ಅಪಘಾತ ಪರೀಕ್ಷೆ ಕಡ್ಡಾಯ; ಕಾರಿನ ಬೆಲೆ ವರ್ಧನೆ?

By Nagaraja

ಐರೋಪ್ಯ ರಾಷ್ಟ್ರಗಳಲ್ಲಿ ಕಾರು ಅಪಘಾತ ಪರೀಕ್ಷೆ ಸಾಮಾನ್ಯ ವಿಚಾರ. ಪ್ರಮುಖವಾಗಿಯೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಕೋನದಲ್ಲಿ ಕಾರುಗಳಿಗೆ ಕ್ರಾಶ್ ಟೆಸ್ಟಿಂಗ್ ನಡೆಸಲಾಗುತ್ತದೆ.

ಇಡೀ ವಿಶ್ವವನ್ನೇ ಗಮನಿಸಿದರೆ ಭಾರತದಲ್ಲಿ ಅತಿ ಹೆಚ್ಚು ಅಪಘಾತ ಪ್ರಸಂಗಗಳು ಎದುರಾಗುತ್ತದೆ. ದಿನಪ್ರತಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳಲ್ಲಿ ನೂರಾರು ಮಂದಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಾರೆ. ಇವೆಲ್ಲವನ್ನು ನಿಯಂತ್ರಿಸಲು ಮುಂದಾಗಿರುವ ಸರಕಾರವು ಕಾರು ಟೆಸ್ಟಿಂಗ್ ಕಡ್ಡಾಯವಾಗಿ ಜಾರಿಗೊಳಿಸುವ ಸಂಭವವಿದೆ.

ಅಪಘಾತ ಪರೀಕ್ಷೆ ಕಡ್ಡಾಯ; ಕಾರಿನ ಬೆಲೆ ವರ್ಧನೆ?

ಕಾರು ಅಪಘಾತ ಪರೀಕ್ಷೆ ಕಡ್ಡಾಯವಾದ್ದಲ್ಲಿ, ದೇಶದ ರಸ್ತೆಗಿಳಿಯುವ ಪ್ರತಿಯೊಂದು ನೂತನ ಕಾರುಗಳು ಪರೀಕ್ಷೆಗೊಳಪಡಬೇಕಾಗುತ್ತದೆ. ಇಲ್ಲಿ ವಾಹನ ತಯಾರಕ ಸಂಸ್ಥೆಗಳು ಕೆಲವೊಂದು ಸುರಕ್ಷಾ ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ.

ಅಪಘಾತ ಪರೀಕ್ಷೆ ಕಡ್ಡಾಯ; ಕಾರಿನ ಬೆಲೆ ವರ್ಧನೆ?

ವರದಿಗಳ ಪ್ರಕಾರ ಭಾರತ್ ನ್ಯೂ ವೆಹಿಕಲ್ ಸೇಫ್ಟಿ ಆಸ್ಸೆಸ್‌ಮೆಂಟ್ ಪ್ರೋಗ್ರಾಂ ಎಂಬ ಕಾರು ಪರೀಕ್ಷೆಗೆ ಸದ್ಯದಲ್ಲೇ ಗ್ರೀನ್ ಸಿಗ್ನಲ್ ಬೀಳಲಿದೆ. ಆದರೆ ಇಂತಹ ಕಡ್ಡಾಯ ನಿಯಮ ಆಳವಡಿಕೆಯಿಂದ ಕಾರುಗಳ ವೆಚ್ಚ ದುಬಾರಿಯಾಗಲಿದೆಯೆಂಬ ಅಪವಾದ ಎದ್ದಿದೆ.

ಅಪಘಾತ ಪರೀಕ್ಷೆ ಕಡ್ಡಾಯ; ಕಾರಿನ ಬೆಲೆ ವರ್ಧನೆ?

ಕಳೆದ ಕೆಲವು ಸಮಯದಿಂದ ಗ್ಲೋಬಲ್ ಎನ್‌ಸಿಎಪಿ ನಡೆಸಿಕೊಂಡು ಬರುತ್ತಿರುವ ಸಣ್ಣ ಕಾರು ಪರೀಕ್ಷೆಯಲ್ಲಿ ಭಾರತದ ಎಲ್ಲ ಮಾದರಿಗಳು ಶೂನ್ಯ ಸಂಪಾದನೆ ಮಾಡುವ ಮೂಲಕ ಮುಜುಗರಕ್ಕೆ ಒಳಗಾಗಿತ್ತು.

ಅಪಘಾತ ಪರೀಕ್ಷೆ ಕಡ್ಡಾಯ; ಕಾರಿನ ಬೆಲೆ ವರ್ಧನೆ?

ಇದೀಗ ಇಂತಹದೊಂದು ಯೋಜನೆಯನ್ನು ಜಾರಿಗೆ ಮಾಡುವ ಮೂಲಕ ಭಾರತ ಕೂಡಾ ಯುರೋಪ್ ಹಾಗೂ ಅಮೆರಿಕ ಸುರಕ್ಷಾ ದರ್ಜೆಗೆ ಸೇರ್ಪಡೆಯಾಗಲಿದೆ. ಈ ನಿಟ್ಟಿನಲ್ಲಿ ನಿಯಮ ಕಡ್ಡಾಯವಾಗಿ ಜಾರಿಯಾಗಬೇಕಾಗಿದೆ.

ಅಪಘಾತ ಪರೀಕ್ಷೆ ಕಡ್ಡಾಯ; ಕಾರಿನ ಬೆಲೆ ವರ್ಧನೆ?

2014 ಮಧ್ಯಂತರ ಅವಧಿಯಲ್ಲಿ ಕಾರುಗಳ ಮೇಲಿನ ಸೇಫ್ಟಿ ಸ್ಟಾರ್ ರೇಟಿಂಗ್ ರಚನೆಯಾಗುವ ನಿರೀಕ್ಷೆಯಿದೆ. ಇದರಂತೆ ಕಾರು ಸೇಫ್ಟಿ ನಿರ್ವಹಣೆ ಪರೀಕ್ಷೆಯಲ್ಲಿ ಭಾಗವಹಿಸಲಿರುವ ಕಾರುಗಳು ಸೈಡ್ ಹಾಗೂ ಹಿಂಬದಿಯ ಕ್ರಾಶ್ ಟೆಸ್ಟ್ ಆಧಾರದಲ್ಲಿ ಸ್ಟಾರ್ ರೇಟಿಂಗ್‌ಗಳನ್ನು ಪಡೆದುಕೊಳ್ಳಲಿದೆ. ಅಲ್ಲದೆ ಭವಿಷ್ಯದಲ್ಲಿ ಪಾದಚಾರಿ ಸುರಕ್ಷತೆ, ಮಕ್ಕಳ ಸುರಕ್ಷತೆ ಮುಂತಾದವುಗಳು ಇದಕ್ಕೆ ಸೇರ್ಪಡೆಯಾಗಲಿದೆ.

ಅಪಘಾತ ಪರೀಕ್ಷೆ ಕಡ್ಡಾಯ; ಕಾರಿನ ಬೆಲೆ ವರ್ಧನೆ?

ಖಂಡಿತವಾಗಿಯೂ ದೇಶದಲ್ಲಿ ಕಾರು ಅಪಘಾತ ಪರೀಕ್ಷೆ ಸಣ್ಣ ಕಾರುಗಳ ದರಗಳ ಮೇಲೆ ನೇರ ಪರಿಣಾಮ ಬೀರಲಿದೆ. ವಾಹನ ತಜ್ಞರ ಪ್ರಕಾರ ಕಾರು ಸಂಸ್ಥೆಗಳು ನೂತನ ಸುರಕ್ಷಾ ಮಾನದಂಡಗಳಿಗೆ ಅನುಸಾರವಾಗಿ ಕಾರಿನ ವಿನ್ಯಾಸದಲ್ಲಿ ಬದಲಾವಣೆ ತರಬೇಕಾಗಿರುವ ಹಿನ್ನಲೆಯಲ್ಲಿ ಬೆಲೆ ಸಹಜವಾಗಿಯೇ ವರ್ಧಿಸಲಿದೆ ಎಂದಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಮ್ಮ ಜೊತೆ ಹಂಚಿಕೊಳ್ಳಿರಿ...

More from DriveSpark

Article Published On: Thursday, May 22, 2014, 7:01 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+