತ ರೇಂಜ್ ನೀಡಲು ಇವಾಗೆ ಅವಕಾಶ ನೀಡುತ್ತದೆ ಎಂದು ವೇವ್ ಮೊಬಿಲಿಟಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಸೌರಭ್ ಮೆಹ್ತಾ ಹೇಳಿದ್ದಾರೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, January 18, 2025, 16:45 [IST]
English summary
Solar electric 2 seater car launched at auto expo 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+