ಆಡಿಯಿಂದ ಐಷಾರಾಮಿ ಎ8 ಎಲ್ ಮಾದರಿ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ಇಂದು (ಶನಿವಾರ) ತನ್ನ ಅತ್ಯಂತ ಯಶಸ್ವಿ ಫ್ಲ್ಯಾಗ್‌ಶಿಪ್ ಮಾದರಿಯಾಗಿರುವ ಆಡಿ ಎ8 ಎಲ್ ಬಿಡುಗಡೆ ಮಾಡಿದೆ. ಇದರ ಬೆಂಗಳೂರು ಎಕ್ಸ್ ಶೋ ರೂಂ ಪ್ರಾರಂಭಿಕ ದರ 1.15 ಕೋಟಿ ರು.ಗಳಾಗಿವೆ.

ನೂತನ ಆಡಿ ಎ8 ಎಲ್ ಅಪ್‌ಗ್ರೇಡ್ ಮಾಡಲಾಗಿದ್ದು, ಅತ್ಯುತ್ತಮ ವಿನ್ಯಾಸ, ಕೈಯಿಂದ ನಿರ್ಮಿತವಾದ ಗುಣಮಟ್ಟ, ಹಗುರ ನಿರ್ಮಾಣ ಮತ್ತು ಅತ್ಯಧಿಕ ಹೈ ಎಂಡ್ ತಂತ್ರಜ್ಞಾನಗಳು ಆಳವಡಿಸಲಾಗಿದೆ. ಆಡಿ ಎ8 ಎಲ್ ಎಕ್ಸ್‌ಕ್ಲೂಸಿವ್ ಚಿತ್ರಗಳು ಹಾಗೂ ಸಮಗ್ರ ಮಾಹಿತಿಗಾಗಿ ಪೋಟೊ ಫೀಚರ್‌ನತ್ತ ಮುಂದುವರಿಯಿರಿ...

ಬೆಂಗಳೂರು ಎಕ್ಸ್ ಶೋ ರೂಂ ಪ್ರಾರಂಭಿಕ ದರ

ಬೆಂಗಳೂರು ಎಕ್ಸ್ ಶೋ ರೂಂ ಪ್ರಾರಂಭಿಕ ದರ

  • ಆಡಿ ಎ8 ಎಲ್ 3.0 ಟಿಡಿಐ - 1.15 ಕೋಟಿ ರು.
  • ಆಡಿ ಎ8 ಎಲ್ 4.2 ಟಿಡಿಐ ಕ್ವಾಟ್ರೊ - 1.26 ಕೋಟಿ ರು.
  • ಆಡಿ ಎ8 ಎಲ್ ಡಬ್ಲ್ಯು12- 1.80 ಕೋಟಿ ರು.
  • ಆಡಿಯಿಂದ ಐಷಾರಾಮಿ ಎ8 ಎಲ್ ಮಾದರಿ ಬಿಡುಗಡೆ

    ಆಡಿ ಬೆಂಗಳೂರಿನ ಉಪಾಧ್ಯಕ್ಷರಾದ ಮಿ. ಗಜಾನನ್ ಹೆಗಡೇಕಟ್ಟೆ, "ಆಡಿಯಲ್ಲಿ, ಪ್ರತಿ ಹೊಸ ವಾಹನದ ಆರಂಭದ ತತ್ವದ ಹಿಂದೆ ನಮ್ಮ ಗ್ರಾಹಕರ ಅಗತ್ಯಗಳನ್ನು ನಿರೀಕ್ಷಿಸುತ್ತೇವೆ ಮತ್ತು ಅದನ್ನು ತನ್ನ ಮಾರ್ಗದಲ್ಲೇ ಅತ್ಯುತ್ತಮ ತಂತ್ರಜ್ಞಾನ ಹಾಗೂ ವಿನ್ಯಾಸ ಎಂಜಿನಿಯರಿಗ್‌ನೊಂದಿಗೆ ಮಿಶ್ರ ಮಾಡುತ್ತೇವೆ. ಅಂತೆಯೇ ಅತ್ಯದ್ಭುತ ವಿನ್ಯಾಸ, ಆಕರ್ಷಣೀಯ ಗುಣಮಟ್ಟ, ಅಡ್ವಾನ್ಸ್ ಹಗುರ ನಿರ್ಮಾಣ ಮತ್ತು ಹೈ-ಎಂಡ್ ಗ್ಯಾಡ್ಜೆಟ್‌ಗಳ ವಿಫುಲತೆಯೊಂದಿಗೆ ಆಡಿಯ ಫ್ಲ್ಯಾಗ್‌ಶಿಪ್ ಕೊಡುಗೆಯಾದ ಎ8ಎಲ್ ನಿರ್ಮಾಣ ಮಾಡಲಾಗಿದೆ" ಎಂದಿದ್ದಾರೆ.

    ಆಡಿಯಿಂದ ಐಷಾರಾಮಿ ಎ8 ಎಲ್ ಮಾದರಿ ಬಿಡುಗಡೆ

    2014ನೇ ಸಾಲಿನಲ್ಲಿ ನಾಲ್ಕನೇ ತಲೆಮಾರಿನ ಹೊಸ, ವಿಶಿಷ್ಟ ಆಡಿ ಎ8ಎಲ್ ಪರಿಚಯಿಸಲಾಗುತ್ತಿದ್ದು, ಇದು ಹೆಚ್ಚು ಶಕ್ತಿಶಾಲಿ ಹಾಗೂ ಅಷ್ಟೇ ಪರಿಣಾಮಕಾರಿ ಎಂಜಿನ್, ಪರಿಷ್ಕೃತ ಇಂಟಿರಿಯರ್, ವಿಶಿಷ್ಟ್ ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲೈಟ್ ಪ್ರಮುಖವಾಗಿದೆ.

    ಆಡಿಯಿಂದ ಐಷಾರಾಮಿ ಎ8 ಎಲ್ ಮಾದರಿ ಬಿಡುಗಡೆ

    ಪ್ರಮುಖವಾಗಿಯೂ ಆಡಿ ಎ8 ಎಲ್, ಜಾಗ್ವಾರ್ ಎಕ್ಸ್‌ಜೆ, ಬಿಎಂಡಬ್ಲ್ಯು 7 ಸಿರೀಸ್, ಮರ್ಸಿಡಿಸ್ ಎಸ್ ಕ್ಲಾಸ್ ಮಾದರಿಗಳಿಗೆ ಸ್ಪರ್ಧೆ ಒಡ್ಡಲಿದೆ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ 10 ಯುನಿಟ್‌ಗಳ ಮಾರಾಟ ಹೊಂದುವ ಗುರಿಯನ್ನು ಸಂಸ್ಥೆ ಹೊಂದಿದೆ.

    ಮುಖ್ಯಾಂಶಗಳು

    ಮುಖ್ಯಾಂಶಗಳು

    ವಿನ್ಯಾಸ

    ಡೈನಾಮಿಕ್ ರಚನೆಯ ವಿನ್ಯಾಸ,

    ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲೈಟ್,

    ಅತ್ಯದ್ಭುತ ಗುಣಲಕ್ಷಣಕ್ಕಾಗಿ ಕ್ರೋಮ್ ಸೌರಂಡ್,

    ಬೊನೆಟ್ 3ಡಿ ಲುಕ್

    ಚಾಲನಾ ಅನುಭವ

    ಚಾಲನಾ ಅನುಭವ

    ಸ್ಫೋರ್ಟಿ ಸಾಮರ್ಥ್ಯ,

    ಪರಿಣಾಮಕಾರಿ ಎಂಜಿನ್,

    ಎ8 4.2 ಟಿಡಿಐಕ್ಯೂ (385 ಬಿಎಚ್‌ಪಿ)

    ಕ್ವಾಟ್ರೊ

    ಐಷಾರಾಮಿ

    ಐಷಾರಾಮಿ

    ಹ್ಯಾಂಡ್‌ಕ್ರಾಫ್ಟೆಡ್ ಅತ್ಯುತ್ತಮತೆ

    ವಿಶಿಷ್ಟ ಒಳಾಂಗಣ,

    ವ್ಯವಸ್ಥೀಕರಣಕ್ಕೆ ಲಭ್ಯವಾದ ಆಯ್ಕೆಗಳಿಗೆ ಸೂಪರ್ಬ್ ಕ್ರಾಫ್ಟ್‌ಮ್ಯಾನ್‌ಶಿಪ್

    ಅಧಿಕ ಗುಣಮಟ್ಟದ ಮೆಟಿರಿಯಲ್

    ವೈಯಕ್ತಿಕರಣ

    ಕಸ್ಟಮೈಸ್ಡ್ ಮಾಡುವ ಅವಕಾಶ

    ಕಸ್ಟಮೈಸ್ಡ್ ಮಾಡುವ ಅವಕಾಶ

    ಹೊಸ ಆಡಿ ಎ8 ಎಲ್ ಮಾದರಿಯ ಪ್ರಮುಖ ವೈಶಿಷ್ಟ್ಯವೆಂದರೆ ಗ್ರಾಹಕರು ತಮ್ಮ ಬಯಕೆಗೆ ಅನುಸಾರವಾಗಿ ಕಷ್ಟಮೈಸ್ಡ್ ಮಾಡಬಹುದಾಗಿದೆ. ಇದರೊಂದಿಗೆ 111 ಬಾಹ್ಯ ಬಣ್ಣಗಳು, 23 ಲೆಥರ್ ಬಣ್ಣಗಳು 27 ವೈಯಕ್ತೀಕರಣಗೊಳಿಸಬಹುದಾದ ಭಾಗಗಳು, 12 ಮರದ ಇನ್ಲೇಗಳಿದ್ದು, ಗ್ರಾಹಕರು ವೈಯಕ್ತಿ ಹೆಡ್ ರೆಸ್ಟ್ ಲೊಗೊ, ಡೋರ್ ಸಿಲ್ ಟ್ರಿಂಗ್ ಮತ್ತು ವಿಶಿಷ್ಟ ಫೋಲ್ಡಿಂಗ್ ಟೇಬಲ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

    ನವೀನ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳು

    ನವೀನ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳು

    ಹೊಸ ಆಡಿ ಎ8ಎಲ್ ಮಾದರಿಯ ಮಗದೊಂದು ವಿಶಿಷ್ಟತೆಯೆಂದರೆ ಇದರಲ್ಲಿ ಆಳವಡಿಸಲಾಗಿರುವ ಮ್ಯಾಟ್ರಿಕ್ ಹೆಡ್‌ಲ್ಯಾಂಪ್‌ಗಳು. ಐಷಾರಾಮಿ ಕಾರು ತಯಾರಕರ ಪೈಕಿ ಇದೇ ಮೊದಲ ಬಾರಿಗೆ ಇದನ್ನು ಪರಿಚಯಿಸಲಾಗುತ್ತಿದೆ. ಆಡಿಯ ಸಿಗ್ನೇಚರ್ ಎಲ್‌ಇಡಿ ಹೆಡ್‌ಲೈಟ್‌ಗಳ ನೇರ ಉಗಮ, ಹೈ ಬೀಮ್ 25 ಸಣ್ಣ, ವೈಯಕ್ತಿಕ ಬೆಳಕು ಹೊರಸೂಸುವ ಡಿಯೋಡ್‌ಗಳನ್ನು ಪ್ರತಿ ಯುನಿಟ್‌ನಲ್ಲಿ ಹೊಂದಿದ್ದು, ಇದನ್ನು ಅಗತ್ಯಕ್ಕೆ ಅನುಗುಣವಾಗಿ ಸ್ವಿಚ್ ಆನ್ ಮತ್ತು ಆಫ್ ಅಥವಾ ಡಿಮ್ ಮಾಡಬಹುದು. ಇದು ಹೆಡ್‌ಲೈಟ್ ಸಿಸ್ಟಂ ಎದುರು ಬರುತ್ತಿರುವ ವಾಹನಗಳಿಗೆ ಪ್ರತಿಕ್ರಿಯಿಸಲು ಮತ್ತು ರಸ್ತೆಯ ಉಳಿದ ಭಾಗಕ್ಕೆ ಸಂಪೂರ್ಣ ಪ್ರಕಾಶ ಬೀರುವುದನ್ನು ಮುಂದುವರೆಸುವ ಅತ್ಯಂತ ನಿಖರವಾದ ಬೆಳಕನ್ನು ಬೀರಿ ಲೈಟ್ ಅನ್ನು ಬ್ಲ್ಯಾಂಕ್ ಮಾಡುತ್ತದೆ.

    ವಿನ್ಯಾಸ

    ವಿನ್ಯಾಸ

    ಹೊಸ ಆಡಿ ಎ8ಎಲ್ ಅತ್ಯಂತ ಅಧಿಕ ಪ್ರಮಾಣದ ಬದಲಾವಣೆಗೆ ಒಳಗಾಗಿದೆ. ಎಂಜಿನ್ ಹುಡ್, ಸಿಂಗಲ್ ಫ್ರೇಂ ಗ್ರಿಲ್ ಮತ್ತು ಮುಂಭಾಗದ ಬಂಪರ್ ಮತ್ತಷ್ಟು ಹೆಚ್ಚು ಕಲಾತ್ಮಕವಾಗಿದ್ದರೆ ನೇರವಾದ ಹೆಡ್‌ಲೈಟ್‌ಗಳ ಕೆಳಭಾಗದ ಮೂಲೆಗಳು ಅದರ ಮುಂಭಾಗಕ್ಕೆ ಆಕರ್ಷಣೀಯ ನೋಟವನ್ನು ನೀಡಿದೆ. ಹೊಸ ಆಡಿಯ ಹಿಂಭಾಗ ಸಂಪೂರ್ಣವಾಗಿ ಮರು ವಿನ್ಯಾಸಗೊಳಿಸಲಾಗಿದ್ದು, ಈಗ ಮೊದಲಿಗಿಂತ ಮತ್ತಷ್ಟು ಏಕರೂಪತೆಯನ್ನು ಹೊಂದಿದೆ. ಕ್ರೋಮ್ ಬೇಸ್ ಅನ್ನು ಹಿಂಭಾಗದ ಲೈಟ್‌ಗಳಿಗೆ ಆಳವಡಿಸಲಾಗಿದೆ. ಹಿಂಭಾಗದ ತುದಿಯ ಗಾತ್ರ ವಾಸ್ತಾವದಲ್ಲಿ ಬದಲಾಗದಿದ್ದರೂ, ಅದರ ಹೊಸ ವಿನ್ಯಾಸ ಮತ್ತಷ್ಟು ತೆಳು ಹಾಗೂ ವಿಶಾಲವಾಗಿಸಿದೆ.

    ಚಾಲನಾ ಅನುಭವ

    ಚಾಲನಾ ಅನುಭವ

    ಆಡಿ ಎ8ಎಲ್ ಎಂಜಿನ್ ಅತ್ಯಂತ ಶಕ್ತಿಶಾಲಿಯಾಗಿದ್ದು, ಮತ್ತಷ್ಟು ಸಾಮರ್ಥ್ಯ ಮತ್ತು ಗರಿಷ್ಠ ಪರಿಣಾಮವನ್ನು ನೀಡುತ್ತದೆ. ಇದರ ಟಿಎಫ್‌ಎಸ್‌ಐ ಗ್ಯಾಸೋಲಿನ್ ಎಂಜಿನ್ ಮತ್ತು ಎರಡು ಟಿಡಿಐ ಯುನಿಟ್‌ಗಳನ್ನು ಹೊಂದಿದೆ. ಇವು ವಿ8 ಬೈಟರ್ಬೊ 4.0 ಟಿಇಎಸ್‌ಟಿ (435 ಬಿಎಚ್‌ಪಿ), ಅಧಿಕ ಪರಿಣಾಮಕಾರಿ 3.0 ಟಿಡಿಐ (250 ಬಿಎಚ್‌ಪಿ) ಮತ್ತು 4.2 ಟಿಡಿಐ (385 ಹೆಚ್‌ಪಿ) ಗಳಾಗಿವೆ. ಇದರಲ್ಲಿ 4.0 ಟಿಎಫ್‌ಎಸ್‌ಐ ಆಡಿ ಎ8ಎಲ್ ಅನ್ನು ಗಂಟೆಗೆ 0-100 ಕೀ.ಮೀ. ಕೇವಲ 4.6 ಸೆಕೆಂಡುಗಳಲ್ಲಿ ವೇಗವರ್ಧಿಸಬಹುದಾಗಿದೆ.

    ಆರಾಮದಾಯಕತೆ

    ಆರಾಮದಾಯಕತೆ

    ಆಡಿ ಒಳಾಗಂಗಣದಲ್ಲಿ ಅತ್ಯದ್ಭುತವಾದ ಲೈನ್‌ಗಳು ಹಾಗೂ ವಿಶಾಲವಾದ ಸ್ಥಳಾವಕಾಶ ಎದ್ದು ಕಾಣಿಸುತ್ತದೆ. ಪ್ರತಿಯೊಂದು ವಿವರವೂ ಹೊಸ ಆಡಿ ಕೈಯಿಂದ ನಿರ್ಮಿಸಲಾದ ವಿಶೇಷ ಗುಣವನ್ನು ಪ್ರಾಯೋಗಿಕವಾಗಿ ತೋರಿಸುತ್ತದೆ. ಆಡಿ ವಿಶಾಲ ಶ್ರೇಣಿಯ ಆಯ್ಕೆಗಳನ್ನು ವೆಂಟಿಲೇಷನ್ ಒಳಗೊಂಡಂತೆ ಮುಂಭಾಗದ ಸೀಟುಗಳಿಗೆ ನೀಡಿದೆ ಮತ್ತು ಐದು ಕಾರ್ಯಗಳಲ್ಲಿ ಮೆಸೇಜ್ ನಿರ್ವಹಣೆಯನ್ನು ನೀಡಿದೆ. ಆಡಿ ಡ್ರೈವ್ ಸೆಲೆಕ್ಟ್‌ನೊಂದಿಗೆ ಹೊಂದಾಣಿಕೆಯ ಏರ್ ಸಸ್ಪೆನ್ಸನ್ ಅತ್ಯುತ್ತಮವಾಗಿದೆ. ಹಿಂಭಾಗದ ಸೀಟ್‌ನ ಎಕ್ಸಿಕ್ಯೂಟಿವ್ ಪ್ಯಾಕೇಜ್ ಮತ್ತು ಬಾಂಗ್ ಹಾಗೂ ಒಲುಫೆನ್ ಸರೌಂಡ್‌ನಿಂದ ಪಾರ್ಕ್ ಅಸಿಸ್ಟ್, ಸರೌಂಡ್ ವ್ಯೂ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್, ಏರ್ ಅಯೋನೈಸರ್, ಹೆಡ್ ಅಪ್ ಡಿಸ್‌ಪ್ಲೇ, ಆಡಿ ವೈರ್‌ಲೆಸ್ ಇಂಟರ್‌ನೆಟ್ ಆಕ್ಸೆಸ್‌ಗಳ ವರೆಗೆ ಮತ್ತು ಅನೇಕ ಹೆಚ್ಚುವರಿ ಲಗ್ಷುರಿ ಲಕ್ಷಣಗಳನ್ನು ನೀಡಿದೆ.

    ಆಯಾಮಗಳು

    ಆಯಾಮಗಳು

    ಹೊಸ ಆಡಿ ಎ8ಎಲ್ 5.14 ಮೀಟರ್ ಉದ್ದವಿದ್ದು, ವೀಲ್ ಬೇಸ್ 3.1 ಮೀಟರ್, 1.95 ಮೀಟರ್ ಅಗಲ ಮತ್ತು 1.46 ಮೀಟರ್ ಎತ್ತರವನ್ನು ಹೊಂದಿದೆ. ಈ ಸೆಡಾನ್ ಕಾರಿನ ಅತ್ಯಾದ್ಭುತ ಬಲವೆಂದರೆ ಇದರ ಹಗುರ ನಿರ್ಮಾಣ. ಆಡಿ ಎ8ಎಲ್ 3.0 ಟಿಒಟಿ ಕ್ವಾಟ್ರೋ ಕೇವಲ 1,935 ಕಿಲೋಗ್ರಾಂನ ಕರ್ಬ್ ತೂಕ ಹೊಂದಿದ್ದು ಇದು ಎಲ್ಲ ವೀಲ್ ಡ್ರೈವ್‌ಗಳ ಸ್ಪರ್ಧಿಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ಓಡಿ ಸ್ಪೇಸ್ ಫ್ರೇಮ್ (ಎಎಸ್‌ಎಫ್) ಸಂಪೂರ್ಣವಾಗಿ ಅಲ್ಯೂಮಿನಿಯಂನಿಂದ ತಯಾರಿಸಲಾಗಿದ್ದು, ಇದು ಕೇವಲ 231 ಕೆ.ಜಿ ತೂಕವಿದೆ.

More from DriveSpark

Article Published On: Saturday, June 7, 2014, 14:06 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+