ಫಿಯೆಟ್ 500 ಎಲೆಕ್ಟ್ರಿಕ್ ಆಧಾರಿತ ಮೊದಲ ಇವಿಯ ಬಿಡುಗಡೆಗೆ ಸಜ್ಜಾದ ಅಬರ್ಥ್
ಇಟಾಲಿಯನ್ ರೇಸಿಂಗ್ ಮತ್ತು ರೋಡ್ ಕಾರ್ ತಯಾರಕ ಅಬರ್ಥ್ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಹೊಸ ಎಲೆಕ್ಟ್ರಿಕ್ ಕಾರು ಫಿಯೆಟ್ 500 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ.

ಮೂಲಗಳ ಪ್ರಕಾರ, ಅಬರ್ಥ್ 500ನ ಮುಂಬರುವ ಎಲೆಕ್ಟ್ರಿಕ್ ಆವೃತ್ತಿಯು ಬಹುತೇಕ ಫಿಯಟ್‌ನಂತೆಯೇ ಕಾಣುತ್ತಿರುವ ಕಾರಣ ಸಾಮಾನ್ಯ ಫಿಯೆಟ್ 500 ಎಲೆಕ್ಟ್ರಿಕ್ ಕಾರಿಗಿಂತ ಭಿನ್ನವಾಗಿ ವಿನ್ಯಾಸಗೊಳಿಸಲು ಅಬರ್ಥ್ ನಿರ್ದಿಷ್ಟ ಅಂಶಗಳನ್ನು ಸೇರಿಸುವ ಮೂಲಕ ಲುಕ್‌ನಲ್ಲಿ ಭಿನ್ನತೆ ನೀಡಲಿದೆ.

ಈ ಬದಲಾವಣೆಗಳಲ್ಲಿ ಹೆಚ್ಚು ಆಕ್ರಮಣಕಾರಿ ಬಂಪರ್‌ಗಳು, ದೊಡ್ಡ ಅಲಾಯ್ ವ್ಹೀಲ್‌ಗಳು, ಏರ್ ಇನ್‌ಲೆಟ್‌ಗಳು ಮತ್ತು ಔಟ್‌ಲೆಟ್‌ಗಳು, ರೂಫ್ ಸ್ಪಾಯ್ಲರ್ ಒಳಗೊಂಡಿರಲಿದ್ದು, ಇವುಗಳಲ್ಲಿ ಯಾವುದರ ಸಂಯೋಜನೆಯನ್ನಾದರೂ ನಿರ್ಮಾಣಕಾರರು ಸೇರಿಸಬಹುದು ಎನ್ನಲಾಗಿದೆ. ಇದಲ್ಲದೆ, ಫಿಯೆಟ್ 500 ಎಲೆಕ್ಟ್ರಿಕ್ ಆಧಾರಿತ ತಮ್ಮ ಮುಂಬರುವ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳು ಮತ್ತು ಇತರ ವಿವರಗಳ ಬಗ್ಗೆ ಫಿಯೆಟ್ ತುಂಬಾ ಕಾಳಜಿ ವಹಿಸುತ್ತಿದ್ದು, ಎಲ್ಲಿಯೂ ಈ ಬಗ್ಗೆ ಬಿಟ್ಟುಕೊಡುತ್ತಿಲ್ಲ.

ಫಿಯೆಟ್ 500 ಎಲೆಕ್ಟ್ರಿಕ್ ಟಾಪ್-ಎಂಡ್ ಆವೃತ್ತಿಯು 42 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಮತ್ತು 116 ಬಿಹೆಚ್‌ಪಿ ಗರಿಷ್ಠ ಶಕ್ತಿಯನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ನಿಂದ ಚಾಲಿತವಾಗಿದೆ. ಅಬರ್ಥ್ 500ನ ಎಲೆಕ್ಟ್ರಿಕ್ ಆವೃತ್ತಿಯು ಸುಮಾರು 200 ಬಿಹೆಚ್‌ಪಿ ಮತ್ತು ತುಸು ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಸ್ಟ್ಯಾಂಡರ್ಡ್ ಫಿಯೆಟ್ 500 ಕೇವಲ 9 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ ವೇಗವನ್ನು ತಲುಪಬಹುದಾದರೂ, ಫಿಯೆಟ್ 500 ಎಲೆಕ್ಟ್ರಿಕ್‌ನ ಮುಂಬರುವ ಅಬರ್ಥ್ ಆವೃತ್ತಿಯು ಕೇವಲ 7 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಸುಲಭವಾಗಿ ಸಾಧಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದಲ್ಲದೆ ಫಿಯೆಟ್ 500 ಎಲೆಕ್ಟ್ರಿಕ್‌ನ ಮುಂಬರುವ ಅಬರ್ಥ್ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಯಂತೆಯೇ ಒಂದೇ ರೀತಿಯ ಶ್ರೇಣಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಂದರೆ ಫಿಯೆಟ್ 500 ಎಲೆಕ್ಟ್ರಿಕ್‌ನ ಮುಂಬರುವ ಅಬರ್ಥ್ ಆವೃತ್ತಿಯು ಆದರ್ಶ ಪರಿಸ್ಥಿತಿಗಳಲ್ಲಿ ಪೂರ್ಣ ಚಾರ್ಜ್‌ನಲ್ಲಿ 300 ಕಿ.ಮೀ.ಗಳಿಂದ 350 ಕಿ.ಮೀಗಳ ವ್ಯಾಪ್ತಿಯನ್ನು ಹೊಂದಿರಲಿದೆ.

ಇದರ ಜೊತೆಗೆ, ಅಬರ್ಥ್ನ ಹೊಸ ಮಾದರಿಯು ಕಂಪನಿಗೆ ಬಹಳ ಅವಶ್ಯಕವಾಗಿದೆ. ಏಕೆಂದರೆ ಪ್ರಸ್ತುತ ಮಾರಾಟದಲ್ಲಿರುವ ಏಕೈಕ ಅಬರ್ಥ್ ಮಾದರಿಯು ಅಬಾರ್ತ್ 595 ಆಗಿದ್ದು, ಇದು ಹಿಂದಿನ ಪೆಟ್ರೋಲ್ ಚಾಲಿತ ಫಿಯೆಟ್ 500ಗಳಿಗೆ ಸಂಬಂಧಿಸಿರುವುದಾಗಿದೆ ಹಾಗಾಗಿ ಎಲೆಕ್ಟ್ರಿಕ್ ವಿಭಾಗದಲ್ಲಿ ಇದು ಬಹುಮುಖ್ಯವಾಗಿದೆ.

ಇನ್ನು ಫಿಯೆಟ್ 500 ಎಲೆಕ್ಟ್ರಿಕ್‌ನ ಹೊಸ ಅಬರ್ಥ್ ಆವೃತ್ತಿಯ ಬಿಡುಗಡೆಯೊಂದಿಗೆ, ಹೊಸ ಮಾದರಿಯು ಹಳೆಯ ಅಬರ್ಥ್ 595 ಅನ್ನು ಬದಲಾಯಿಸುವ ಸಾಧ್ಯತೆಯಿದೆ. ಆ ಮೂಲಕ ಅಬರ್ಥ್ ಉತ್ಪನ್ನದ ಪೋರ್ಟ್‌ಫೋಲಿಯೊ ಅಡಿಯಲ್ಲಿ ಆಂತರಿಕ ದಹನಕಾರಿ ಎಂಜಿನ್‌ಗಳನ್ನು ಕೊನೆಗೊಳಿಸಬಹುದು. 2025ರ ಪ್ರಾರಂಭದಿಂದ ಮಾರಾಟಕ್ಕೆ ಹೋಗುವ ಮತ್ತೊಂದು ಅಬರ್ಥ್ ಮಾದರಿಯ ವದಂತಿಗಳಿದ್ದು, ಇದು ಫಿಯೆಟ್ ಉತ್ಪನ್ನದ ಪೋರ್ಟ್‌ಫೋಲಿಯೊವನ್ನು ಆಧರಿಸಿದೆ ಎನ್ನಲಾಗಿದೆ.

ಫಿಯೆಟ್ 500 ಎಲೆಕ್ಟ್ರಿಕ್‌ನ ಮುಂಬರುವ ಅಬರ್ಥ್ ಆವೃತ್ತಿಯು ಕಂಪನಿಗೆ ಹೊಸ ಆಯಾಮವನ್ನು ನೀಡಲಿದೆ ಮತ್ತು ಇದು ಅಬರ್ಥ್ಗೆ ಹೊಸ ಅಧ್ಯಾಯವಾಗಲಿದೆ. ಅಬರ್ಥ್ ಕಾರನ್ನು ಅಭಿವೃದ್ಧಿಪಡಿಸಲು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುತ್ತಿರುವುದರಿಂದ ಈ ಕಾರಿನ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ.


Click it and Unblock the Notifications








