ಆಡಿ ಐಷಾರಾಮಿ ಕಾರು ಲಾಂಚ್‌ಗೆ ತಾರಾ ಮೆರಗು
ಕಳೆದ ದಿನ ವರದಿ ಮಾಡಿರುವಂತೆಯೇ ಆಡಿ ಐಷಾರಾಮಿ ಆರ್8 ವಿ10 ಪ್ಲಸ್ ಕಾರು ಭಾರತದಲ್ಲಿ ಲಾಂಚ್ ಆಗಿದೆ. ನಿರೀಕ್ಷಿಸಿದಂತೆ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆದ ಬಿಡುಗಡೆ ಸಮಾರಂಭಕ್ಕೆ ಬಾಲಿವುಡ್ ಸೇರಿದಂತೆಯೇ ತಾರಾಗಣವೇ ಆಗಮನವಾಗಿತ್ತು.
ಇತ್ತೀಚೆಗಿನ ವರ್ಷಗಳಲ್ಲಿ ಐಷಾರಾಮಿ ಕಾರು ಬಿಡುಗಡೆ ಸಂದರ್ಭದಲ್ಲಿ ಬಾಲಿವುಡ್‌ನ ಜನಪ್ರಿಯ ನಟ-ನಟಿಯರನ್ನು ಆಹ್ವಾನಿಸಲಾಗುತ್ತದೆ. ಇದು ಕಾರು ತಯಾರಕ ಕಂಪನಿಗಳ ಮಾರಾಟ ತಂತ್ರವೂ ಕೂಡಾ ಹೌದು. ಈ ಮೂಲಕ ಶ್ರೀಮಂತರನ್ನು ಬಹುಬೇಗನೇ ಮನ ಸೆಳೆಯುವ ಪಾಲಿಸಿ ಕೂಡಾ ಹೊಂದಿರುತ್ತದೆ.
ಅಂದ ಹಾಗೆ ಭಾರತಕ್ಕೆ ಎಂಟ್ರಿ ಕೊಟ್ಟಿರುವ ಐಷಾರಾಮಿ ಆಡಿ ಆರ್8 ವಿ10 ಪ್ಲಸ್ ಕಾರಿನ ದೆಹಲಿ ಎಕ್ಸ್ ಶೋ ರೂಂ ದರ 2.05 ಕೋಟಿ ರು.ಗಳಾಗಿವೆ. ಹಾಗೆಯೇ ಇದರಲ್ಲಿ ಅತ್ಯಂತ ಶಕ್ತಿಶಾಲಿ 5.2 ಲೀಟರ್ ವಿ10 ಎಂಜಿನ್ ಆಳವಡಿಸಲಾಗಿದೆ.

ಬಾಲಿವುಡ್ ಸೇರಿದಂತೆ ಭಾರತೀಯ ಎಫ್1 ರೇಸಿಂಗ್ ಸ್ಟಾರ್ ಕರುಣ್ ಚಂದೋಕ್, ಆಡಿ ಆರ್8 ವಿ10 ಪ್ಲಸ್ ಬಿಡುಗಡೆ ಸಂದರ್ಭದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು.

ಕಳೆದ ದಿನ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆ, ಆಡಿ ಐಷಾರಾಮಿ ಕಾರು ಬಿಡುಗಡೆ ಸಮಾರಂಭಕ್ಕಾಗಿ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದರು.

ಅದೇ ರೀತಿ ಬಾಲಿವುಡ್ ನಟ ಸೈಫ್ ಆಲಿ ಖಾನ್ ಸಹ ಉಪಸ್ಥಿತರಿದ್ದರು. ಇದು ಆಡಿ ಬಿಡುಗಡೆ ಸಮಾರಂಭಕ್ಕೆ ಇನ್ನಷ್ಟು ಮೆರಗು ನೀಡುವಂತಾಗಿತ್ತು.

ಈ ಹಿಂದೆ ಆರ್8 ವಿ8 ಕೂಪೆ, ಆರ್8 ವಿ10 ಕೂಪೆ ಹಾಗೂ ಆರ್8 ವಿ10 ಸ್ಪೈಡರ್ ಕಾರುಗಳನ್ನು ಪರಿಚಯಿಸಿತ್ತು. ಈ ಆವೃತ್ತಿಗಳು 1.57 ಕೋಟಿ ರು.ಗಳಿಂದ 1.73 ಕೋಟಿ ರು.ಗಳ ನಿಗದಿಯಾಗಿತ್ತು. ಇದೀಗ ಅತ್ಯಂತ ಶಕ್ತಿಶಾಲಿ ಸೂಪರ್ ಕಾರು ಬಿಡುಗಡೆ ಮಾಡಿದೆ.

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್



Click it and Unblock the Notifications








