7 ನಿಮಿಷಗಳಲ್ಲಿ 5 ಕೋಟಿ ಸಂಪಾದಿಸಿದ ಜೇಮ್ಸ್ ಬಾಂಡ್
ನಮಗೆಲ್ಲರಿಗೂ ನಟ ಡ್ಯಾನಿಯಲ್ ಕ್ರೇಗ್ ಬಗ್ಗೆ ಹೆಚ್ಚು ಗೊತ್ತಿಲ್ಲವಾದರೂ ಅವರ ಜೇಮ್ಸ್ ಬಾಂಡ್ ಪತ್ತೇದಾರಿ ಪಾತ್ರ ಮಾತ್ರ ಚಿರಪರಿಚಿತ. ಕ್ರೇಗ್ ಅವರು ತಮ್ಮ ಬಾಂಡ್ ಪಾತ್ರಗಳಿಗೆ ಗರಿಷ್ಠ ಸಂಭಾವನೆ ಪಡೆಯುತ್ತಿದ್ದಾರೆ. ಇದೀಗ ಕಾರೊಂದರ ಅನಾವರಣದ ಮೂಲಕ ಕೋಟಿ ಗಟ್ಟಲೆ ರುಪಾಯಿ ಸಂಪಾದಿಸಿದ್ದಾರೆ.
ಹೌದು, ವಿಶ್ವದಲ್ಲಿ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ರೇಂಜ್ ರೋವರ್ ಸ್ಪೋರ್ಟ್ಸ್ ಕಾರನ್ನು ಪ್ರದರ್ಶಿಸಿರುವ ಬಾಂಡ್ ಪಾತ್ರಧಾರಿ ಡ್ಯಾನಿಯಲ್ ಕ್ರೇಗ್ 5 ಕೋಟಿ ರು.ಗಿಂತಲೂ ಹೆಚ್ಚು ಸಂಭಾವನೆ ಪಡೆದಿದ್ದಾರೆ.
ಅಷ್ಟಕ್ಕೂ ಬಾಂಡ್ ಪಾತ್ರವೇನು..?
ನ್ಯೂಯಾರ್ಕ್ ಅಂತಾರಷ್ಟ್ರೀಯ ಆಟೋ ಶೋ ಹಿಂದಿನ ರಾತ್ರಿ ನಡೆದ ಆದ್ಧೂರಿ ಸಮಾರಂಭಕ್ಕೆ ಆಗಮಿಸಿದ್ದ ಕ್ರೇಗ್, ಐಷಾರಾಮಿ ರೇಂಜ್ ರೋವರ್ ಕಾರನ್ನು ಅನಾವರಣಗೊಳಿಸಿದರು. ಈ ಏಳು ನಿಮಿಷಗಳ ಕಾರ್ಯಕ್ರಮಕ್ಕೆ ಬರೋಬ್ಬರಿ 5.43 ಕೋಟಿ ರು. ಸಂಭಾವನೆ ಗಿಟ್ಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಕ್ರಮಕ್ಕೆ ಆಗಮಿಸಿದ ಆತಿಥಿಯೊಬ್ಬರ ಪ್ರಕಾರ, ಡ್ಯಾನಿಯಲ್ ಕ್ರೇಗ್‌ಗೆ ಇಷ್ಟೊಂದು ದೊಡ್ಡ ಮೊತ್ತ ಪಾವತಿಸುವ ಅಗತ್ಯವಿರಲಿಲ್ಲ. ಕಡಿಮೆ ಪಕ್ಷ ಭಾಷಣ ಕೂಡಾ ಮಾಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬ ಆತಿಥಿಯ ಪ್ರಕಾರ ಕಾರ್ಯಕ್ರಮಕ್ಕೆ ಆಗಮಿಸಿದ ಕ್ರೇಗ್, ನೆರೆದಿದ್ದ ಪ್ರೇಕ್ಷಕರತ್ತ ಕೈಬೀಸಿದರು; ರೇಂಜ್ ರೋವರ್ ಅನಾವರಣಗೊಳಿಸಿದರು. ಇನ್ನು ಏಳು ನಿಮಿಷದೊಳಗೆ ಐದು ಕೋಟಿ ಬಾಚುತ್ತಾ ಅಲ್ಲಿಂದ ತೆರಳಿದರು ಎಂದಿದ್ದಾರೆ.

ಇದು ಸಿನೆಮಾ ಸೇರಿದಂತೆ ಇತರ ವಲಯಗಳಲ್ಲಿ 45ರ ಹರೆಯದ ಬಾಂಡ್ ಪಾತ್ರಧಾರಿ ಕ್ರೇಗ್ ಬೇಡಿಕೆಯನ್ನು ತೋರಿಸುತ್ತಿದೆ.

ಅಂದ ಹಾಗೆ 2014 ರೇಂಜ್ ರೋವರ್ ಸ್ಪೋರ್ಟ್ಸ್ ಕಾರಿನ ವೀಡಿಯೋ ಒಂದರಲ್ಲಿ ಬಾಂಡ್ ಕಾಣಿಸಿಕೊಂಡಿದ್ದರು.

ಒಟ್ಟಿನಲ್ಲಿ ಏಳು ನಿಮಿಷಗಳಲ್ಲಿ ಐದು ಕೋಟಿ ಸಂಪಾದಿಸಿರುವ ಕ್ರೇಗ್ ಆಟೋ ಜಗತ್ತಿನಲ್ಲಿ ಹೊಸ ಸೆನ್ಸೆಷನಲ್ ಸೃಷ್ಟಿ ಮಾಡಲು ಕಾರಣವಾಗಿದ್ದಾರೆ.

2014 ರೇಂಜ್ ರೋವರ್ ಸ್ಪೋರ್ಟ್

2014 ರೇಂಜ್ ರೋವರ್ ಸ್ಪೋರ್ಟ್

2014 ರೇಂಜ್ ರೋವರ್ ಸ್ಪೋರ್ಟ್

2014 ರೇಂಜ್ ರೋವರ್ ಸ್ಪೋರ್ಟ್

2014 ರೇಂಜ್ ರೋವರ್ ಸ್ಪೋರ್ಟ್

2014 ರೇಂಜ್ ರೋವರ್ ಸ್ಪೋರ್ಟ್

2014 ರೇಂಜ್ ರೋವರ್ ಸ್ಪೋರ್ಟ್



Click it and Unblock the Notifications








