ಬಿಎಂಡಬ್ಲ್ಯು ಐ3 ಕಾರನ್ನು ದಬಾರ್ ಅಂತ ದೂಡಿದ 7ರ ಬಾಲಕ

By Nagaraja

ಬಿಎಂಡಬ್ಲ್ಯು ಕೆಲವು ಸಮಯಗಳ ಹಿಂದೆಯಷ್ಟೇ ವಿದ್ಯುತ್ ಚಾಲಿತ ವಾಹನಗಳ ಮಾರುಕಟ್ಟೆಗೆ ಪ್ರವೇಶಿಸಿದ್ದ ಬಿಎಂಡಬ್ಲ್ಯು, ಐ3 ಕಾರನ್ನು ಪರಿಚಯಿಸಿತ್ತು. ಇದು ಎಷ್ಟೊಂದು ಹಗುರವೆಂದರೆ 7ರ ಬಾಲಕನೋರ್ವ ದಬಾರ್ ಅಂತ ದೂಡಿರುವ ವೀಡಿಯೋ ಯೂಟ್ಯೂಬ್‌ನಲ್ಲಿ ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ.

ಸಾಮಾನ್ಯ ಪೆಟ್ರೋಲ್ ಕಾರಿನಲ್ಲಿರುವ ಆಂತರಿಕ ದಹನಕಾರಿ ಎಂಜಿನ್ ಬದಲು ಬಿಎಂಡಬ್ಲ್ಯು ಐ3 ಕಾರಿನಲ್ಲಿ ಎಲೆಕ್ಟ್ರಿಕ್ ಮೋಟಾರು ಹೊಂದಿದೆ. ಇದು ಕಾರಿನ ಒಟ್ಟು ಭಾರವನ್ನು ಗಣನೀಯವಾಗಿ ಇಳಿಕೆ ಮಾಡಲು ಸಾಧ್ಯವಾಗಿದೆ. ಅಲ್ಲದೆ ಇದರ ನಿರ್ಮಾಣದಲ್ಲಿ ಹಗುರ ಭಾರದ ಬಿಡಿಭಾಗಗಳನ್ನು ಬಳಕೆ ಮಾಡಲಾಗಿದೆ.

BMW i3

ಇಲ್ಲಿ 7ರ ಹರೆಯದ ಬಾಲಕನೂ ಸಹ ಯಾರದೇ ಸಹಾಯವಿಲ್ಲದೆ ಸಲೀಸಾಗಿ ಬಿಎಂಡಬ್ಲ್ಯು ಐ3 ಕಾರನ್ನು ದೂಡುತ್ತಾನೆ.

ನಿಮ್ಮ ಮಾಹಿತಿಗಾಗಿ ಗಂಟೆಗೆ ಗರಿಷ್ಠ 150 ಕೀ.ಮೀ. ವೇಗದಲ್ಲಿ ಚಲಿಸುವ ಬಿಎಂಡಬ್ಲ್ಯು ಐ3, ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿಸಿದರೆ 130 ಕೀ.ಮೀ. ವ್ಯಾಪ್ತಿ ವರೆಗೆ ಪ್ರಯಾಣಿಸಬಹುದಾಗಿದೆ. ಇದರ ಎಲೆಕ್ಟ್ರಿಕ್ ಮೋಟಾರು 170 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಲಿಥಿಯಂ ಇಯಾನ್ ಬ್ಯಾಟರಿ ಸಹಿತ ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ವಾಹನ 1,195 ಕೆ.ಜಿ ತೂಕವನ್ನಷ್ಟೇ ಹೊಂದಿರುತ್ತದೆ. ಅಲ್ಲದೆ ಕಡಿಮೆ ಉರುಳುವಿಕೆ ಪ್ರತಿರೋಧಕ ಚಕ್ರಗಳನ್ನು ಇದರಲ್ಲಿ ಆಳವಡಿಸಲಾಗಿದೆ. ಸದ್ಯ ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಕಾರು ಭಾರತ ಪ್ರವೇಶವಾಗಿಲ್ಲ. ಜಾಗತಿಕವಾಗಿ ಇದು 25.31 ರು.ಗಳಷ್ಟು ದುಬಾರಿಯೆನಿಸಿದೆ.

<iframe width="600" height="450" src="//www.youtube.com/embed/9mZVgW-jrgg?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Saturday, October 25, 2014, 13:51 [IST]
English summary
BMW has recently entered into the electric car segment. The German manufacturer has manufactured its first small electric vehicle ‘i3'. The vehicle has to be lightweight as it does not have an internal combustion engine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+