ಷೆವರ್ಲೆ ಸೈಲ್-ಯುವಿಎ ಲಿಮಿಟೆಡ್ ಎಡಿಷನ್ ಲಾಂಚ್
ಸೈಲ್ ಸೆಡಾನ್ ಕಾರು ಲಾಂಚ್ ಮಾಡಿರುವ ಬೆನ್ನಲ್ಲೇ ಮಗದೊಂದು ಆಕರ್ಷಕ ಷೆವರ್ಲೆ ಸೈಲ್ ಯು-ವಿಎ ಸೀಮಿತ ಆವೃತ್ತಿಯನ್ನು ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಲಾಂಚ್ ಮಾಡಿದೆ.
ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ನಲ್ಲಿ ಅತಿ ಹೆಚ್ಚು ಪ್ರಾಧಾನ್ಯತೆ ಗಿಟ್ಟಿಸಿಕೊಂಡಿರುವ ಷೆವರ್ಲೆ ಸೈಲ್ ಯುವಿಎ, 2013-14ನೇ ಆರ್ಥಿಕ ಸಾಲು ಕೊನೆಗೊಳ್ಳುತ್ತಿರುವಂತೆಯೇ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ನಿಮ್ಮ ಮಾಹಿತಿಗಾಗಿ, ಸೈಲ್ ಸೆಡಾನ್ ಕಾರು ಪಡೆದುಕೊಂಡಿರುವುದಕ್ಕೆ ಸಮಾನವಾದ ಆಕ್ಸೆಸರಿ ಕೊಡುಗೆಯನ್ನು ಸೈಲ್ ಯು-ವಿಎ ಸೀಮಿತ ಆವೃತ್ತಿ ಸಹ ಪಡೆದುಕೊಳ್ಳಲಿದೆ.

ಆದರೆ ಈ ಪಟ್ಟಿಯಿಂದ ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮಾತ್ರ ಮಿಸ್ ಮಾಡಿಕೊಳ್ಳಲಿದೆ. ಇದರ ಜಾಗದಲ್ಲಿ ರೂಫ್ ಮೌಂಟೆಡ್ ರೈಲ್ ಫೀಚರ್ ಪಡೆದುಕೊಳ್ಳಲಿದೆ.

ಫೀಚರ್ಸ್
- ಸ್ಟೈಲಿಷ್ ಲಿಮಿಟೆಡ್ ಎಡಿಷನ್ ಸೈಡ್ ಬಾಡಿ ಡಿಕಾಲ್ಸ್,
- ಬೂಟ್ ಲಿಡ್‌ನಲ್ಲಿ ಲಿಮಿಟೆಡ್ ಎಡಿಷನ್ ಬಾಡ್ಜ್,
- ಲಿಮಿಟೆಡ್ ಎಡಿಷನ್ ಸೀಟ್ ಕವರ್,
- ಹೊಳಪುಳ್ಳ ಸೈಲ್ ಬ್ಯಾಡ್ಜ್ ಹೊಂದಿರುವ ಸೈಡ್ ಸಿಲ್ ಪ್ಲೇಟ್,
- ಕ್ರೋಮ್ ಗಾರ್ನಿಶ್,
- ರೂಫ್ ರೈಲ್,
- ಔಟ್‌ಸೈಡ್ ರಿಯರ್ ವ್ಯೂ ಮಿರರ್ ಜತೆಗೆ ಇಂಟೆಗ್ರೇಟಡ್ ಟರ್ನಿ ಇಂಡಿಕೇಟರ್ಸ್,
- ಲಿಮಿಟೆಡ್ ಎಡಿಷನ್ ಕಷನ್ ಪಿಲ್ಲೊ

ಫೀಚರ್ಸ್

ಷೆವರ್ಲೆ ಪ್ರಕಾರ ಸೈಲ್ ಯುವಿಎ ಲಿಮಿಟೆಡ್ ಎಡಿಷನ್ ಮೂಲಕ ರು. 28,000 ಹಾಗೂ 13,300 ರು. ವರೆಗಿನ ಪ್ರಯೋಜನ ಪಡೆಯಬಹುದಾಗಿದೆ.

ಹಾಗಿದ್ದರೂ ಸೈಲ್ ಸೆಡಾನ್ ತರಹನೇ ಸೈಲ್ ಯು-ವಿಎ ಸೀಮಿತ ಆವೃತ್ತಿಯ ತಾಂತ್ರಿಕ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದು 1.2 ಲೀಟರ್ ಡಿಒಎಚ್‌ಸಿ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಸಂಸ್ಥೆಯ ಪ್ರಕಾರ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳು ಅನುಕ್ರಮವಾಗಿ ಪ್ರತಿ ಲೀಟರ್‌ಗೆ 18.2 ಹಾಗೂ 22.1 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಅಂದ ಹಾಗೆ ಷೆವರ್ಲೆ ಸೈಲ್ ಯು-ವಿಎ ಸೀಮಿತ ಆವೃತಿಯು 4.44 ಲಕ್ಷ ರು.ಗಳ ದರದಲ್ಲಿ ಆಗಮನವಾಗಲಿದೆ.


Click it and Unblock the Notifications








