ಇನ್ನು ಮುಗಿದಿಲ್ಲ ದುಬೈ ಪೊಲೀಸ್ ಅದ್ಧೂರಿ ಕಾರು ಕ್ರೇಜ್
ವಿಶ್ವದ ಅತ್ಯಂತ ಶ್ರೀಮಂತ ಭದ್ರತಾ ವ್ಯವಸ್ಥೆ ಹೊಂದಿರುವ ದುಬೈ ಪೊಲೀಸ್ ಅದ್ದೂರಿ ಕಾರು ಕ್ರೇಜ್ ಸದ್ಯಕ್ಕಂತೂ ಮುಗಿಯುವ ಯಾವುದೇ ಲಕ್ಷ್ಮಣಗಳು ಗೋಚರಿಸುತ್ತಿಲ್ಲ.
ಕೆಲವು ದಿನಗಳ ಹಿಂದೆಯಷ್ಟೇ ವಿಶ್ವದ ಐಷಾರಾಮಿ ಕಾರುಗಳಾದ ಲಂಬೋರ್ಗಿನಿ ಅವೆಂಟಡೊರ್ ಹಾಗೂ ಫೆರಾರಿ ಎಫ್‌ಎಫ್ ಕಾರು ತಮ್ಮದಾಗಿಸಿಕೊಂಡಿದ್ದ ದುಬೈ ಪೊಲೀಸ್ ಇದೀಗ ಐಕಾನ್ ಕಾರು ಸಂಸ್ಥೆ ಆಸ್ಟನ್ ಮಾರ್ಟಿನ್ ಸೂಪರ್ ಕಾರೊಂದನ್ನು ಖರೀದಿಸಿಕೊಂಡಿದೆ.
ತಾಜಾ ಮಾಹಿತಿ ಪ್ರಕಾರ ಆಸ್ಟನ್ ಮಾರ್ಟಿನ್ ಒನ್ 77 ಸೇರ್ಪಡೆ ಮೂಲಕ ದುಬೈ ಪೊಲೀಸ್ ಇನ್ನಷ್ಟು ಪವರ್‌ಫುಲ್ ಎನಿಸಿಕೊಳ್ಳಲಿದೆ. ಯಾಕೆಂದರೆ ಇದು ವಿಶ್ವದ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಹಾಗಿದ್ದರೆ ಬನ್ನಿ ಫೋಟೊ ಗ್ಯಾಲರಿ ಮೂಲಕ ಹೆಚ್ಚಿನ ಮಾಹಿತಿ ಪಡೆಯೋಣ...

ಅಷ್ಟಕ್ಕೂ ಆಸ್ಟನ್ ಮಾರ್ಟಿನ್ ದರ ನಿಮ್ಮಿಂದ ಊಹಿಸಲು ಸಾಧ್ಯವೇ? ಇದರ ದರ ಬರೋಬ್ಬರಿ 10 ಕೋಟಿ ರು.ಗಳಾಗಿವೆ. ಆದರೆ ಕೇವಲ ಲಿಮಿಟೆಡ್ 77 ಯುನಿಟ್‌ಗಳು ಮಾತ್ರ ಲಭ್ಯವಿರಲಿದೆ.

7.3 ಲೀಟರ್ ವಿ12 ಎಂಜಿನ್‌ನಿಂದ ಆಸ್ಟನ್ ಮಾರ್ಟಿನ್ ಒನ್-77 ನಿಯಂತ್ರಿಸಲ್ಪಡುತ್ತಿದ್ದು, 750 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಕೇವಲ 3.7 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಪ್ರತಿ ಗಂಟೆಗೆ 354 ಕೀ.ಮೀ. ವೇಗದಲ್ಲಿ ಚಲಿಸಲಿದೆ.

ದುಬೈ ಪೊಲೀಸ್ ಬಳಿಯಿರುವ ಅತಿ ದುಬಾರಿ ಕಾರೆಂಬ ಖ್ಯಾತಿಗೂ ಆಸ್ಟನ್ ಮಾರ್ಟಿನ್ ಪಾತ್ರವಾಗಿದೆ. ಹಾಗೆಯೇ ಇದು ಆಸ್ಟನ್ ಮಾರ್ಟಿನ್‌ನಿಂದ ಉತ್ಪಾದನೆಯಾದ ಅತಿ ದುಬಾರಿ ಕಾರು ಕೂಡಾ ಆಗಿದೆ.




Click it and Unblock the Notifications








