Maruti Suzuki: ಕಮ್ಮಿ ಬೆಲೆಯ ಸ್ಟೈಲಿಷ್ ಕಾರು... 32 ಕಿ.ಮೀ ಮೈಲೇಜ್: ಡೀಲರ್‌ಗಳ ಫೇವರೆಟ್
ಮಾರುತಿ ಸುಜುಕಿ (Maruti Suzuki) ಕಂಪನಿಯು ಸದ್ಯ ಭಾರತದಲ್ಲಿ ನಂ.1 ಬ್ರಾಂಡ್ ಆಗಿ ಮುಂದುವರಿಯುತ್ತಿದೆ. ತನ್ನ ಅಗ್ಗದ ಕಾರುಗಳಿಂದ ಹಿಡಿದು ಪ್ರೀಮಿಯಂ ಕಾರುಗಳವರೆಗೆ ಎಲ್ಲಾ ವಿಭಾಗದ ಜನರನ್ನು ತನ್ನತ್ತ ಸೆಳೆದಿದೆ. ಪ್ರತಿ ತಿಂಗಳು ದಾಖಲೆಯ ಸಂಖ್ಯೆಯಲ್ಲಿ ಮಾರಾಟವಾಗುವ ಮಾರುತಿ ಸುಜುಕಿ ಕಾರುಗಳಲ್ಲಿ ಅತಿ ಮುಖ್ಯವಾಗಿ 'ಸ್ವಿಫ್ಟ್' ಬಗ್ಗೆ ಹೇಳಲೇಬೇಕು, ಈ ಕಾರು ಮಧ್ಯಮ ವರ್ಗದವರ ಫೆವರೆಟ್ ಆಗಿದೆ. ಡಿಸೈನ್‌ನಿಂದ ಹಿಡಿದು ಫೀಚರ್ಸ್, ಆರಾಮ, ಮೈಲೇಜ್, ಪರ್ಫಾಮೆನ್ಸ್ ಹಾಗೂ ಇದರ ಕಡಿಮೆ ಬೆಲೆಯು ಖರೀದಿದಾರರಿಗೆ ಈ ಕಾರನ್ನು ಫೇವರೆಟ್ ಆಯ್ಕೆಯನ್ನಾಗಿಸಿದೆ.
ಪ್ರತಿ ತಿಂಗಳಂತೆ ಈ ಬಾರಿಯು ದಾಖಲೆಯ ಸಂಖ್ಯೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಮಾರಾಟವಾಗಿದೆ. ಕೆಲ ವರದಿಗಳ ಪ್ರಕಾರ, ಡಿಸೆಂಬರ್ 2025 (ಕಳೆದ ತಿಂಗಳು) ರಲ್ಲಿ ಬರೋಬ್ಬರಿ 18,800 ಕುಟುಂಬಗಳು ಸ್ವಿಫ್ಟ್ ಕಾರನ್ನು ಖರೀದಿಸಿ ಮನೆಗಳಿಗೆ ಕೊಂಡೊಯ್ದಿದ್ದಾರೆ. ಇದು ಕಡಿಮೆ ಬೆಲೆಯಲ್ಲಿ ಸಿಗುವ ಸ್ಟೈಲಿಷ್ ಹ್ಯಾಚ್‌ಬ್ಯಾಕ್ ಆಗಿರುವುದರಿಂದ ಡೀಲರ್ ಸಿಬ್ಬಂದಿ ಕೂಡ ಈ ಕಾರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ತಿಳಿದುಬಂದಿದೆ.

ಮಾರುತಿ ಸುಜುಕಿ ಸ್ವಿಫ್ಟ್ ವಿಶೇಷತೆಗಳು
ಮಾರುತಿ ಸ್ವಿಫ್ಟ್ ಒಂದು ಕ್ಲಾಸಿಕ್ ಹ್ಯಾಚ್‌ಬ್ಯಾಕ್ ಆಗಿದ್ದು, ಇದು ವಿಶಿಷ್ಟವಾಗಿ ಕಾಣುತ್ತಲೇ ಚಾಲನೆ ಮಾಡಲು ಖುಷಿ ನೀಡುವ ಕಾರಾಗಿದೆ. ಇದು ಹಲವಾರು ಆಧುನಿಕ ವೈಶಿಷ್ಟ್ಯಗಳಿಂದ ತುಂಬಿದ್ದು, ಸಾಕಷ್ಟು ವಿಶಾಲವಾದ ಕ್ಯಾಬಿನ್ ಅನ್ನು ಹೊಂದಿದೆ. ಜೊತೆಗೆ ಇದರ ಹೆಚ್ಚಿನ ಮೈಲೇಜ್, ಸಿಎನ್‌ಜಿ ಆಯ್ಕೆಯೊಂದಿಗೆ ಇಂಧನ - ಸಮರ್ಥ 1.2-ಲೀಟರ್ ಎಂಜಿನ್ ಮಧ್ಯಮ ವರ್ಗದ ಕುಟುಂಬಕ್ಕೆ ಹೇಳಿಮಾಡಿಸಿದ ಕಾರನ್ನಾಗಿಸಿದೆ.
ಪ್ರಸ್ತುತ ಮಾರುತಿ ಸುಜುಕಿ ಕಾರಿನ ಬೇಸ್ ವೇರಿಯೆಂಟ್ ಬೆಲೆಯು ರೂ. 5.7 ಲಕ್ಷ (ಎಕ್ಸ್ ಶೊರೂಂ) ದಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಟಾಪ್ ವೇರಿಯೆಂಟ್ ಬೆಲೆಯು ರೂ. 8.7 ಲಕ್ಷ (ಎಕ್ಸ್ ಶೋರೂಂ)ದ ವರೆಗೆ ಇದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಗಳಲ್ಲಿ ಈ ಕಾರು ಲಭ್ಯವಿದ್ದು, ತನ್ನ ವಿಭಾಗದಲ್ಲಿಯೇ ಅತ್ಯುತ್ತಮ ಮೈಲೇಜ್ ನೀಡುತ್ತದೆ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

ಇದರ ಎಂಜಿನ್ ವಿಶೇಷತೆಗಳನ್ನು ನೋಡುವುದಾದರೆ ಈ ಕಾರು 1.2 - ಲೀ. 3 - ಸಿಲಿಂಡರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 5 - ಸ್ಪೀಡ್ ಮ್ಯಾನುವಲ್ ಮತ್ತು ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ನೀಡಲಾಗಿದೆ. ಇದರ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 24.80 ಕಿ.ಮೀ ಮೈಲೇಜ್ ನೀಡಿದರೆ ಸಿಎನ್‌ಜಿನಲ್ಲಿ 32.85 ಕಿ.ಮೀವರೆಗೆ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
ಫೀಚರ್ಸ್ ವಿಷಯಕ್ಕೆ ಬಂದರೆ 9 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅರ್ಕಾಮಿಸ್ - ಟ್ಯೂನ್ಡ್ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಇದರ ಜೊತೆಗೆ 5 ಮಂದಿ ವಯಸ್ಕ ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದು. ಹೆಚ್ಚಿನ ಲಗ್ಗೇಜ್ ಸಾಗಿಸಲು 265 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಒದಗಿಸಲಾಗಿದೆ.

ಸುರಕ್ಷತೆಯ ವಿಷಯಕ್ಕೆ ಬಂದರೆ 6 ಏರ್‌ಬ್ಯಾಗ್‌ಗಳು, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಾಗೂ 3 ಪಾಯಿಂಟ್ ಸೀಟ್‌ಬೆಲ್ಟ್, ಟಿಸಿಎಸ್ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್)ಗಳನ್ನು ಹೊಂದಿದೆ. ಇವು ಬೇಸಿಕ್ ಸೇಫ್ಟಿ ಫೀಚರ್ಸ್ ಆಗಿದ್ದರೂ ಪ್ರಯಾಣದಲ್ಲಿ ಸಂಭವನೀಯ ಅಪಘಾತಗಳಲ್ಲಿ ಪ್ರಯಣಿಕರಿಗೆ ಉತ್ತಮ ರಕ್ಷಣೆ ಒದಗಿಸುತ್ತದೆ.
ಬೆಂಗಳೂರಿನಲ್ಲಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಬೇಸ್ ವೇರಿಯೆಂಟ್ ಆನ್ ರೋಡ್ ಬೆಲೆಯು ರೂ. 7.00 ಲಕ್ಷದಿಂದ ಟಾಪ್ ವೇರಿಯೆಂಟ್ ಬೆಲೆಯು ರೂ. 10.54 ಲಕ್ಷವಿದೆ. ಪ್ರತಿ ತಿಂಗಳು ದಾಖಲೆಯ ಸಂಖ್ಯೆಯಲ್ಲಿ ಮಾರಾಟವಾಗುವ ಮಾರುತಿ ಸುಜುಕಿ ಕಾರುಗಳಲ್ಲಿ ಅತಿ ಮುಖ್ಯವಾಗಿ 'ಸ್ವಿಫ್ಟ್' ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








