ನ್ಯಾನೋ ಮಾತ್ರವಲ್ಲ ಆಲ್ಟೊ, ಫಿಗೊ, ಐ10 ಸಾಧನೆಯೆಲ್ಲ ಬರಿ ಶೂನ್ಯ!
ಕಳೆದ ದಿನವಷ್ಟೇ ಜರ್ಮನಿಯಲ್ಲಿ ನಡೆಸಲಾದ ಜಾಗತಿಕ ಎನ್‌ಸಿಎಪಿ (Global NCAP) ಅಪಘಾತ ಪರೀಕ್ಷೆಯಲ್ಲಿ ವಿಶ್ವದ ಅತಿ ಅಗ್ಗದ ಕಾರು ಟಾಟಾ ನ್ಯಾನೋ ಶೂನ್ಯ ಸಂಪಾದನೆ ಮಾಡಿರುವುದು ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಅಪಘಾತ ಪರೀಕ್ಷೆಯಲ್ಲಿ ನ್ಯಾನೋ ಸಾಧನೆ ದೊಡ್ಡ 'ಸೊನ್ನೆ'
ಆದರೆ ನಿಮ್ಮ ಮಾಹಿತಿಗಾಗಿ, ನಾವು ಹೇಳ ಬಯಸುವುದೇನೆಂದರೆ ಕೇವಲ ನ್ಯಾನೋ ಮಾತ್ರವಲ್ಲ. ದೇಶದ ಮುಂಚೂಣಿಯ ಸಣ್ಣ ಕಾರುಗಳೆಲ್ಲ ಕ್ರಾಶ್ ಟೆಸ್ಟ್‌ನಲ್ಲಿ ರೇಟಿಂಗ್ ಗಿಟ್ಟಿಸಿಕೊಳ್ಳುವಲ್ಲಿ ವೈಫಲ್ಯ ಅನುಭವಿಸಿದೆ. ಹೌದು ದೇಶದ ಅತ್ಯಂತ ಜನಪ್ರಿಯ ಮಾರುತಿ ಆಲ್ಟೊ 800, ಫೋರ್ಡ್ ಫಿಗೊ, ಹ್ಯುಂಡೈ ಐ10 ಅಷ್ಟೇ ಯಾಕೆ ಜರ್ಮನಿ ಮೂಲದ ಫೋಕ್ಸ್‌ವ್ಯಾಗನ್ ಪೊಲೊ ಸಹ ಅಪಘಾತ ಪರೀಕ್ಷೆಯಲ್ಲಿ ಶೂನ್ಯ ಸಾಧನೆ ಮಾಡಿಕೊಂಡಿದೆ.

ಈ ಎಲ್ಲ ವಿಚಾರಗಳನ್ನು ಬೊಟ್ಟು ಮಾಡಿರುವ ಗ್ಲೋಬಲ್ ಎನ್‌ಸಿಎಪಿ ಅಪಘಾತ ಸಂದರ್ಭಗಳಲ್ಲಿ ಪ್ರಯಾಣಿಕರ ಜೀವಕ್ಕೆ ಎಷ್ಟೊಂದು ಅಪಯಕಾರಿ ಎಂಬುದನ್ನು ಇವೆಲ್ಲವೂ ತೋರಿಸುತ್ತದೆ ಎಂದಿದೆ.

ಗಂಟೆಗೆ 64 ಕೀ.ಮೀ. ವೇಗದಲ್ಲಿ ಕ್ರಾಶ್ ಟೆಸ್ಟ್ ಹಮ್ಮೆಕೊಳ್ಳಲಾಗಿತ್ತು. ಇದರಂತೆ ಮೇಲೆ ತಿಳಿಸಿಲಾದ ಎಲ್ಲ ಕಾರುಗಳು ಶೂನ್ಯ ರೇಟಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ಮುಖಭಂಗಕ್ಕೊಳಗಾಗಿದೆ.

ಈ ಎಲ್ಲ ಕಾರುಗಳು ಭಾರತದಲ್ಲಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿದೆ ಎಂಬುದನ್ನು ಬ್ರಿಟನ್ ಮೂಲದ ಸ್ವತಂತ್ರ ವಾಹನ ಸುರಕ್ಷತಾ ಪರೀಕ್ಷಾ ಸಂಸ್ಥೆಯಾಗಿರುವ ಗ್ಲೋಬಲ್ ಎನ್‌ಸಿಎಪಿ ಉಲ್ಲೇಖಿಸಿದೆ.

ಅಡಾಲ್ಟ್ (ವಯಸ್ಕರು) ಸೇರಿದಂತೆ ಚೈಲ್ಡ್ (ಮಕ್ಕಳು) ಸುರಕ್ಷತೆ ವಿಚಾರದಲ್ಲೂ ಈ ಎಲ್ಲ ಕಾರುಗಳು ಜಿರೋ ರೇಟಿಂಗ್ ಗಿಟ್ಟಿಸಿಕೊಂಡಿದೆ. ಈ ಪೈಕಿ ಏರ್ ಬ್ಯಾಗ್ ಹೊಂದಿರುವ ಪೊಲೊ ಮಾತ್ರ ಐದರಲ್ಲಿ ನಾಲ್ಕು ರೇಟಿಂಗ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ.

ಕಳಪೆ ಮಟ್ಟದ ವಿನ್ಯಾಸ, ಏರ್ ಬ್ಯಾಗ್‌ಗಳ ಕೊರತೆ ಇವೆಲ್ಲವೂ ಭಾರತೀಯ ಪ್ರಯಾಣಕರನ್ನು ಸಾವಿನ ಬಾಗಿಲಲ್ಲಿ ತಂದು ನಿಲ್ಲಿಸುತ್ತಿದೆ ಎಂದು ಎನ್‌ಸಿಎಪಿ ಅಭಿಪ್ರಾಯಪಟ್ಟಿದೆ.

ಗ್ರಾಹಕರಿಗೆ ತಮ್ಮ ವಾಹನಗಳ ಸುರಕ್ಷತಾ ಗುಣಮಟ್ಟತೆಯನ್ನು ತಿಳಿದುಕೊಳ್ಳುವ ಅವಕಾಶವಿದೆ. ಅಲ್ಲದೆ ವಿಶ್ವದರ್ಜೆಯಲ್ಲಿ ಲಭ್ಯವಾಗುತ್ತಿರುವ ಮೂಲಭೂತ ಸುರಕ್ಷತೆಯನ್ನು ನಿರೀಕ್ಷೆ ಮಾಡಬಹುದಾಗಿದೆ ಎಂದಿದೆ.

ಜಾಗಿತಕವಾಗಿ ಸಣ್ಣ ಕಾರುಗಳಿಗೆ ಭಾರತದಲ್ಲಿ ಅತಿ ಹೆಚ್ಚಿನ ಬೇಡಿಕೆಯಿದೆ. ಹಾಗಿರುವಾಗ ಕಾರುಗಳು 20 ವರ್ಷಗಳ ಹಿಂದಿನ ಗುಣಮಟ್ಟ ಹೊಂದಿರುವುದು ನಿಜಕ್ಕೂ ಅಪಾಯಕಾರಿ. ಅದೇ ಹೊತ್ತಿಗೆ ಯುರೋಪ್ ಹಾಗೂ ಅಮೆರಿಕದಲ್ಲಿ ಫೈವ್ ಸ್ಟಾರ್ ಸ್ಟಾಂಡರ್ಡ್ ಮಾಮೂಲಿ ಎಂದಿದೆ.
ಮಾರುತಿ ಆಲ್ಟೊ 800
ಕಳಪೆ ಗುಣಮಟ್ಟ
ಹ್ಯುಂಡೈ ಐ10
ಸುರಕ್ಷತಾ ವಿಚಾರದಲ್ಲಿ ಎಡವಿದ ಸಣ್ಣ ಕಾರುಗಳು
ಫೋರ್ಡ್ ಫಿಗೊ
ಈ ಎಲ್ಲ ನಿಟ್ಟಿನಲ್ಲಿ ಭಾರತದಲ್ಲೂ ಸಮಗ್ರ ಅಪಘಾತ ಪರೀಕ್ಷೆ ಕಡ್ಡಾಯಗೊಳಿಸಬೇಕಾಗಿದೆ.
ಟಾಟಾ ನ್ಯಾನೋ
ವೆಚ್ಚ ಕಡಿತದ ನಿಟ್ಟಿನಲ್ಲಿ ಸೇಫ್ಟಿ ವಿಷಯದತ್ತ ಗಮನ ವಹಿಸದ ವಾಹನ ತಯಾರಕ ಸಂಸ್ಥೆಗಳು
ಫೋಕ್ಸ್‌ವ್ಯಾಗನ್ ಪೊಲೊ
ಏರ್ ಬ್ಯಾಗ್ ರಹಿತ ಫೋಕ್ಸ್‌ವ್ಯಾಗನ್ ಪೊಲೊ ಕಾರಿಗೂ ಜಿರೋ ರೇಟಿಂಗ್ ಪಾಯಿಂಟ್


Click it and Unblock the Notifications








