MG Windsor: ವಿಮಾನದಂತಹ ಸೌಕರ್ಯ: ಚೀನಾ ಬ್ರಾಂಡ್‌ಗೆ ಮನಸೋತ ಜನ: ಈ ಕಾರೀಗ ನಂ.1
2025 ರಲ್ಲಿ ಭಾರತದ ನಂಬರ್.1 ಮಾರಾಟದ ಇವಿ ಆಗುವ ಮೂಲಕ ಎಂಜಿ ವಿಂಡ್ಸರ್ (MG Windsor) ಗಮನಾರ್ಹ ಮೈಲಿಗಲ್ಲು ಸಾಧಿಸಿದೆ ಎಂದು ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ (MG Motor) ಇಂದು ಘೋಷಿಸಿದೆ. ಎಂಜಿ ವಿಂಡ್ಸರ್ ತನ್ನ ಬೆಲೆಗೆ ತಕ್ಕ ಮೌಲ್ಯ ನೀಡುವ ಎಲೆಕ್ಟ್ರಿಕ್ ಕಾರಾಗಿ ಉದ್ಯಮವನ್ನು ಭರದಿಂದ ಕೊಂಡೊಯ್ದಿದೆ. ಇವಿ ಮಾರುಕಟ್ಟೆ ನಾಯಕನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. 2025 ರಲ್ಲಿ ಬರೋಬ್ಬರಿ 46,735 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ, ಎಂಜಿ ವಿಂಡ್ಸರ್ ಭಾರತದ 4W (ಫೋರ್-ವೀಲರ್) ಇವಿ ಮಾರುಕಟ್ಟೆಯಲ್ಲಿ ಯಾವುದೇ ಇತರ ಕಂಪನಿ ಸಾಧಿಸದ ದಾಖಲೆ ಸ್ಥಾಪಿಸಿರುವುದಾಗಿ ಪ್ರಕಟಣೆಯಲ್ಲಿ ಹೇಳಿದೆ.
ಭಾರತೀಯ ಕುಟುಂಬಗಳಲ್ಲಿ ತನ್ನ ಬಲವಾದ ಆಕರ್ಷಣೆಯ ಮೂಲಕ ಎಂಜಿ ವಿಂಡ್ಸರ್ ಭಾರತದ ನಂ.1 ಮಾರಾಟದ ಇವಿ ಆಯಿತು. ಅಸಾಧಾರಣ ಚಾಲನಾ ಅನುಭವವನ್ನು ನೀಡುವ ಈ ಕಾರು, ಕ್ಯಾಬಿನ್ ಒಳಗೆ ಉದಾರವಾದ ಸ್ಥಳಾವಕಾಶ, ಉನ್ನತ ಸೌಕರ್ಯ ಮತ್ತು ವೈಶಿಷ್ಟ್ಯ-ಭರಿತ ಕ್ಯಾಬಿನ್ ಅನ್ನು ನೀಡುವಲ್ಲಿ ಶ್ರೇಷ್ಠತೆಯನ್ನು ಸಾಧಿಸಿದೆ. ಇಂದು ಭಾರತದ ಅತ್ಯಂತ ಪ್ರೀತಿಯ ಮತ್ತು ಹೆಚ್ಚು ಪ್ರಶಸ್ತಿ ಪಡೆದ ಇವಿಯಾಗಿ ಹೊರಹೊಮ್ಮಿದೆ ಎಂದು ಎಂಜಿ ತಿಳಿಸಿದೆ.

ಕಾರು ತಯಾರಕರು 2025ರ ವರ್ಷವನ್ನು ಒಟ್ಟಾರೆ 19% ಬೆಳವಣಿಗೆಯೊಂದಿಗೆ ಕೊನೆಗೊಳಿಸಿದ್ದಾರೆ. 2024 ಕ್ಕೆ ಹೋಲಿಸಿದರೆ ಇವಿ ಮಾರಾಟದಲ್ಲಿ ಗಮನಾರ್ಹವಾದ 111% ಏರಿಕೆಯನ್ನು ದಾಖಲಿಸಿದ್ದಾರೆ. MG EV ಗಳಿಗೆ ಸ್ಥಿರವಾದ ಬೇಡಿಕೆಯು ಟೈರ್ I ನಗರಗಳಲ್ಲಿ ಮಾತ್ರವಲ್ಲದೆ ಮಹಾನಗರಗಳಲ್ಲದ ಮತ್ತು ಉದಯೋನ್ಮುಖ ಮಾರುಕಟ್ಟೆಗಳಲ್ಲಿಯೂ ಇರುವುದು ಸ್ಪಷ್ಟವಾಗಿದೆ. ಈ ಮಟ್ಟದ ಬೇಡಿಕೆ ಬರಲು ಕಾರಿನಲ್ಲಿ ಅಂತಹದೇನಿದೆ ಬನ್ನಿ ನೋಡೋಣ.
ಎಂಜಿ ವಿಂಡ್ಸರ್ ವಿಶೇಷತೆಗಳು
ಭಾರತದ ಮೊದಲ ಇಂಟೆಲಿಜೆಂಟ್ CUV (ಕ್ರಾಸ್ ಓವರ್ ಯುಟಿಲಿಟಿ ವೆಹಿಕಲ್) ಆಗಿರುವ MG ವಿಂಡ್ಸರ್, ಸೆಡಾನ್‌ನ ವಿಸ್ತಾರ ಮತ್ತು SUV ಯ ಬಹುಮುಖತೆಯೊಂದಿಗೆ ಬರುತ್ತದೆ. ಖರೀದಿದಾರರ ಅನುಕೂಲಕ್ಕಾಗಿ ಈ ಕಾರನ್ನು ಕಂಪನಿಯು ವಿಶೇಷ ಪ್ಯಾಕೇಜ್ ಅಡಿಯಲ್ಲಿ ನೀಡುತ್ತಿದ್ದು, ರೂ. 9.99 ಲಕ್ಷ + ಪ್ರತಿ ಕಿ.ಮೀಗೆ 3.9 ರೂಪಾಯಿ ಪಾವತಿಸುವ ಆರಂಭಿಕ BaaS (Battery As A Service) ಬೆಲೆಯಲ್ಲಿ ನೀಡುತ್ತಿರುವುದಾಗಿ ತಿಳಿಸಿದೆ.

MG ವಿಂಡ್ಸರ್ ಫ್ಯೂಚರಿಸ್ಟಿಕ್ 'ಏರೋಗ್ಲೈಡ್' ಡಿಸೈನ್‌ದೊಂದಿಗೆ ಬರುತ್ತದೆ. ಇಂಟೀರಿಯರ್‌ನಲ್ಲಿ ಪ್ರಯಾಣಿಕರಿಗಾಗಿ 135 ಡಿಗ್ರಿಗಳಿಗೆ ಒರಗಿಸಿಕೊಳ್ಳಬಹುದಾದ 'ಏರೋ ಲೌಂಜ್' ಸೀಟ್‌ಗಳನ್ನು ಒಳಗೊಂಡಿರುವ ಬ್ಯುಸಿನೆಸ್-ಕ್ಲಾಸ್ ಸೌಕರ್ಯದೊಂದಿಗೆ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಸೆಂಟರ್ ಕನ್ಸೋಲ್‌ನಲ್ಲಿರುವ ಬೃಹತ್ 15.6 ಇಂಚಿನ ಗ್ರಾಂಡ್‌ವ್ಯೂ ಟಚ್ ಡಿಸ್ಪ್ಲೇ ಚಾಲಕ ಹಾಗೂ ಪ್ರಯಾಣಿಕರಿಗೆ ಮೋಜಿನ ಅನುಭವವನ್ನು ಒದಗಿಸುತ್ತದೆ.
ಎಂಜಿ ವಿಂಡ್ಸರ್ ಬ್ಯಾಟರಿ ಹಾಗೂ ರೇಂಜ್ ವಿಷಯಕ್ಕೆ ಬಂದರೆ, ಇದರ ಪವರ್‌ಫುಲ್ ಮೋಟಾರ್ 100 KW (136ps) ಪವರ್ ಮತ್ತು 200Nm ಟಾರ್ಕ್ ಹೊರಹಾಕುತ್ತದೆ. MG ವಿಂಡ್ಸರ್ ಹೆಚ್ಚುವರಿ ಬಹುಮುಖತೆಗಾಗಿ 38 kWh ಹಾಗೂ 52.9 kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡುತ್ತದೆ. 38 kWh ಬ್ಯಾಟರಿಯನ್ನು ಚಾರ್ಜ್ ಮಾಡಿದರೆ 332 ಕಿ.ಮೀ ಮತ್ತು 52.9 kWh ಬ್ಯಾಟರಿ ಚಾರ್ಜ್ ಮಾಡಿದರೆ 449 ಕಿ.ಮೀ ರೇಂಜ್ ನೀಡುತ್ತದೆ.

ಎಂಜಿ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನುರಾಗ್ ಮೆಹ್ರೋತ್ರಾ ಮಾತನಾಡಿ, "ವಿಂಡ್ಸರ್ ತನ್ನ ಪ್ರಾಯೋಗಿಕತೆ, ತಂತ್ರಜ್ಞಾನ ಮತ್ತು ಫ್ಯೂಚರಿಸ್ಟಿಕ್ ವಿನ್ಯಾಸದೊಂದಿಗೆ ಇವಿ ವಿಭಾಗ ವಿಭಾಗದಲ್ಲಿ ಮುನ್ನುಗ್ಗುತ್ತಿದೆ. ಇದು ಫೆನ್ಸ್-ಸಿಟ್ಟರ್‌ಗಳನ್ನು ಹೆಮ್ಮೆಯ ಇವಿ ಮಾಲೀಕರಾಗಿ ಪರಿವರ್ತಿಸುವ ಮೂಲಕ ಇವಿ ಖರೀದಿಯ ವೇಗವನ್ನು ಯಶಸ್ವಿಯಾಗಿ ಸಕ್ರಿಯಗೊಳಿಸಿದೆ.
ಖಂಡಿತವಾಗಿಯೂ ಭಾರತದ ಇವಿ ಕ್ರಾಂತಿಯಲ್ಲಿ ಒಂದು ಟ್ರೆಂಡ್‌ಸೆಟರ್ ಆಗಿದೆ. ವಿಂಡ್ಸರ್‌ನೊಂದಿಗೆ ಗ್ರಾಹಕರು ಬ್ರಾಂಡ್‌ಗೆ ವಿಶ್ವಾಸ ವ್ಯಕ್ತಪಡಿಸಿರುವುದನ್ನು ನಾವು ನೋಡಿದ್ದೇವೆ, ತಮ್ಮ ಗೆಳೆಯರನ್ನೂ ಇವಿ ಖರೀದಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಇದು 2025 ರ ಭಾರತದ ನಂ.1 ಮಾರಾಟದ ಇವಿ ಆಗಿರುವುದರಿಂದ ನನಗೆ ಸಂಪೂರ್ಣವಾಗಿ ಸಂತೋಷವಾಗಿದೆ, 2026 ಇನ್ನಷ್ಟು ಸ್ಮರಣೀಯವಾಗಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದರು.


Click it and Unblock the Notifications








