ಬಣ್ಣದ ಹಬ್ಬ ಹೋಳಿ ಆಗಮನ; ಕಾರುಗಳಿಗೆ ಭಾರಿ ಕೊಡುಗೆ

By Nagaraja

ಈಗಾಗಲೇ ದರ ಕಡಿತದ ಖುಷಿಯಲ್ಲಿರುವ ಗ್ರಾಹಕರಿಗೆ ಇನ್ನಷ್ಟು ಶುಭ ಸಮಾಚಾರ ಬಂದೊದಗಿದೆ. ಹೌದು, ಬಣ್ಣದ ಹಬ್ಬ ಹೋಳಿ ಹಬ್ಬ ಆಚರಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವಂತೆಯೇ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳು ತಮ್ಮ ಮಾದರಿಯ ಕಾರುಗಳಿಗೆ ವಿಶೇಷ ಆಫರುಗಳನ್ನು ಮುಂದರಿಸಿವೆ.

ಇತ್ತೀಚೆಗಷ್ಟೇ ಕೇಂದ್ರ ಸರಕಾರ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಕಾರು ತಯಾರಕ ಸಂಸ್ಥೆಗಳು ದರಗಳನ್ನು ಕಡಿತಗೊಳಿಸಿತ್ತು. ಇದೀಗ ವಾಹನ ತಯಾರಕ ಸಂಸ್ಥೆಗಳು ಡಿಸ್ಕೌಂಟ್ ಜತೆಗೆ, ಕಾರು ವಿಮೆ, ಉಚಿತ ಆಕ್ಸೆಸರಿಗಳಂತಹ ಆಫರುಗಳನ್ನು ಮುಂದಿರಿಸುತ್ತಿದೆ.

ಟಾಟಾ ಮೋಟಾರ್ಸ್ - ಇಂಡಿಗೊ ಇಸಿಎಸ್

ಟಾಟಾ ಮೋಟಾರ್ಸ್ - ಇಂಡಿಗೊ ಇಸಿಎಸ್

ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ತನ್ನ ರೇಂಜ್ ಕಾರುಗಳಿಗೆ 40,000 ರು.ಗಳಿಂದ 76,000 ರು.ಗಳ ವರೆಗೆ ರಿಯಾಯಿತಿ ದರ ಮುಂದಿಡುತ್ತಿದೆ. ಇದರ ಪ್ರಕಾರ ಇಂಡಿಗೊ ಇಸಿಎಸ್ ಪ್ರಾರಂಭಿಕ ದರ 5.09 ಲಕ್ಷ ರು.ಗಳಾಗಿರಲಿದೆ (ಹಿಂದಿನ ದರ 5.27 ಲಕ್ಷ ರು.ಗಳಿಷ್ಟಿತ್ತು). ಇದರ ಜತೆಗೆ 43,010 ರು.ವರೆಗಿನ ಇತರ ಸೌಲಭ್ಯಗಳು ದೊರಕಲಿದೆ.

ಟಾಟಾ ವಿಸ್ಟಾ

ಟಾಟಾ ವಿಸ್ಟಾ

ಟಾಟಾ ವಿಸ್ಟಾ ಆವೃತ್ತಿಗೂ ಸಮಾನವಾದ ಆಫರ್ ಲಭ್ಯವಿರುತ್ತದೆ. ಇಲ್ಲಿ ರು. 51,032 ವರೆಗೆ ಪ್ರಯೋಜನ ಪಡೆಯಬಹುದಾಗಿದೆ. ಈ ಹ್ಯಾಚ್‌ಬ್ಯಾಕ್ ಕಾರಿನ ಪ್ರಾರಂಭಿಕ ದರ 4.61 ಲಕ್ಷ ರು.ಗಳಾಗಿರಲಿದೆ. (ಹಿಂದಿನ ದರ 4.77 ಲಕ್ಷ ರು.)

ಸಫಾರಿ ಸ್ಟ್ರೋಮ್

ಸಫಾರಿ ಸ್ಟ್ರೋಮ್

ಇನ್ನು ಟಾಟಾ ಸಫಾರಿ ಸ್ಟ್ರೋಮ್ ಖರೀದಿ ವೇಳೆ ರು. 76,635 ವರೆಗೆ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ. ಇದರ ನೂತನ ದರ 9.84 ಲಕ್ಷ ರು.ಗಳಾಗಿರಲಿದೆ.

ಫೋರ್ಡ್ - ಫಿಗೊ

ಫೋರ್ಡ್ - ಫಿಗೊ

ಅಮೆರಿಕ ಮೂಲದ ಈ ವಾಹನ ತಯಾರಕ ಸಂಸ್ಥೆಯು ತನ್ನ ಜನಪ್ರಿಯ ಫಿಗೊ ಕಾರಿಗಾಗಿ 'ಗೂಡೀಸ್ 4 ಬಡ್ಡೀಸ್' ಎಂಬ ಆಫರ್ ಮುಂದಿಡುತ್ತಿದೆ. ಇದು ಮಾರ್ಚ್ 6ರಿಂದ 9ರ ವರೆಗೆ ಲಭ್ಯವಿರಲಿದೆ. ಇತ್ತೀಚೆಗಷ್ಟೇ ವೈ-ಫೈ ಸೇವೆ ಆಳವಡಿಸಿದ್ದ ಫಿಗೊದಲ್ಲಿ ಗ್ರಾಹಕರು ರು. 62,000 ವರೆಗೆ ಪ್ರಯೋಜನ ಪಡೆಯಬಹುದಾಗಿದೆ.

ಮಾರುತಿ ಸುಜುಕಿ - ಆಲ್ಟೊ 800

ಮಾರುತಿ ಸುಜುಕಿ - ಆಲ್ಟೊ 800

ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಆಲ್ಟೊ ಹಾಗೂ ವ್ಯಾಗನಾರ್ ಆವೃತ್ತಿಗಳಿಗೂ ಆಫರ್ ಮುಂದಿಡುತ್ತಿದೆ. ಆಲ್ಟೊ 800 ಖರೀದಿಯಲ್ಲಿ ರು. 62,500 ಆಫರ್ ನಿಮ್ಮದಾಗಿಸಬಹುದಾಗಿದೆ. ಇದರಲ್ಲಿ ಕನ್ಯೂಮರ್ ಆಫರ್ ರು. 30,000, ಅಬಕಾರಿ ಪ್ರಯೋಜನ ರು. 12,500 ಹಾಗೂ ಎಕ್ಸ್‌ಜೇಂಜ್ ಬೋನಸ್ ರು. 20,000 ಸೇರಿಕೊಳ್ಳಲಿದೆ.

ವ್ಯಾಗನಾರ್

ವ್ಯಾಗನಾರ್

ಇದೇ ರೀತಿಯ ಸೌಲಭ್ಯಗಳು ಆಲ್ಟೊ ಕೆ10 ಹಾಗೂ ವ್ಯಾಗನಾರ್ ಆವೃತ್ತಿಗಳಿಗೂ ಲಭ್ಯವಿರಲಿದೆ. ಈ ಎರಡು ಆವೃತ್ತಿಗಳಲ್ಲಿ ಅನುಕ್ರಮವಾಗಿ ರು. 51,500 ಹಾಗೂ ರು. 65,500 ರಷ್ಟು ಪ್ರಯೋಜನ ಪಡೆಯಬಹುದಾಗಿದೆ.

ರೆನೊ

ರೆನೊ

ರೆನೊದ ಡೀಲರುಶಿಪ್‌ಗಳಲ್ಲಿ ಫ್ಯೂಯನ್ಸ್ ಸೆಡಾನ್ ಹಾಗೂ ಪಲ್ಸ್ ಹ್ಯಾಚ್‌ಬ್ಯಾಕ್ ಕಾರುಗಳಿಗೆ ರಿಯಾಯಿತಿ ದರ ದೊರಕುತ್ತಿದೆ. ಈ ಪೈಕಿ ಫ್ಯೂಯನ್ಸ್ ಖರೀದಿಯಲ್ಲಿ ಒಂದು ಲಕ್ಷ ರು. ವರೆಗೂ ಪಲ್ಸ್ ಆವೃತ್ತಿಯಲ್ಲಿ ರು. 65,000 ರು.ಗಳಿಂದ 75,000 ರು. ವರೆಗೆ ಆಫರ್ ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ.

ಟೊಯೊಟಾ - ಇಟಿಯೋಸ್ ಸೆಡಾನ್

ಟೊಯೊಟಾ - ಇಟಿಯೋಸ್ ಸೆಡಾನ್

ಟೊಯೊಟಾ ಇಟಿಯೋಸ್ ಸೆಡಾನ್ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿ ವೇಳೆ ಅನುಕ್ರಮವಾಗಿ ರು. 35,000 ಹಾಗೂ ರು. 32,500 ಗಳಷ್ಟು ಲಾಭಾಂಶವನ್ನು ನಿಮ್ಮದಾಗಿಸಬಹುದಾಗಿದೆ. ಇದರ ಜತೆಗೆ ಈ ಸೆಡಾನ್ ಖರೀದಿಯಲ್ಲಿ ರು. 22,500 ವರೆಗೆ ಉಚಿತ ಆಕ್ಸೆಸರಿ, ರು. 7500 ವರೆಗೆ ಎಕ್ಸ್‌ಚೇಂಜ್ ಬೋನಸ್ ಮತ್ತು ರು. 5,000 ವರೆಗೆ ಕಾರ್ಪೋರೇಟ್ ಬೋನಸ್ ತಮ್ಮದಾಗಿಸಬಹುದಾಗಿದೆ.

ಲಿವಾ ಹ್ಯಾಚ್‌ಬ್ಯಾಕ್

ಲಿವಾ ಹ್ಯಾಚ್‌ಬ್ಯಾಕ್

ಇನ್ನು ಲಿವಾ ಹ್ಯಾಚ್‌ಬ್ಯಾಕ್ ಖರೀದಿಯಲ್ಲಿ ರು. 32,500 ವರೆಗೆ ನಗದು ಉಳಿತಾಯ, ರು. 20,000 ವರೆಗೆ ಉಚಿತ ಆಕ್ಸೆಸರಿ ಮತ್ತು ರು. 12.500 ವರೆಗೆ ಎಕ್ಸ್‌ಚೇಂಜ್ ಮತ್ತು ಲಾಯಲ್ಟಿ ಬೋನಸ್ ಲಭ್ಯವಿರಲಿದೆ.

ಇನ್ನೋವಾ

ಇನ್ನೋವಾ

ಅಷ್ಟೇ ಯಾಕೆ ಜನಪ್ರಿಯ ಇನ್ನೋವಾ ಖರೀದಿ ವೇಳೆಯೂ 50,000 ರು. ವರೆಗೆ ಡಿಸ್ಕೌಂಟ್ ಲಭ್ಯವಿರಲಿದೆಯೆಂಬ ಮಾಹಿತಿ ಲಭಿಸಿದೆ.

More from DriveSpark

Article Published On: Friday, March 7, 2014, 6:02 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+