19 Km ಮೈಲೇಜ್.. 7.95 ಲಕ್ಷ, ಹೊಸ Citroen Basalt Xಗೆ ಬದಲಿಯಾಗಬಲ್ಲ 3 ಕಾರುಗಳಿವು.. ಬೆಲೆ ಎಷ್ಟು, ವಿಶೇಷತೆಗಳೇನು?

ನೂತನ ಸಿಟ್ರನ್ ಬಸಾಲ್ಟ್ ಎಕ್ಸ್ (Citroen Basalt X) ಕಾರು ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದೆ. ಇದು ಕೂಪೆ ಎಸ್‌ಯುವಿಯಾಗಿದೆ. ರೂ.7.95 ಲಕ್ಷದಿಂದ ರೂ.12.90 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ & 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 19 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. 5 ಆಸನಗಳನ್ನು ತನ್ನದಾಗಿಸಿಕೊಂಡಿದೆ. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 470 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

ಈ ಕಾರು 10.2 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ ಹಾಗೂ ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ. ನಾವಿಲ್ಲಿ ಇದೇ 'ಬಸಾಲ್ಟ್ ಎಕ್ಸ್'ಗೆ ಪರ್ಯಾಯವಾಗಬಲ್ಲ 3 ಜನಪ್ರಿಯ ಎಸ್‌ಯುವಿಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

Top 3 Alternative Car For 2025 Citroen Basalt X Tata Curvv Honda Elevate And Skoda Kylaq

ಟಾಟಾ ಕರ್ವ್ (Tata Curvv):

ಇದೊಂದು ಕೂಪೆ ಎಸ್‌ಯುವಿಯಾಗಿದ್ದು, 'ಸಿಟ್ರನ್ ಬಸಾಲ್ಟ್ ಎಕ್ಸ್'ಗೆ ಅತ್ಯುತ್ತಮವಾದ ಬದಲಿ ಆಯ್ಕೆಯಾಗಲಿದೆ. ರೂ.10 ಲಕ್ಷದಿಂದ ರೂ.19.52 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದೆ. ಫ್ಲೇಮ್ ರೆಡ್, ಪ್ರಿಸ್ಟೈನ್ ವೈಟ್, ಡೇಟೋನಾ ಗ್ರೇ, ಒಪೇರಾ ಬ್ಲೂ, ಪ್ಯೂರ್ ಗ್ರೇ, ಗೋಲ್ಡ್ ಎಸೆನ್ಸ್ ಹಾಗೂ ಕಾರ್ಬನ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ನೂತನ ಕರ್ವ್ ಕಾರು 1.2 ಲೀಟರ್ ಟರ್ಬೊ ಪೆಟ್ರೋಲ್, 1.2 ಲೀಟರ್ ಜಿಡಿಐ ಟರ್ಬೊ ಪೆಟ್ರೋಲ್ & 1.5 ಲೀಟರ್ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 11 ರಿಂದ 15 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಒಳಗೊಂಡಿದೆ. 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಪನೊರೊಮಿಕ್ ಸನ್‌ರೂಫ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರಿಗೆ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ.

Top 3 Alternative Car For 2025 Citroen Basalt X Tata Curvv Honda Elevate And Skoda Kylaq

ಹೋಂಡಾ ಎಲಿವೇಟ್ (Honda Elevate)

ಈ ಎಸ್‌ಯುವಿಯು 'ಸಿಟ್ರನ್ ಬಸಾಲ್ಟ್ ಎಕ್ಸ್'ಗೆ ಪರ್ಯಾಯವಾಗಲಿದೆ. ರೂ.11.91 ಲಕ್ಷದಿಂದ ರೂ.16.73 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಪಡೆದಿದೆ. ಗೋಲ್ಡನ್ ಬ್ರೌನ್ ಮೆಟಾಲಿಕ್, ಅಬ್ಸಿಡಿಯನ್ ಬ್ಲೂ ಪರ್ಲ್, ಮೆಟಿಯೊರಾಯ್ಡ್ ಗ್ರೇ ಮೆಟಾಲಿಕ್, ರೇಡಿಯಂಟ್ ರೆಡ್ ಮೆಟಾಲಿಕ್, ಲೂನಾರ್ ಸಿಲ್ವರ್ ಮೆಟಾಲಿಕ್ ಮತ್ತು ಪ್ಲಾಟಿನಂ ವೈಟ್ ಪರ್ಲ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.

ಹೊಸ ಎಲಿವೇಟ್ 1.5-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 15 ರಿಂದ 17 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 5 ಆಸನಗಳನ್ನು ಹೊಂದಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ರೇರ್ ಎಸಿ ವೆಂಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು ಟ್ರಾಕ್ಷನ್ ಕಂಟ್ರೋಲ್‌ನ್ನು ಪಡೆದಿದೆ.

Top 3 Alternative Car For 2025 Citroen Basalt X Tata Curvv Honda Elevate And Skoda Kylaq

ಸ್ಕೋಡಾ ಕೈಲಾಕ್ (Skoda Kylaq):

ಇದು ವಿಶ್ವಾಸಾರ್ಹ ಎಸ್‌ಯುವಿಯಾಗಿದೆ. 'ಸಿಟ್ರನ್ ಬಸಾಲ್ಟ್ ಎಕ್ಸ್'ಗೆ ಬದಲಿ ಕಾರಾಗಿದೆ. ಅದಕ್ಕೆ ತಕ್ಕಂತೆ ರೂ.8.25 ಲಕ್ಷದಿಂದ ರೂ.13.99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಉತ್ತಮವಾದ ವಿನ್ಯಾಸವನ್ನು ಪಡೆದಿದೆ. ಬ್ರಿಲಿಯಂಟ್ ಸಿಲ್ವರ್, ಲಾವಾ ಬ್ಲೂ, ಆಲಿವ್ ಗೋಲ್ಡ್, ಕಾರ್ಬನ್ ಸ್ಟೀಲ್ ಮತ್ತು ಟೊರ್ನಾಡೊ ರೆಡ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

Top 3 Alternative Car For 2025 Citroen Basalt X Tata Curvv Honda Elevate And Skoda Kylaq

ಈ ಕಾರು 1.0-ಲೀಟರ್ ಟಿಎಸ್‌ಟಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 18 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಪಡೆದಿದೆ. 10 ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌ಗಳು ಹಾಗೂ ಸಿಂಗಲ್-ಪೇನ್ ಸನ್‌ರೂಫ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

More from DriveSpark

Article Published On: Wednesday, September 10, 2025, 19:54 [IST]
English summary
Top 3 alternative cars for 2025 citroen basalt x tata curvv honda elevate and skoda kylaq
Read more on citroen india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+