ಮೇ ತಿಂಗಳಿಗೆ ಮೆರಗು ನೀಡಲು ಬರುತ್ತಿದೆ ಷೆವರ್ಲೆ ಎಂಜಾಯ್
ಮೇ ತಿಂಗಳಿಗೆ ಇನ್ನಷ್ಟು ಮೆರಗು ನೀಡಲು ಮತ್ತೊಂದು ಆಕರ್ಷಕ ಕಾರಿನ ಆಗಮನವಾಗುತ್ತಿದೆ. ಇದೀಗ ಎಲ್ಲವೂ ಅಧಿಕೃತಗೊಂಡಿದ್ದು, ಷೆವರ್ಲೆ ಎಂಜಾಜ್ ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಮೇ 9ರಂದು ಭಾರತೀಯ ಮಾರುಕಟ್ಟೆಗೆ ಅಧಿಕೃತ ಪ್ರವೇಶ ಪಡೆಯಲಿದೆ.
ಅಮೆರಿಕ ವಾಹನ ತಯಾರಕ ಸಂಸ್ಥೆಯು ಈ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಹಾಗೆಯೇ ಎಕ್ಸ್‌ಟೀರಿಯರ್ ಸೇರಿದಂತೆ ಇಂಟಿರಿಯರ್ ವೈಶಿಷ್ಟ್ಯಗಳ ಬಗ್ಗೆ ವಿವರಣೆ ನೀಡಿದೆ. 2012 ದೆಹಲಿ ಆಟೋ ಎಕ್ಸಪೋದಲ್ಲಿ ಮೊದಲ ಬಾರಿಗೆ ಏಳು ಸೀಟಿನ ಷೆವರ್ಲೆ ಎಂಪಿವಿ ಕಾನ್ಸೆಪ್ಟ್ ಕಾರು ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು.
ಇದರ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ 78 ಪಿಎಸ್ (205 ಎನ್‌ಎಂ ಟರ್ಕ್ಯೂ) ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿದೆ. ಇನ್ನು ಇದರ 1.4 ಲೀಟರ್ ಪೆಟ್ರೋಲ್ ಎಂಜಿನ್ 77.1 ಪಿಎಸ್ (187 ಎನ್‌ಎಂ) ಪವರ್ ಉತ್ಪಾದಿಸಲಿದೆ.

ಪ್ರಸ್ತುತ ಬಂದಿರುವ ಮಾಹಿತಿ ಪ್ರಕಾರ 6.5 ಲಕ್ಷ ರು.ಗಳಿಂದ ಹಿಡಿದು 8.5 ಲಕ್ಷ ರು.ಗಳ ಅಸುಪಾಸಿನಲ್ಲಿ ಷೆವರ್ಲೆ ಎಂಜಾಯ್ ಆಗಮನವಾಗುವ ನಿರೀಕ್ಷೆಯಿದೆ.

ಇದು ಮಹೀಂದ್ರ ಕ್ಸೆಲೋ ಹಾಗೂ ಮಾರುತಿ ಸುಜುಕಿ ಎರ್ಟಿಗಾ ಆವೃತ್ತಿಗಳಿಗೆ ಕಠಿಣ ಪ್ರತಿಸ್ಪರ್ಧಿಯಾಗಲಿದೆ. ಈ ಸವಾಲನ್ನು ಮಾರುತಿ ಎರ್ಟಿಗಾ ಯಾವ ರೀತಿ ನಿಭಾಯಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಹಾಗೆಯೇ ಟಾಪ್ ಎಂಡ್ ವೆರಿಯಂಟ್ ಯುಎಸ್‌ಬಿ, ಬ್ಲೂಟೂತ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ಎಸಿ, ಎಬಿಎಸ್, ಇಬಿಡಿ ಹಾಗೂ ಎರಡು ಏರ್‌ಬ್ಯಾಗ್ ಸೌಲಭ್ಯಗಳನ್ನು ಪಡೆಯಲಿದೆ.

ಸೆವೆನ್ ಸೀಟರ್ ಷೆವರ್ಲೆ ಎಂಜಾಯ್

ಇದೀಗ ಷೆವರ್ಲೆ ಎಂಜಾಯ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








