ಬಿಎಂಡಬ್ಲ್ಯು ಐ3 - ವಿಶ್ವದ ಕಾರು ವಿನ್ಯಾಸ, ವರ್ಷದ ಹಸಿರು ಕಾರು

By Nagaraja

'ವಿಶ್ವದ ಅತ್ಯುತ್ತಮ ಕಾರು ವಿನ್ಯಾಸ' ಹಾಗೂ 'ವರ್ಷದ ಹಸಿರು ಕಾರು ಪ್ರಶಸ್ತಿ'ಗಳಿಗೆ ಬಿಎಂಡಬ್ಲ್ಯು ಐ3 ಭಾಜನವಾಗಿದೆ. ನಿಮ್ಮ ಮಾಹಿತಿಗಾಗಿ, ಜರ್ಮನಿಯ ಈ ಐಷಾರಾಮಿ ಕಾರು ತಯಾರಕ ಸಂಸ್ಥೆಯು ಬಿಎಂಡಬ್ಲ್ಯು ಐ3 ವಿದ್ಯುತ್ ಚಾಲಿತ ಕಾರನ್ನು 2013ರಲ್ಲಿ ಬಿಡುಗಡೆಗೊಳಿಸಿತ್ತು.

ಬಿಎಂಡಬ್ಲ್ಯು ಎಕ್ಸ್ 4 ಕಾನ್ಸೆಪ್ಟ್; ನ್ಯೂ ಇಮೇಜ್ ಗ್ಯಾಲರಿ

ಮುಂದಿನ ಜನಾಂಗದ ಕಾರು ಎಂದೇ ಬಿಂಬಿಸಲ್ಪಟ್ಟಿರುವ ಬಿಎಂಡಬ್ಲ್ಯು ಐ3, ಗ್ರಾಹಕರಲ್ಲಿ ಸಾಕಷ್ಟು ಕ್ರೇಜ್ ಸೃಷ್ಟಿಸಲು ಕಾರಣವಾಗಿತ್ತು. ಇದೀಗ ವಲ್ಡ್ ಕಾರ್ ಡಿಸೈನ್ ಹಾಗೂ ಗ್ರೀನ್ ಪ್ರಶಸ್ತಿಗೆ ಪಾತ್ರವಾಗುವ ಮೂಲಕ ತನ್ನ ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಪೈಕಿ ಐ ರೇಂಜ್ ಕಾರುಗಳಿಗಾಗಿ ಅತ್ಯುತ್ತಮ ವಿನ್ಯಾಸ ಕಾರೆಂಬ ಮನ್ನಣೆ ದೊರಕಿದೆ.

ಬಿಎಂಡಬ್ಲ್ಯು ಐ3 - ವಿಶ್ವದ ಕಾರು ವಿನ್ಯಾಸ, ವರ್ಷದ ಹಸಿರು ಕಾರು

ಈ ಬಗ್ಗೆ ಮಾತನಾಡಿರುವ ಬಿಎಂಡಬ್ಲ್ಯು ಎಜಿ ನಿರ್ವಹಣೆ ಮಂಡಳಿಯ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಸದಸ್ಯ ಡಾ. ಇಯಾನ್ ರಾಬರ್ಟ್‌ಸನ್, ಅಭಿವೃದ್ಧಿ ಹಂತದಿಂದ ಆರಂಭಿಸಿ ಬಿಎಂಡಬ್ಲ್ಯು ಐ3, 21ನೇ ಶತಮಾನದ ಅವಶ್ಯಕತೆಗಳಿಗಾಗಿ ಸಮರ್ಥ ವಾಹನವಾಗಿ ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ.

ಬಿಎಂಡಬ್ಲ್ಯು ಐ3 - ವಿಶ್ವದ ಕಾರು ವಿನ್ಯಾಸ, ವರ್ಷದ ಹಸಿರು ಕಾರು

ಒಟ್ಟು 28 ಕಾರುಗಳು ಪ್ರಶಸ್ತಿ ಪಟ್ಟಿಯಲ್ಲಿದ್ದವು. ಆದರೆ 69 ಸದಸ್ಯರನ್ನೊಳಗೊಂಡ ತೀರ್ಪುಗಾರರ ತಂಡವು ವಿಶ್ವದ ಅತ್ಯುತ್ತಮ ಕಾರು ವಿನ್ಯಾಸ ಪಟ್ಟಕ್ಕೆ ಬಿಎಂಡಬ್ಲ್ಯು ಐ3 ಆಯ್ಕೆ ಮಾಡಿದೆ.

ಬಿಎಂಡಬ್ಲ್ಯು ಐ3 - ವಿಶ್ವದ ಕಾರು ವಿನ್ಯಾಸ, ವರ್ಷದ ಹಸಿರು ಕಾರು

ತೀರ್ಪುಗಾರರ ತಂಡದ ಪ್ರಕಾರ ಪ್ರತಿಸ್ಪರ್ಧಿಗಳನ್ನು ಗಮನಿಸಿದಾಗ ಬಿಎಂಡಬ್ಲ್ಯು ಐ3 ಹೆಚ್ಚು ದಕ್ಷ ಹಾಗೂ ನೋಟ ವಿಶಾಲವಾಗಿದೆ. ಇದು ಕ್ರಾಂತಿಕಾರಿ ವಿನ್ಯಾಸ ಹೊಂದಿದ್ದು, ವಿನ್ಯಾಸಗಾರರು ಐ3 ಸಬ್ ಬ್ರಾಂಡ್‌ನಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ.

ಬಿಎಂಡಬ್ಲ್ಯು ಐ3 - ವಿಶ್ವದ ಕಾರು ವಿನ್ಯಾಸ, ವರ್ಷದ ಹಸಿರು ಕಾರು

ಸಹಜವಾಗಿಯೇ ಅತ್ಯುತ್ತಮ ವಿನ್ಯಾಸ ಕಾರಿಗೆ ಅರ್ಹವಾಗಿರುವ ಐ3, ತನ್ನ ಕಾರ್ಯದಕ್ಷತೆಯಿಂದಲೇ ವರ್ಷದ ಹಸಿರು ಕಾರು ಪಟ್ಟವನ್ನು ಪಡೆದುಕೊಂಡಿದೆ.

ಬಿಎಂಡಬ್ಲ್ಯು ಐ3 - ವಿಶ್ವದ ಕಾರು ವಿನ್ಯಾಸ, ವರ್ಷದ ಹಸಿರು ಕಾರು

ಇನ್ನು ಭಾರತವನ್ನು ಗಮನಿಸಿದಾರೆ, 2014 ಆಟೋ ಎಕ್ಸ್ ಪೋದಲ್ಲಿ ಐ8 ಕಾನ್ಸೆಪ್ಟನ್ನು ಬಿಡುಗಡೆಗೊಳಿಸಿತ್ತು. ಆದರೆ ಐ3 ಪ್ರವೇಶ ಕುರಿತಂತೆ ಇನ್ನು ಖಚಿತತೆ ಕಂಡುಬಂದಿಲ್ಲ. ಈಗಿನ ನಿಯಮದಂತೆ ತೆರಿಗೆ ಹೆಚ್ಚಾಗಿರುವುದು ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಮೂಲಸೌಕರ್ಯ ಕೊರತೆ ಎಂಬಿತ್ಯಾದಿ ಸಮಸ್ಯೆಗಳು ಸಂಸ್ಥೆಯ ಯೋಜನೆಗಳನ್ನು ಹಿನ್ನಡೆಗೆ ತಳ್ಳುವಂತಾಗಿದೆ.

ಬಿಎಂಡಬ್ಲ್ಯು ಐ3 - ವಿಶ್ವದ ಕಾರು ವಿನ್ಯಾಸ, ವರ್ಷದ ಹಸಿರು ಕಾರು

ಪ್ರಮುಖವಾಗಿಯೂ ನಗರ ಪ್ರದೇಶದ ಬಳಕೆಗೆ ಅಭಿವೃದ್ಧಿಪಡಿಸಲಾಗಿರುವ ನಾಲ್ಕು ಸೀಟಿನ ಬಿಎಂಡಬ್ಲ್ಯು ಐ3, ಸಂಪೂರ್ಣ ಎಲೆಕ್ಟ್ರಿಕ್ ನಿಯಂತ್ರಿತ ಎಂಜಿನ್ ಹೊಂದಿರಲಿದೆ.

ಬಿಎಂಡಬ್ಲ್ಯು ಐ3 - ವಿಶ್ವದ ಕಾರು ವಿನ್ಯಾಸ, ವರ್ಷದ ಹಸಿರು ಕಾರು

ಇದು ಜೀರೋ ಎಮಿಷನ್ ಹೊಗೆ ಹೊರಸೂಸುವುದರಿಂದ ಸಂಪೂರ್ಣ ಪರಿಸರ ಸ್ನೇಹಿ ಎನಿಸಿಕೊಂಡಿದೆ. ಅಲ್ಲದೆ 130ರಿಂದ 300 ಕೀ.ಮೀ. ರೇಂಜ್ ವರೆಗೂ ಚಲಿಸುವ ಸಾಮರ್ಥ್ಯ ಹೊಂದಿದೆ.

ಬಿಎಂಡಬ್ಲ್ಯು ಐ3 - ವಿಶ್ವದ ಕಾರು ವಿನ್ಯಾಸ, ವರ್ಷದ ಹಸಿರು ಕಾರು

ಇನ್ನು ಕಾರಿನ ಭಾರವನ್ನು ತಗ್ಗಿಸುವ ನಿಟ್ಟಿನಲ್ಲಿ ಹಗುರ ಭಾರದ ಅಲ್ಯೂಮಿನಿಯಂ ಚಾಸೀಸ್, ಬಲವರ್ಧಿತ ಪ್ಲಾಸ್ಟಿಕ್ ಹಾಗೂ ಕಾರ್ಬರ್ ಫೈಬರ್‌ಗಳಂತಹ ಪರಿಕರಗಳನ್ನು ಬಳಸಲಾಗಿದೆ.

ಬಿಎಂಡಬ್ಲ್ಯು ಐ3 - ವಿಶ್ವದ ಕಾರು ವಿನ್ಯಾಸ, ವರ್ಷದ ಹಸಿರು ಕಾರು

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಕಾರಿನ 80ರಷ್ಟು ಭಾಗವನ್ನು ಮರುಬಳಕೆ ಮಾಡಬಹುದಾಗಿದೆ. ಇದನ್ನು ಮನೆ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಚಾರ್ಜ್ ಮಾಡಿಸಬಹುದಾಗಿದ್ದು, ಕೇವಲ ಆರು ಗಂಟೆ ಅವಧಿಯಲ್ಲಿ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲಿದೆ.

More from DriveSpark

Article Published On: Friday, May 2, 2014, 10:14 [IST]
English summary
German automobile giant BMW launched their i3 electric car in 2013. Since then it is created a lot of hype among customers, concerned with conserving the environment for the upcoming generation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+