ಷೆವರ್ಲೆ ಸೈಲ್ ಸೀಮಿತ ಆವೃತ್ತಿ ಲಾಂಚ್; ಬೆಲೆ ಎಷ್ಟು?
ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಬ್ರಾಂಡ್ ಆಗಿರುವ ಷೆವರ್ಲೆ ನೂತನ ಸೈಲ್ ಸೀಮಿತ ಆವೃತ್ತಿಯನ್ನು ಲಾಂಚ್ ಮಾಡಿದೆ. ಇದರ ಎಕ್ಸ್ ಶೋ ರೂಂ ದರ 5.36 ಲಕ್ಷ ರು.ಗಳಾಗಿವೆ. ಈ ಮೂಲಕ ಸೆಡಾನ್ ವಿಭಾಗದಲ್ಲಿ ಇನ್ನಷ್ಟು ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನು ಸಂಸ್ಥೆ ಹೊಂದಿದೆ.
ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಆದರೆ ಗ್ರಾಹಕರಿಗೆ ಹೆಚ್ಚುವರಿ ಫೀಚರುಗಳು ಲಭ್ಯವಾಗಲಿದೆ.

ವಿಶಿಷ್ಟತೆಗಳು
- ಬೂಟ್ ಲಿಡ್‌ನಲ್ಲಿ ಸೀಮಿತ ಆವೃತ್ತಿ ಬ್ಯಾಡ್ಜ್,
- ಸೈಡ್ ಬಾಡಿ ಡಿಕಾಲ್ಸ್,
- ಔಟ್‌ಸೈಡ್ ರಿಯರ್ ವ್ಯೂ ಮಿರರ್ ಜತೆ
- ಟರ್ನ್ ಇಂಡಿಕೇಟರ್ ಲ್ಯಾಂಪ್
- ಬೂಟ್ ಲಿಡ್ ಕ್ರೋಮ್ ಗಾರ್ನಿಶ್,
- ರಿವರ್ಸ್ ಪಾರ್ಕಿಂಗ್ ಸೆನ್ಸಾರ್,
- ಸಿಲ್ ಪ್ಲೇಟ್,
- ಡ್ಯುಯಲ್ ಟೋನ್ ಸೀಟ್ ಕವರ್ ಮತ್ತು ಕಷನ್ ಪಿಲ್ಲೊ

ವಿಶಿಷ್ಟತೆಗಳು

ಈ ಎಲ್ಲ ಆಕ್ಸೆಸರಿ ಲಗತ್ತಿಸಲು ರು. 45,000ರಷ್ಟು ಹೆಚ್ಚುವರಿ ವೆಚ್ಚ ತಗುಲಲಿದೆ.

ಅಂದ ಹಾಗೆ ಷೆವರ್ಲೆ ಸೈಲ್ ಸೀಮಿತ ಆವೃತ್ತಿಯು 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಭಾರತ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ಮಾನ್ಯತೆ ಪ್ರಕಾರ ಷೆವರ್ಲೆ ಸೈಲ್ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳು ಅನುಕ್ರಮವಾಗಿ ಪ್ರತಿ ಲೀಟರ್‌ಗೆ 18.2 ಹಾಗೂ 22.1 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.


Click it and Unblock the Notifications








