ತುಮಕೂರಿನ ವೆಸ್ಪಾ ಸ್ಕೂಟರ್‌ಗೆ ಲಿಮ್ಕಾ ದಾಖಲೆಯ ಗರಿ

By Nagaraja

ತುಮಕೂರಿನ ಯುವ ಪ್ರತಿಭಾವಂತ ವಾಹನ ಉತ್ಸಾಹಿ ಪ್ರತೀಕ್ ಜೈನ್ ಅವರ ವೆಸ್ಪಾ ಸ್ಕೂಟರ್‌ಗೆ ಲಿಮ್ಕಾ ದಾಖಲೆಯ ಗರಿ ಬಂದಿದೆ. ದೇಶದ ಪ್ರತಿಭಾವಂತರನ್ನು ಹುಡುಕಿಕೊಂಡು ಅವರಿಗೆ ಮನ್ನಣೆ ನೀಡುತ್ತಿರುವ ಲಿಮ್ಕಾ ಬುಕ್ಸ್ ಆಫ್ ರೆಕಾರ್ಡ್ಸ್‌ನ ಪೈಟಿಂಗ್ ವಿಭಾಗದಲ್ಲಿ ಪ್ರತೀಕ್ ಅವರ ವೆಸ್ಪಾ ಸ್ಕೂಟರ್ 'ಮೊದಲ ಗ್ರಾಫಿಕ್ ಮೇಕ್ ಓವರ್' ಎಂಬ ಪ್ರಶಸ್ತಿಗೆ ಅರ್ಹವಾಗಿದೆ.

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ 22ರ ಹರೆಯದ ಪ್ರತೀಕ್ ಅವರನ್ನು ಪ್ರಶಸ್ತಿ ಹರಸಿಕೊಂಡು ಬರುತ್ತಿರುವುದು. ಆದರೆ ಲಿಮ್ಕಾ ಬುಕ್ಸ್ ಆಫ್ ರೆಕಾರ್ಡ್ಸ್‌ನಂತಹ ಪ್ರತಿಷ್ಠೆಯ ದಾಖಲೆ ಪುಟದಲ್ಲಿ ಸೇರಿಕೊಳ್ಳುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಪ್ರತೀಕ್ ಅಭಿಪ್ರಾಯಪಡುತ್ತಾರೆ. ಅಷ್ಟಕೂ ಪ್ರತೀಕ್ ಅವರ ವೆಸ್ಪಾ ಸ್ಕೂಟರ್‌ನಲ್ಲಿ ಅಂತಹ ವಿಶಿಷ್ಟತೆ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಮುಂದುವರಿಯಿರಿ...

ತುಮಕೂರಿನ ವೆಸ್ಪಾ ಸ್ಕೂಟರ್‌ಗೆ ಲಿಮ್ಕಾ ದಾಖಲೆಯ ಗರಿ

ಹಲವರಿಗೆ ತಮ್ಮದೇ ಆದ ಅಭಿರುಚಿಯಿರುತ್ತದೆ. ಅಂಥದ್ದರಲ್ಲಿ ಪ್ರತೀಕ್ ಅವರ ಪರಿಶ್ರಮ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಅವರೀಗಲೇ ಹಲವಾರು ವಿಶ್ವ ದಾಖಲೆಗಳ ಒಡೆಯರಾಗಿದ್ದಾರೆ. ಸ್ವತ: ತಾವೇ ಹುಟ್ಟು ಹಾಕಿರುವ 'ಡಬ್ಲ್ಯುಎಫ್1008' ತಂಡವು ಕೇವಲ 12 ತಾಸು 51 ನಿಮಿಷ ಹಾಗೂ 20 ಸೆಕೆಂಡುಗಳಲ್ಲೇ 36 ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸುವ ಮೂಲಕ ದಾಖಲೆಗೆ ಪಾತ್ರವಾಗಿತ್ತು. ಇದರಲ್ಲಿ ಯೂನಿಕ್ ವರ್ಲ್ಡ್ ರೆಕಾರ್ಡ್ಸ್, ಹೈ ರೇಂಜ್ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಅಮೇಜಿಂಗ್ ರೆಕಾರ್ಡ್ಸ್ - ಬಿಕಮ್ ಎ ರೆಕಾರ್ಡ್ ರೆಕಾರ್ಡ್ಸ್, ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ ಮತ್ತು ಮಿರಕಲ್ಸ್ ವರ್ಲ್ಡ್ ರೆಕಾರ್ಡ್ಸ್‌ನಿಂದಲೂ ಮಾನ್ಯತೆಗೆ ಪಾತ್ರವಾಗಿದೆ.

ತುಮಕೂರಿನ ವೆಸ್ಪಾ ಸ್ಕೂಟರ್‌ಗೆ ಲಿಮ್ಕಾ ದಾಖಲೆಯ ಗರಿ

ಅಷ್ಟೇ ಅಲ್ಲದೆ ಮೊಬೈಲ್‌ನಲ್ಲೇ 35 ಡೊಮೈನ್ ಬುಕ್ ಮಾಡುವ ಮೂಲಕ ಹೆಸರು ಮಾಡಿದ್ದಾರೆ. ಮೊಬೈಲ್‌ನಲ್ಲಿ ವೆಬ್‌ಸೈಟ್ ಡೊಮೈನ್ ಬುಕ್ ಮಾಡುವುದು ಏನು ಮಹಾ ಸಾಧನೆ ಎಂದು ನೀವು ಅಂದುಕೊಂಡಿದ್ದರೆ ತಪ್ಪಾದಿತು. ಯಾಕೆಂದರೆ 2ಜಿ ಸೇವೆಯಲ್ಲಿ ಪ್ರತೀಕ್ ಈ ಸಾಧನೆ ಮಾಡಿದ್ದು, ಇದರ ಪೇಮೆಂಟ್ ಸಹ ಮೊಬೈಲ್‌ನಿಂದ ಮಾಡಿರುವುದು ಮತ್ತೊಂದು ವಿಶೇಷ. ಇದಕ್ಕಾಗಿ ಸರಿ ಸುಮಾರು ಎಂಟರಿಂದ 10 ತಾಸು ಸಮಯ ತಗುಲಿತ್ತು.

ತುಮಕೂರಿನ ವೆಸ್ಪಾ ಸ್ಕೂಟರ್‌ಗೆ ಲಿಮ್ಕಾ ದಾಖಲೆಯ ಗರಿ

ಇನ್ನು ವೆಸ್ಪಾ ಬಗ್ಗೆ ಮಾತನಾಡುವುದಾದರೆ ಪ್ರಸ್ತುತ ಸ್ಕೂಟರ್‌ಗೆ ಲಿಮ್ಕಾ ಬುಕ್ಸ್ ಆಫ್ ರೆಕಾರ್ಡ್ಸ್ ಹೊರತಾಗಿ ಮಿರಕಲ್ಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ 'ಭಾರತದ ಮೊದಲ ನಾವೀನ್ಯತೆಯ ಗ್ರಾಫಿಕ್ ವಿನ್ಯಾಸ ವಾಹನ' ಹಾಗೆಯೇ ಹೈ ರೇಂಜ್ ಬುಕ್ ಆಫ್ ರೆಕಾರ್ಡ್ಸ್‌ನಿಂದ 'ಅತಿ ಹೆಚ್ಚು ಗ್ರಾಫಿಕ್ಸ್ ವಿನ್ಯಾಸ ಹೊಂದಿರುವ ಸ್ಕೂಟರ್‌' ಪ್ರಶಸ್ತಿಗೆ ಭಾಜನವಾಗಿತ್ತು.

ತುಮಕೂರಿನ ವೆಸ್ಪಾ ಸ್ಕೂಟರ್‌ಗೆ ಲಿಮ್ಕಾ ದಾಖಲೆಯ ಗರಿ

ಪ್ರೀಮಿಯಂ ಜೀವನ ಶೈಲಿಯ ಭಾಗವಾಗಿರುವ 125 ಸಿಸಿ ವೆಸ್ಪಾ ಸ್ಕೂಟರನ್ನು ಭಾರತದಲ್ಲಿ ಇಟಲಿಯ ಐಕಾನಿಕ್ ಪಿಯಾಜಿಯೊ ಸಂಸ್ಥೆಯು ಮಾರಾಟ ಮಾಡುತ್ತಿದೆ. ಕ್ಲಾಸಿಕ್ ವಿನ್ಯಾಸ, ಶಕ್ತಿಯುತ ಮೆಟ್ಯಾಲಿಕ್ ಮೊನೊಕಾಕ್ ಬಾಡಿ, ಆರಾಮದಾಯಕ ಸೀಟು ಹಾಗೂ ಪಯಣ ವೆಸ್ಪಾ ಸ್ಕೂಟರ್‌ನ ವಿಶಿಷ್ಟತೆಯಾಗಿದೆ.

ತುಮಕೂರಿನ ವೆಸ್ಪಾ ಸ್ಕೂಟರ್‌ಗೆ ಲಿಮ್ಕಾ ದಾಖಲೆಯ ಗರಿ

ಪ್ರತೀಕ್ ತಮ್ಮ ಸ್ಕೂಟರ್‌ಗೆ '786' ಎಂಬ ಫ್ಯಾನ್ಸಿ ನಂಬರನ್ನು ಹೊಂದಿದ್ದಾರೆ. ಈ ಮೂಲಕ ಸಮಾಜಕ್ಕೆ ಉತ್ತಮ ಬಾಂಧವ್ಯದ ಸಂದೇಶವನ್ನು ಪಸರಿಸಲು ಬಯಸುತ್ತಿದ್ದಾರೆ. ಹಾಗೆಯೇ ಜಿಪಿಎಸ್ ಟ್ರ್ಯಾಕರನ್ನು ತಮ್ಮ ಸ್ಕೂಟರ್‌ಗೆ ಲಗತ್ತಿಸಿದ್ದಾರೆ.

ತುಮಕೂರಿನ ವೆಸ್ಪಾ ಸ್ಕೂಟರ್‌ಗೆ ಲಿಮ್ಕಾ ದಾಖಲೆಯ ಗರಿ

ತಮ್ಮ ಪ್ರೀತಿಯ ವೆಸ್ಪಾ ಸ್ಕೂಟರ್ ವಿಶಿಷ್ಟ ರೀತಿಯಲ್ಲಿ ಗುರುತಿಸಬೇಕು ಎಂಬ ಗುರಿಯಿರಿಸಿಕೊಂಡಿದ್ದ ಪ್ರತೀಕ್ 2014ರಲ್ಲಿ ವೆಸ್ಪಾಗೆ ವಿಶೇಷ ಗ್ರಾಫಿಕಲ್ ಡಿಸೈನ್ ಮಾಡಿದ್ದರು. ಇದರಲ್ಲಿ ವಿಶೇಷ ರೀತಿಯ ಗ್ರಾಫಿಕ್ಸ್ ಲೊಗೊ ಇದ್ದು ಹೈಟೆಕ್ ಮೊನೆಸ್ಟರ್ ಮುಂತಾದ ಸ್ಟಿಕ್ಕರುಗಳನ್ನು ಒಳಗೊಂಡಿದೆ.

ತುಮಕೂರಿನ ವೆಸ್ಪಾ ಸ್ಕೂಟರ್‌ಗೆ ಲಿಮ್ಕಾ ದಾಖಲೆಯ ಗರಿ

ಇದಕ್ಕಾಗಿ ತುಮಕೂರಿನಿಂದ ಬೆಂಗಳೂರಿನ ರಾಜಾಜಿನಗರದ ವರ್ಕ್ ಶಾಪ್‌ವೊಂದರತ್ತ ಪಯಣ ಬೆಳೆಸಿದ್ದ ಪ್ರತೀಕ್, ಹನು ಗೌಡ ನೆರವಿನಿಂದ ಕೇವಲ ಎರಡು ತಾಸಿನಲ್ಲೇ ವಿಶಿಷ್ಟ ಗ್ರಾಫಿಕಲ್ ರೇಡಿಮೇಡ್ ಸ್ಟಿಕ್ಕರ್ ಹಾಕಿಸಿಕೊಂಡಿದ್ದರು.

ತುಮಕೂರಿನ ವೆಸ್ಪಾ ಸ್ಕೂಟರ್‌ಗೆ ಲಿಮ್ಕಾ ದಾಖಲೆಯ ಗರಿ

ಸದ್ಯ ಇಟಲಿಯ ಪಿಯಾಜಿಯೊದಿಂದಲೂ ಈ ಬಗ್ಗೆ ಅಧಿಕೃತ ಘೋಷಣೆಯನ್ನು ನಿರೀಕ್ಷೆ ಮಾಡುತ್ತಿರುವ ಪ್ರತೀಕ್, ತಮ್ಮ ಸ್ಕೂಟರ್ ವೆಸ್ಪಾದ ಅಂಬಾಸಿಡರ್ ಆಗಬೇಕೆಂಬ ಕನಸನ್ನು ಹೊಂದಿದ್ದಾರೆ.

ತುಮಕೂರಿನ ವೆಸ್ಪಾ ಸ್ಕೂಟರ್‌ಗೆ ಲಿಮ್ಕಾ ದಾಖಲೆಯ ಗರಿ

ಸೆಲೆಬ್ರಿಟಿಗಳಿಗೂ ಪ್ರತೀಕ್ ಸ್ಕೂಟರ್ ಎಂದರೆ ತುಂಬಾನೇ ಅಚ್ಚುಮೆಚ್ಚು. ಇದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ. ಪ್ರತೀಕ್ ವೆಸ್ಪಾ ಸ್ಕೂಟರ್ ಜೊತೆ ಮಿಂಚುತ್ತಿರುವ ಸ್ಯಾಂಡಲ್‌ವುಡ್ ಬೆಡಗಿ ಶ್ವೇತಾ ಪಂಡಿತ್.

ವೆಸ್ಪಾ 125

ವೆಸ್ಪಾ 125

ಇಂಧನ ಟ್ಯಾಂಕ್: 8.5 ಲೀಟರ್

ಎಂಜಿನ್: 125 ಸಿಸಿ, ಸಿಂಗಲ್ ಸಿಲಿಂಡರ್ (10.06 ಅಶ್ವಶಕ್ತಿ, 10.60 ತಿರುಗುಬಲ)

ಸೀಟು ಕೆಳಗಡೆ ಸ್ಟೋರೆಜ್ ಜಾಗ: 16.5 ಲೀಟರ್

ಭಾರ: 114 ಕೆ.ಜಿ

ತುಮಕೂರಿನ ವೆಸ್ಪಾ ಸ್ಕೂಟರ್‌ಗೆ ಲಿಮ್ಕಾ ದಾಖಲೆಯ ಗರಿ

ಈಗ ಕನ್ನಡಿಗ ಪ್ರತೀಕ್ ಜೈನ್ ಅವರ ವೆಸ್ಪಾ ಸ್ಕೂಟರ್ ನಿಮಗೂ ಇಷ್ಟವಾದ್ದಲ್ಲಿ ನಿಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ನಮ್ಮ ಜೊತೆ ಕಾಮೆಂಟ್ ಮೂಲಕ ಹಂಚಿಕೊಳ್ಳಲು ಮರೆಯದಿರಿ.


More from DriveSpark

Article Published On: Wednesday, March 11, 2015, 9:11 [IST]
English summary
Tumkur's Prathik Jain Owned Vespa Scooter enters Limca Book Of Records with First graphic makeover for scooter. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+