ಫೋರ್ಡ್ ಇಕೊಸ್ಪೋರ್ಟ್‌ಗೆ 'ವರ್ಷದ ಕಾರು' ಗೌರವ
ಕೆಲವು ದಿನಗಳ ಹಿಂದೆಯಷ್ಟೇ ಜೆ.ಡಿ. ಪವರ್ ವರ್ಷದ ಕಾರು ಪ್ರಶಸ್ತಿ ಪ್ರಕಟಗೊಂಡಿತ್ತು. ಎಲ್ಲ ಅರ್ಥದಲ್ಲೂ ಗ್ರಾಹಕರ ಮನಸೊರೆಗೊಂಡಿದ್ದ ಗ್ರಾಂಡ್ ಐ10 ವರ್ಷದ ಕಾರು ಪ್ರಶಸ್ತಿ ಬಾಚಿಕೊಂಡಿತ್ತು. ಆದರೆ ದೇಶದ ಇನ್ನಿತರ ಪ್ರತಿಷ್ಠಿತ ವಾಹನ ಉತ್ತೇಜಕ ಸಂಸ್ಥೆ ನಡೆಸಿರುವ ಅಧ್ಯಯನದಲ್ಲಿ ವಿಭಿನ್ನ ಫಲಿತಾಂಶ ದಾಖಲಾಗಿರುವುದು ಕಂಡುಬಂದಿದೆ. ಬ್ಲೂಮ್‌ಬರ್ಗ್ ಟಿವಿ ಮತ್ತು ಆಟೋಕಾರು ನಡೆಸಿರುವ ಜಂಟಿ ಅನ್ವೇಷಣೆಯಲ್ಲಿ ಜನಪ್ರಿಯ ಕಾಂಪಾಕ್ಟ್ ಎಸ್‌ಯುವಿ ಫೋರ್ಡ್ ಇಕೊಸ್ಪೋರ್ಟ್ ವರ್ಷದ ಕಾರು ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ.
ಹ್ಯುಂಡೈ ಗ್ರಾಂಡ್ ಐ10ಗೆ 'ಭಾರತದ ವರ್ಷದ ಕಾರು ಪ್ರಶಸ್ತಿ' ಗರಿ
ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಒಟ್ಟು ಮೂರು ಪ್ರಶಸ್ತಿಗಳನ್ನು ಇಕೊಸ್ಪೋರ್ಟ್ ಬಾಚಿಕೊಂಡಿದೆ. ಅವುಗಳಲ್ಲಿ ಅತ್ಯುತ್ತಮ ಎಸ್‌ಯುವಿ, ವೀಕ್ಷಕರ ಆಯ್ಕೆ ಮತ್ತು ಅತ್ಯುತ್ತಮ ಹಣದ ಮೌಲ್ಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ. ಇದರ ಜತೆಗೆ ಬಹುರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿರುವ 1.0 ಲೀಟರ್ ಎಂಜಿನ್, 'ಇಂಡಿಯನ್ ಎಂಜಿನ್ ಆಫ್ ದಿ ಇಯರ್' ಪ್ರಶಸ್ತಿಗೂ ಅರ್ಹವಾಗಿದೆ. ಒಟ್ಟಾರೆಯಾಗಿ ವಿವಿಧ ವಿಭಾಗಗಳಲ್ಲಾಗಿ 24 ಪ್ರಶಸ್ತಿಗಳನ್ನು ಹಂಚಿಕೊಳ್ಳಲಾಗಿತ್ತು. ಅಂತರಾಷ್ಟ್ರೀಯ ಮಟ್ಟದ ಎಂಟು ಸದಸ್ಯರ ತೀರ್ಪುಗಾರರ ಸಂಘವು ಪ್ರಶಸ್ತಿಯನ್ನು ಆರಿಸಿತ್ತು.

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಕಾರು ಪ್ರಶಸ್ತಿ - ಫೋರ್ಡ್ ಇಕೊಸ್ಪೋರ್ಟ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಬೈಕ್ - ಕೆಟಿಎಂ ಡ್ಯೂಕ್ 390 ಡ್ಯೂಕ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಪ್ರೀಮಿಯಂ ಎಸ್‌ಯುವಿ - ಮರ್ಸಿಡಿಸ್ ಜಿಎಲ್-ಕ್ಲಾಸ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಎಸ್‌ಯುವಿ - ಫೋರ್ಡ್ ಇಕೊಸ್ಪೋರ್ಟ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಸೆಡಾನ್ (ಸಲೂನ್) ಕಾರು - ಹೋಂಡಾ ಅಮೇಜ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಕಾಂಪಾಪ್ಟ್ ಲಗ್ಷುರಿ ಕಾರು - ಬಿಎಂಡಬ್ಲ್ಯು 1 ಸಿರೀಸ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಕಾಂಪಾಕ್ಟ್ ಕಾರು - ಹ್ಯುಂಡೈ ಗ್ರಾಂಡ್ ಐ10

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಎಂಜಿನ್ - ಫೋರ್ಡ್ ಇಕೊಬೂಸ್ಟ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಕಾರು ತಯಾರಕ - ಹೋಂಡಾ ಕಾರ್ಸ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ಬೆಸ್ಟ್ ಡ್ರೈವರ್ ಕಾರು - ಬಿಎಂಡಬ್ಲ್ಯು 1 ಸಿರೀಸ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವೀಕ್ಷಕರ ಆಯ್ಕೆಯ ವರ್ಷದ ಕಾರು - ಫೋರ್ಡ್ ಇಕೊಸ್ಪೋರ್ಟ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವೀಕ್ಷಕರ ಆಯ್ಕೆಯ ವರ್ಷದ ಬೈಕ್ - ಮಹೀಂದ್ರ ಸೆಂಚುರೊ

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಎಂಪಿವಿ ಕಾರು - ಷೆವರ್ಲೆ ಎಂಜಾಯ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ನಿರ್ವಹಣಾ ಕಾರು - ಪೋರ್ಷೆ ಕೇಮ್ಯಾನ್ ಎಸ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಆಮದು ಕಾರು - ರೇಂಜ್ ರೋವರ್ ಸ್ಪೋರ್ಟ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಪ್ರೀಮಿಯಂ ಬೈಕ್ - ಹ್ಯೊಸಂಗ್ ಜಿವಿ650 ಅಕ್ವಿಲಾ ಪ್ರೊ

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಆಮದು ಬೈಕ್ - ಕವಾಸಕಿ ನಿಂಜಾ ಝಡ್‌ಎಕ್ಸ್-14ಆರ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ಅತ್ಯುತ್ತಮ ಹಣದ ಮೌಲ್ಯ ಕಾರು- ಫೋರ್ಡ್ ಇಕೊಸ್ಪೋರ್ಟ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಹಸಿರು ಕಾರು - ಮಹೀಂದ್ರ ಇ20

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕಾರು - ಫೋರ್ಡ್ ಎಸ್‌ವೈಎನ್‌ಸಿ ಜತೆಗೆ ಎಮರ್ಜನ್ಸಿ ಎಕ್ಸಿಟ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಅತ್ಯುತ್ತಮ ವೆರಿಯಂಟ್ - ಆಡಿ ಕ್ಯೂ3 ಎಸ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ಅತ್ಯುತ್ತಮ ಡಿಸೈನ್ ಮತ್ತು ಸ್ಟೈಲ್ - ಮರ್ಸಿಡಿಸ್ ಎ-ಕ್ಲಾಸ್

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ಆಧುನಿಕತೆಯ ಸುರಕ್ಷತೆ ಮತ್ತು ರಕ್ಷಣೆಯ ಕಾರು - ವೋಲ್ವೋ ವಿ40ಯಲ್ಲಿ ವೋಲ್ವೋ ಸಿಟಿ ಸೇಫ್ಟಿ

ಬ್ಲೂಮ್‌ಬರ್ಗ್ ಟಿವಿ- ಆಟೋಕಾರ್ ವರ್ಷದ ಕಾರು ಡೀಲರ್ - ಸೈರ್ ಸರ್ವೀಸ್


Click it and Unblock the Notifications








