Tata: ವಿಶ್ವದರ್ಜೆಯ ಸುರಕ್ಷತೆ... ಎಲ್ಲಾ ದೇಶಗಳು ತಿರುಗಿ ನೋಡುವಂತಹ 17 ಟಾಟಾ ಟ್ರಕ್‌ಗಳ ಬಿಡುಗಡೆ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ (Tata Motors), ಭಾರತೀಯ ಟ್ರಕ್ ಕ್ಷೇತ್ರವನ್ನೇ ಬದಲಿಸುವ ಮಹತ್ವದ ಹೆಜ್ಜೆಯಾಗಿ ಮುಂದಿನ ಪೀಳಿಗೆಯ 17 ಟ್ರಕ್‌ಗಳ ಶ್ರೇಣಿಯನ್ನು ಬಿಡುಗಡೆ ಮಾಡಿದೆ. 7 ರಿಂದ 55 ಟನ್‌ಗಳವರೆಗಿನ ವಿಭಾಗದ ಈ ಹೊಸ ಟ್ರಕ್‌ಗಳು ಸುರಕ್ಷತೆ, ಲಾಭ ಮತ್ತು ಪ್ರಗತಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಿವೆ. ಈ ಸಮಗ್ರ ವಾಹನಗಳ ಬಿಡುಗಡೆಯಲ್ಲಿ ಹೊಚ್ಚ ಹೊಸ ಅಜುರಾ ಸಿರೀಸ್, ಅತ್ಯಾಧುನಿಕ ಟಾಟಾ ಟ್ರಕ್ಸ್.ಇವಿ ಸಿರೀಸ್ ಮತ್ತು ಪ್ರೈಮಾ, ಸಿಗ್ನಾ ಹಾಗೂ ಅಲ್ಟ್ರಾ ವಾಹನಗಳ ಸುಧಾರಿತ ಆವೃತ್ತಿಗಳನ್ನು ಪರಿಚಯಿಸಲಾಗಿದೆ.

ILMCV ವಿಭಾಗಕ್ಕೆ ಅಜುರಾ ಪರಿಚಯ

ಟಾಟಾ ಮೋಟಾರ್ಸ್ ಹೊಚ್ಚ ಹೊಸದಾದ ಅಜುರಾ ಸಿರೀಸ್ ಅನ್ನು ಬಿಡುಗಡೆ ಮಾಡಿದೆ. ಮಧ್ಯಮ ಮತ್ತು ಹಗುರವಾದ ವಾಣಿಜ್ಯ ವಾಹನ (ಐಎಲ್ಎಂಸಿವಿ) ವಿಭಾಗದಲ್ಲಿ ಅತ್ಯುತ್ತಮ ಪರ್ಫಾಮೆನ್ಸ್, ಹೆಚ್ಚಿನ ಸೌಕರ್ಯ ಮತ್ತು ಹೆಚ್ಚಿನ ಅವಧಿ ಕೆಲಸ ಮಾಡುವ ಸಾಮರ್ಥ್ಯವನ್ನು (ಅಪ್ ಟೈಮ್) ಒದಗಿಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಉತ್ಪಾದಕತೆ, ಸುರಕ್ಷತೆ ಮತ್ತು ಆರಾಮದಾಯಕ ಚಾಲನೆಗೆ ಒತ್ತು ನೀಡಿ ಸಿದ್ಧಪಡಿಸಲಾದ ಅಜುರಾ, ಆಯಾಸರಹಿತ ಚಾಲನಾ ಅನುಭವ ಒದಗಿಸುತ್ತದೆ.

tata-motors-launches-17-next-generation-trucks-in-india

ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ದಕ್ಷತೆಯನ್ನು ನೀಡುವ ಹೊಸ 3.6-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಅಜುರಾ ಸಿರೀಸ್, 7 ರಿಂದ 19 ಟನ್ ಸಾಮರ್ಥ್ಯಗಳಲ್ಲಿ ಲಭ್ಯವಿದ್ದು, ಇ-ಕಾಮರ್ಸ್, ಎಫ್‌ಎಮ್‌ಸಿಜಿ, ಗೃಹೋಪಯೋಗಿ ವಸ್ತುಗಳ ವಿತರಣೆ, ನಿರ್ಮಾಣ ಸಾಮಗ್ರಿ ಸಾಗಣೆ, ಕೃಷಿ ಮತ್ತು ಕೈಗಾರಿಕಾ ಸರಕುಗಳ ಸಾಗಣೆ ಹಾಗೂ ಅಂತರ್- ನಗರ ಸಾಗಣೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಸೂಕ್ತವಾಗಿದೆ.

ವಿಶ್ವದರ್ಜೆಯ ಸುರಕ್ಷತೆಯ ಪರಿಚಯ

ಟಾಟಾ ಮೋಟಾರ್ಸ್ ತನ್ನ ಸಂಪೂರ್ಣ ಟ್ರಕ್ ಪೋರ್ಟ್‌ಫೋಲಿಯೋವನ್ನು (ಸಿಗ್ನಾ, ಪ್ರೈಮಾ, ಅಲ್ಟ್ರಾ ಮತ್ತು ಹೊಚ್ಚ ಹೊಸ ಅಜುರಾ ಸಿರೀಸ್) ECE R29 03 ಜಾಗತಿಕ ಕ್ರ್ಯಾಶ್ ಸೇಫ್ಟಿ ಮಾನದಂಡಗಳಿಗೆ (ಯುರೋ ಕ್ರ್ಯಾಶ್ ನಿಯಮಗಳು) ಅನುಗುಣವಾಗಿ ಮೇಲ್ದರ್ಜೆಗೇರಿಸುವ ಮೂಲಕ ರಸ್ತೆ ಸುರಕ್ಷತೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಈ ಟ್ರಕ್‌ಗಳ ಕ್ಯಾಬಿನ್‌ಗಳನ್ನು ಮುಖಾಮುಖಿ ಡಿಕ್ಕಿ, ವಾಹನ ಉರುಳುವಿಕೆ ಮತ್ತು ಪಾರ್ಶ್ವಗಳಲ್ಲಿ ಆಗುವ ಡಿಕ್ಕಿಗಳಿಂದ ರಕ್ಷಣೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

tata-motors-launches-17-next-generation-trucks-in-india

ಜೊತೆಗೆ, ಇವುಗಳಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಕೊಲಿಷನ್ ಮಿಟಿಗೇಷನ್ ಸಿಸ್ಟಮ್‌ಗಳಂತಹ ಭಾರತೀಯ ರಸ್ತೆಗಳಿಗೆ ಪೂರಕವಾದ 23 ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಈ ಮೂಲಕ ತನ್ನ ಟ್ರಕ್‌ಗಳನ್ನು ಈ ಪ್ರತಿಷ್ಠಿತ ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಿದ ಏಕೈಕ ಭಾರತೀಯ ತಯಾರಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಟಾಟಾ ಮೋಟಾರ್ಸ್ ಪಾತ್ರವಾಗಿದೆ.

ಟ್ರಕ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಕ್ರಾಂತಿಗೆ ಚಾಲನೆ

ಟಾಟಾ ಮೋಟಾರ್ಸ್ ತನ್ನ ಹೊಸ ಟಾಟಾ ಟ್ರಕ್ಸ್.ಇವಿ ಬ್ರಾಂಡ್ ಅಡಿಯಲ್ಲಿ 7 ರಿಂದ 55 ಟನ್ ಸಾಮರ್ಥ್ಯದ ಎಲೆಕ್ಟ್ರಿಕ್ ಟ್ರಕ್‌ಗಳ ಸಮಗ್ರ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಇವು ಹೊಸ I-MEV (ಇಂಟೆಲಿಜೆಂಟ್ ಮಾಡ್ಯುಲರ್ ಎಲೆಕ್ಟ್ರಿಕ್ ವೆಹಿಕಲ್) ಆರ್ಕಿಟೆಕ್ಚರ್ ಅನ್ನು ಆಧರಿಸಿಕೊಂಡು ಸಿದ್ಧವಾಗಿದ್ದು, ಈ ಟ್ರಕ್‌ಗಳನ್ನು ಇ-ಕಾಮರ್ಸ್, ನಿರ್ಮಾಣ ಮತ್ತು ಬಂದರು ವಲಯದ ಸುಸ್ಥಿರ ಕಾರ್ಯಾಚರಣೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಎಲೆಕ್ಟ್ರಿಕ್ ಟ್ರಕ್ ಗಳಲ್ಲಿ ಒಂದಾಗಿರುವ ಅಲ್ಟ್ರಾ ಇವಿ ಸಿರೀಸ್ 7, 9 ಮತ್ತು 12 ಟನ್ ಸಾಮರ್ಥ್ಯಗಳಲ್ಲಿ ಲಭ್ಯವಿದ್ದು, ಇವು ಭಾರತದ ಅತ್ಯಂತ ಸುಧಾರಿತ ಎಲೆಕ್ಟ್ರಿಕ್ ಲಘು ಟ್ರಕ್‌ಗಳಾಗಿವೆ. ಮತ್ತೊಂದೆಡೆ, ಪ್ರೈಮಾ E.55S ಪ್ರೈಮ್ ಮೂವರ್ 470 kW ಪವರ್ ಮತ್ತು 453 kWh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಹೆವಿ ಡ್ಯೂಟಿ ಕಾರ್ಯಕ್ಷಮತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚದ ಲಾಭ ಒದಗಿಸುವ ಮೂಲಕ ಹೊಸ ದಾಖಲೆ ಬರೆದಿದೆ.

ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಕ್ಕಾಗಿ ವಿನ್ಯಾಸಗೊಳಿಸಲಾದ ಪ್ರೈಮಾ E.28K ಟಿಪ್ಪರ್, ಹೆಚ್ಚಿನ ಟಾರ್ಕ್ ಮತ್ತು ದೃಢತೆಯನ್ನು ಹೊಂದಿದ್ದು, ವೇಗದ ಕಾರ್ಯಾಚರಣೆ ಮತ್ತು ಪರಿಸರ ಸ್ನೇಹಿ ಗಣಿಗಾರಿಕೆಯನ್ನು ಸಾಧ್ಯವಾಗಿಸುತ್ತದೆ. ಟಾಟಾ ಟ್ರಕ್ಸ್.ಇವಿ ಶ್ರೇಣಿಯನ್ನು ಸುಧಾರಿತ ಇವಿ ಆರ್ಕಿಟೆಕ್ಚರ್‌ಗಳು, ಬದ್ಧಿವಂತ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್‌ಗಳು ಮತ್ತು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಬಿಡಿಭಾಗಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಇದು ಎಲೆಕ್ಟ್ರಿಕ್ ಟ್ರಕ್ ವಿಭಾಗವನ್ನು ಭಾರತೀಯ ಉದ್ಯಮಗಳ ವೈವಿಧ್ಯಮಯ ಅಗತ್ಯಗಳಿಗೆ ಮತ್ತು ರಸ್ತೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೆಚ್ಚು ಲಭ್ಯವಾಗುವಂತೆ ಮತ್ತು ವಿಶ್ವಾಸಾರ್ಹವಾಗುವಂತೆ ಮಾಡುತ್ತದೆ. ಈ ಉತ್ಪನ್ನ ಅಭಿವೃದ್ಧಿಯ ಪ್ರಯತ್ನಗಳಿಗೆ ಪೂರಕವಾಗಿ, ಕಸ್ಟಮೈಸ್ ಮಾಡಿದ ಹಣಕಾಸು ಆಯ್ಕೆಗಳು ಮತ್ತು ರಾಷ್ಟ್ರವ್ಯಾಪಿ ಬೆಳೆಯುತ್ತಿರುವ ಚಾರ್ಜಿಂಗ್ ವ್ಯವಸ್ಥೆಯ ಬೆಂಬಲವೂ ಇದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

More from DriveSpark

Article Published On: Wednesday, January 21, 2026, 12:37 [IST]
English summary
Tata motors launches 17 next generation trucks in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+