Maruti: ಬರೀ 7ಲಕ್ಷಕ್ಕೆ ಇಂತಹ ಕಾರು ಸಿಕ್ಕರೆ ಬಿಡ್ತಾರಾ? ಡೀಲರ್‌ಗಳ ಫೆವರೆಟ್... 28.51 ಕಿ.ಮೀ ಮೈಲೇಜ್!
ವಿಶ್ವದ ಅತಿದೊಡ್ಡ ಕಾರು ಉದ್ಯಮಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವು ಒಂದಾಗಿದ್ದು, ಟಾಪ್-5 ದೇಶಗಳಲ್ಲಿ ಸ್ಥಾನ ದಕ್ಕಿಸಿಕೊಂಡಿದೆ. ನಮ್ಮ ದೇಶದಲ್ಲಿ ಕಾರು ಮಾರಾಟದಿಂದ ಹಿಡಿದು ಮಾರಾಟದ ನಂತರ ಉತ್ತಮ ಸರ್ವಿಸ್ ಒದಗಿಸುವವರೆಗೆ ಮಾರುತಿ ಸುಜುಕಿ ನಂ.1 ಬ್ರಾಂಡ್ ಆಗಿ ಮುಂದುವರಿಯುತ್ತಿದೆ. ಅಗ್ಗದ ಕಾರುಗಳಿಂದ ಹಿಡಿದು ಪ್ರೀಮಿಯಂ ಕಾರುಗಳವರೆಗೆ ದೇಶದ ಪ್ರತಿಯೊಬ್ಬ ಕಾರು ಖರೀದಿದಾರರ ಅದ್ಯತೆಗಳನ್ನು ಪೂರೈಸುತ್ತಿದೆ. ಮುಖ್ಯವಾಗಿ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಕಾರಿನ ಬಗ್ಗೆ ಹೇಳಬೇಕು. ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಡಿಸೈನ್, ಆಕರ್ಷಕ ಫೀಚರ್ಸ ಹಾಗೂ ಅತ್ಯುತ್ತಮ ಮೈಲೇಜ್ ನೀಡುವ ಕಾರು ಇದಾಗಿದೆ.
ಯಾವ ಮಟ್ಟಿಗೆ ಈ ಕಾರು ಭಾರತದಲ್ಲಿ ಯಶಸ್ವಿಯಾಗಿದೆಯೆಂದರೆ, ಏಪ್ರಿಲ್ 2023 ರಲ್ಲಿ ಬಿಡುಗಡೆಯಾಗಿ ಕೇವಲ 32 ತಿಂಗಳಲ್ಲಿ 4,00,000 ದೇಶೀಯ ಮಾರಾಟವನ್ನು ಮೀರಿದ ಮೊದಲ ನೆಕ್ಸಾ ಎಸ್‌ಯುವಿಯಾಗಿ ಖ್ಯಾತಿ ಪಡೆದುಕೊಂಡಿದೆ. ಉದ್ಯಮ ಮೂಲಗಳ ಪ್ರಕಾರ ದೆಹಲಿ, ಮುಂಬೈ, ಕೊಚ್ಚಿ ಮತ್ತು ಬೆಂಗಳೂರಿನಂತಹ ಶ್ರೇಣಿ 1 ಮತ್ತು ಶ್ರೇಣಿ 2 ನಗರಗಳಲ್ಲಿ ಈ ಕಾರನ್ನು ಗ್ರಾಹಕರು ಹೆಚ್ಚಾಗಿ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

ರೂ.7 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಫ್ರಾಂಕ್ಸ್
ಮಾರುತಿ ಫ್ರಾಂಕ್ಸ್ ಬೇಸ್ ವೇರಿಯೆಂಟ್ ಬೆಲೆ ರೂ.6.85 ಲಕ್ಷ(ಎಕ್ಸ್ ಶೋರೂಂ)ದಿಂದ ಪ್ರಾರಂಭವಾಗುತ್ತದೆ. ಟಾಪ್ ವೇರಿಯೆಂಟ್ ಬೆಲೆ ರೂ.11.98 ಲಕ್ಷ(ಎಕ್ಸ್ ಶೋರೂಂ)ವಿದೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಸಿಗುವ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ರೆನಾಲ್ಟ್ ಕೈಗರ್, ನಿಸ್ಸಾನ್ ಮ್ಯಾಗ್ನೈಟ್‌ನಂತಹ ಕಾರುಗಳನ್ನು ಹಿಂದಿಕ್ಕಿ ಮಾರುತಿ ಫ್ರಾಂಕ್ಸ್ ಎಸ್‌ಯುವಿ ಮಾರಾಟದಲ್ಲಿ ಮುನ್ನುಗ್ಗುತ್ತಿದೆ.
ಕಳೆದ 2025 ಡಿಸೆಂಬರ್‌ನಲ್ಲಿಯೂ ಮಾರುತಿ ಸುಜುಕಿ ಫ್ರಾಂಕ್ಸ್ ಹ್ಯಾಚ್‌ಬ್ಯಾಕ್‌ನ ಒಟ್ಟು 20,700 ಯುನಿಟ್ ಕಾರುಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಲೈನ್‌ಅಪ್‌ನಲ್ಲಿಯೇ ಅತ್ಯಂತ ಸ್ಟೈಲಿಷ್ ಎಸ್‌ಯುವಿ ಎಂಬ ಖ್ಯಾತಿ ಪಡೆದಿರುವ ಫ್ರಾಂಕ್ಸ್ ಎಸ್‌ಯುವಿ, ಡ್ಯುಯಲ್-ಟೋನ್ ಇಂಟೀರಿಯರ್, 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಆಟೋ ಕ್ಲೇಮೇಟ್ ಕಂಟ್ರೋಲ್‌ನಂತಹ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸುರಕ್ಷತೆ ವಿಷಯಕ್ಕೆ ಬಂದರೆ ಈ ಎಸ್‌ಯುವಿ 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಹೋಲ್ಡ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 308 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ನೀಡಲಾಗಿದೆ.
ಹೊಸ ಫ್ರಾಂಕ್ಸ್ ಮೂರು ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದ್ದು, 1-ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್, 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್ ಆಯ್ಕೆಗಳಿವೆ. ವೇರಿಯೆಂಟ್‌ಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಪೆಟ್ರೋಲ್ ಆವೃತ್ತಿಗಳು 20.1 ರಿಂದ 22.89 ಕಿ.ಮೀ ಮೈಲೇಜ್ ಹಾಗೂ ಸಿಎನ್‌ಜಿ ಮಾದರಿಗಳು 28.51 ಕಿ.ಮೀ/ಕೆ.ಜಿ ಮೈಲೇಜ್ ನೀಡುತ್ತವೆ.

ಬೆಂಗಳೂರಿನಲ್ಲಿ ಆನ್-ರೋಡ್ ಬೆಲೆ
ಬೆಂಗಳೂರಿನಲ್ಲಿ ಮಾರುತಿ ಫ್ರಾಂಕ್ಸ್ ಆನ್ ರೋಡ್ ಬೆಲೆ ರೂ.8.24 ಲಕ್ಷದಿಂದ ಪ್ರಾರಂಭವಾಗುತ್ತದೆ. ಫ್ರಾಂಕ್ಸ್ ಟಾಪ್ ಮಾಡೆಲ್ ಬೆಲೆ ರೂ. 14.76 ಲಕ್ಷವಿದ್ದರೇ, ಫ್ರಾಂಕ್ಸ್ AT ಬೆಲೆ ರೂ. 9.77 ಲಕ್ಷದಿಂದ ಪ್ರಾರಂಭವಾಗಿ ರೂ. 14.76 ಲಕ್ಷದವರೆಗೆ ಇದೆ. ಫ್ರಾಂಕ್ಸ್ ಸಿಎನ್‌ಜಿ ಬೆಲೆ ರೂ. 9.36 ಲಕ್ಷದಿಂದ ಪ್ರಾರಂಭವಾಗಿ ರೂ. 10.30 ಲಕ್ಷದವರೆಗೆ ಇದೆ.
ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2520 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಹೆಚ್ಚಿನ ಲಗೇಜ್ ಸಾಗಿಸಲು ಅನುಕೂಲವಾಗುವಂತೆ 308 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ನೀಡಲಾಗಿದೆ. ಉತ್ತಮ ಕ್ಯಾಬಿನ್ ಸ್ಪೇಸ್ ಹೊಂದಿದ್ದು, ಕಾರು 995 ಎಂಎಂ ಉದ್ದ, 1765 ಎಂಎಂ ಅಗಲ ಹಾಗೂ 1550 ಎಂಎಂ ಎತ್ತರವಿದೆ.


Click it and Unblock the Notifications








