ಈ ವಾರ ಬಿಡುಗಡೆಯಾಗಲಿರುವ ಆರು ಆಕರ್ಷಕ ಕಾರುಗಳು

By Nagaraja

ದೀಪಾವಳಿ ಹಬ್ಬದ ಆವೃತ್ತಿ ಸಮೀಪಿಸುತ್ತಿರುವಂತೆಯೇ ಮಾರಾಟಕ್ಕೆ ಉತ್ತೇಜನ ನೀಡಲು ಮುಂದಾಗಿರುವ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳೆಲ್ಲ ತನ್ನ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಒಂದೊಂದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಇದರಂತೆ ಈ ವಾರದಲ್ಲಿ ಆರು ಹೊಸ ಮಾದರಿಗಳು ಬಿಡುಗಡೆಯಾಗಲಿದೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ? ಹೌದು, 2014 ಸೆಪ್ಟೆಂಬರ್ 22ರಿಂದ 25ರ ವರೆಗಿನ ಅವಧಿಯಲ್ಲಿ ಆರು ಹೊಸ ಮಾದರಿಗಳು ಬಿಡುಗಡೆಯಾಗಲಿದೆ. ಇದು ದೇಶದಲ್ಲಿ ಕಾರು ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿರುವುದಕ್ಕೆ ಸ್ಪಷ್ಟ ಪುರಾವೆ ನೀಡುತ್ತಿದೆ. ಅಷ್ಟಕ್ಕೂ ಈ ಅವಧಿಯಲ್ಲಿ ಬಿಡುಗಡೆಯಾಗಲಿರುವ ಕಾರುಗಳು ಯಾವುದೇ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ವಿವರ.

1. ಲಂಬೋರ್ಗಿನಿ ಹ್ಯುರಕನ್

1. ಲಂಬೋರ್ಗಿನಿ ಹ್ಯುರಕನ್

ಕಳೆದ ದಿನವಷ್ಟೇ (ಸೆ. 22) ದೇಶದ ಮಾರುಕಟ್ಟೆಗೆ ಲಂಬೋರ್ಗಿನಿ ಹ್ಯುರಕನ್ ಸೂಪರ್ ಕಾರು ಭರ್ಜರಿ ಎಂಟ್ರಿ ಕೊಟ್ಟಿತ್ತು. ಗಲರ್ಡೊ ಉತ್ತರಾಧಿಕಾರಿಯಾಗಿರುವ ಲಂಬೋರ್ಗಿನಿ ಹ್ಯುರಕನ್ ಐಷಾರಾಮಿ ಸೌಲಭ್ಯಗಳನ್ನು ಒದಗಿಸಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 3.43 ಕೋಟಿ ರು.ಗಳಾಗಿದೆ.

2. ಫೋಕ್ಸ್‌ವ್ಯಾಗನ್ ವೆಂಟೊ ಫೇಸ್‌ಲಿಫ್ಟ್

2. ಫೋಕ್ಸ್‌ವ್ಯಾಗನ್ ವೆಂಟೊ ಫೇಸ್‌ಲಿಫ್ಟ್

ಇನ್ನೊಂದೆಡೆ ಗುಣಮಟ್ಟದ ಕಾರುಗಳನ್ನು ನೀಡುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ಫೋಕ್ಸ್‌ವ್ಯಾಗನ್, ತನ್ನ ವೆಂಟೊ ಫೇಸ್‌ಲಿಫ್ಟ್ ಮಾದರಿಯನ್ನು ಸೆಪ್ಟೆಂಬ್ರ 24ರಂದು ಪರಿಚಯಿಸಲಿದೆ. ಹೊಸ ವೆಂಟೊ ಫೇಸ್‌ಲಿಫ್ಟ್ 1.5 ಲೀಟರ್ ಟಿಡಿಐ ಎಂಜಿನ್‌ನೊಂದಿಗೆ 6 ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಪಡೆದುಕೊಳ್ಳಲಿದೆ.

3. ರೆನೊ ಡಸ್ಟರ್ 4x4

3. ರೆನೊ ಡಸ್ಟರ್ 4x4

ಅದೇ ದಿನ ರೆನೊ ಡಸ್ಟರ್ 4x4 ಸಹ ಎಂಟ್ರಿ ಕೊಡಲಿದೆ. ಇದು ಆಫ್ ರೋಡ್ ಚಾಲನೆ ಇಷ್ಟಪಡುವ ಗ್ರಾಹಕರಿಗೆ ಅದ್ಭುತ ಅನುಭವ ನೀಡಲಿದೆ. ಈಗಾಗಲೇ ವಿದೇಶ ಮಾರುಕಟ್ಟೆಯಲ್ಲಿರುವ ಡಸ್ಟರ್ ಆಲ್ ವೀಲ್ ಡ್ರೈವ್ ವರ್ಷನ್ 10ರಿಂದ 12.50 ಲಕ್ಷ ರು.ಗಳ ದರ ವ್ಯಾಪ್ತಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

4. ಸ್ಕೋಡಾ ರಾಪಿಡ್ ಫೇಸ್‌ಲಿಫ್ಟ್

4. ಸ್ಕೋಡಾ ರಾಪಿಡ್ ಫೇಸ್‌ಲಿಫ್ಟ್

ಅಂದ ಹಾಗೆ 2014 ಸೆಪ್ಟೆಂಬ್ರ 25ರಂದು ಜೆಕ್ ಗಣರಾಜ್ಯ ದೈತ್ಯ ಸಂಸ್ಥೆಯಾಗಿರುವ ಸ್ಕೋಡಾ ತನ್ನ ರಾಪಿಡ್ ಫೇಸ್‌ಲಿಫ್ಟ್ ಮಾದರಿಯನ್ನು ಪರಿಚಯಿಸಲಿದೆ. ಈ ಮೂಲಕ ಸ್ಕೋಡಾ ಸಹ ಮಾರಾಟ ಉತ್ತೇಜನವನ್ನು ನಿರೀಕ್ಷೆಯನ್ನಿಟ್ಟುಕೊಂಡಿದೆ.

5. ಮಹೀಂದ್ರ 2014 ಸ್ಕಾರ್ಪಿಯೊ

5. ಮಹೀಂದ್ರ 2014 ಸ್ಕಾರ್ಪಿಯೊ

ಈ ಪೈಕಿ ಅತಿ ಹೆಚ್ಚು ನಿರೀಕ್ಷೆಗೆ ಕಾರಣವಾಗಿರುವ ಹೊಸ ಮಹೀಂದ್ರ ಸ್ಕಾರ್ಪಿಯೊ ಸೆಪ್ಟೆಂಬರ್ 25ರಂದು ಮಾರುಕಟ್ಟೆ ಪ್ರವೇಶಿಸಲಿದೆ. ಈಗಾಗಲೇ ಹಲವು ಬಾರಿ ತೆರೆಮರೆಯಲ್ಲಿ ಕಾಣಿಸಿಕೊಂಡಿರುವ ಮಹೀಂದ್ರದ ಮುಂದಿನ ತಲೆಮಾರಿನ ಎಸ್‌ಯುವಿ ಹೇಗೆ ಮೋಡಿ ಮಾಡಲಿದೆ ಎಂಬುದು ಕುತೂಹಲದ ವಿಚಾರವಾಗಿದೆ.

6. ಷೆವರ್ಲೆ ಸೈಲ್ ಸೆಡಾನ್, ಯುವಿಎ ಹ್ಯಾಚ್‌ಬ್ಯಾಕ್

6. ಷೆವರ್ಲೆ ಸೈಲ್ ಸೆಡಾನ್, ಯುವಿಎ ಹ್ಯಾಚ್‌ಬ್ಯಾಕ್

ಇಗೊ ಬಂದಿದೆ ಸೆಪ್ಟೆಂಬರ್ 25ರ ಮೂರನೇ ಅತಿದೊಡ್ಡ ಲಾಂಚ್. ಅದುವೇ ಪರಿಷ್ಕೃತ ಸೈಲ್ ಸೆಡಾನ್ ಮತ್ತು ಯುವಿಎ ಹ್ಯಾಚ್‌ಬ್ಯಾಕ್. ಈ ಬಗ್ಗೆ ಸಂಸ್ಥೆಯಿಂದ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಬರಬೇಕಾಗಿದೆ.

More from DriveSpark

Article Published On: Tuesday, September 23, 2014, 9:53 [IST]
English summary
Auto industry is so busy this week (2014 Sept. 22-25) as Country's Major Car manufacturers lined upto launch 6 attractive models.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+