ಇಂಡೋನೇಷ್ಯಾದಲ್ಲಿ ದಟ್ಸನ್ ಗೊ ಪ್ಲಸ್ ಲಾಂಚ್; ನೆಕ್ಸ್ಟ್ ಇಂಡಿಯಾ
ಬಹುನಿರೀಕ್ಷಿತ ದಟ್ಸನ್ ಗೊ ಪ್ಲಸ್ ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಇಂಡೋನೇಷ್ಯಾದಲ್ಲಿ ಲಾಂಚ್ ಆಗಿದೆ. ಈ ಹಿಂದೆ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ದಟ್ಸನ್ ಗೊ ಪ್ಲಸ್ ಇನ್ನು ಕೆಲವೇ ತಿಂಗಳೊಳಗೆ ಭಾರತ ಮಾರುಕಟ್ಟೆ ಪ್ರವೇಶಿಸುತ್ತಿರುವುದು ಈ ಸುದ್ದಿಯ ವಿಶೇಷ.
ಇನ್ನು ಗಮನಾರ್ಹ ವಿಶೇಷವೆಂದರೆ ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಿರುವುದಕ್ಕೆ ಸಮಾನವಾದ ದಟ್ಸನ್ ಗೊ ಪ್ಲಸ್ ಭಾರತದಲ್ಲೂ ಪರಿಚಯವಾಗಲಿದೆ. ಇದು ಕಾರು ಪ್ರಿಯರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಿರುವ ದಟ್ಸನ್ ಹೊಸ ಕಾರು, ಗೊ ಪ್ಲಸ್ ಪಾನ್ಖಾ (panca) ಎಂಬ ಹೆಸರಿನಿಂದ ಗುರುತಿಸಿಕೊಳ್ಳಲಿದೆ. ಹೆಚ್ಚಿನ ವಿವರಗಳಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಪಶ್ಚಿಮ ಜಾವಾದ ಘಟಕದಲ್ಲಿ ನಿರ್ಮಾಣವಾಗಿರುವ ನೂತನ ದಟ್ಸನ್ ಗೊ ಪ್ಲಸ್ ದಟ್ಸನ್ ಸಾನಿಧ್ಯವನ್ನು ಇನ್ನಷ್ಟು ಗಟ್ಟಿಪಡಿಸಲಿದೆ.

ನೂತನ ದಟ್ಸನ್ ಗೊ ಪ್ಲಸ್ ಎಂಪಿವಿ ಕಾರಲ್ಲಿ ಇದಕ್ಕೂ ಮೊದಲು ಲಾಂಚ್ ಆಗಿರುವ ಗೊ ಹ್ಯಾಚ್‌ಬ್ಯಾಕ್ ಕಾರನಲ್ಲಿರುವುದಕ್ಕೆ ಸಮಾನವಾದ 1.2 ಲೀಟರ್ ಪೆಟ್ರೋಲ್ ಎಂಜಿನ್ ಬಳಕೆಯಾಗಲಿದ್ದು, 68 ಅಶ್ವಶಕ್ತಿ ಉತ್ಪಾದಿಸಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ.

ಹಾಗೆಯೇ ದರದ ಬಗ್ಗೆ ಗಮನ ವಹಿಸಿದ್ದಲ್ಲಿ ಇಂಡೋನೇಷ್ಯಾ ದಟ್ಸನ್ ಗೊ ಪ್ಲಸ್ ಪಾನ್ಖಾ ಆವೃತ್ತಿಯು 4.42 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಇದು 5 ಪ್ಲಸ್ 2 ಆಸನ ವ್ಯವಸ್ಥೆಯನ್ನು ಹೊಂದಿದೆ. ಇನ್ನು ಆರಾಮದಾಯಕ ಪಯಣಕ್ಕಾಗಿ ಮೂರು ಸಾಲಿನ ಆಸನವನ್ನು ಪಡೆಯಲಿದೆ.

ವೈಶಿಷ್ಟ್ಯ
ಸಂಪರ್ಕಿತ ಫ್ರಂಟ್ ಸೀಟು, ಸ್ಪೀಡ್ ಸೆನ್ಸಿಂಗ್ ವೈಪರ್, ಮಲ್ಟಿ ಮಾಹಿತಿ ಪರದೆ, ಫಾಲೋ ಮಿ ಹೋಮ್ ಹೆಡ್‌ಲ್ಯಾಂಪ್, ಮೊಬೈಲ್ ಡಾಕ್ ಹಾಗೂ ಇನ್ನಿತರ ಆಕ್ಸೆಸರಿ ಸೌಲಭ್ಯವಿರಲಿದೆ.

ಇನ್ನು ಭಾರತ ಮಾದರಿಯನ್ನು ಗಮನಿಸಿದರೆ ಮೇಲೆ ತಿಳಿಸಿದ ಬಹುತೇಕ ಎಲ್ಲ ಸೌಲಭ್ಯಗಳು ಇರಲಿದೆ. ಇದರ ಜೆತೆಗ ಆಟೋಮ್ಯಾಟಿಕ್ ವೆರಿಯಂಟ್ ಸಹ ಆಗಮನವಾಗುವ ನಿರೀಕ್ಷೆಯಿದೆ. ವಾಹನೋದ್ಯಮಕ್ಕೆ ಸಂಬಂಧಿಸಿದ ನಿರಂತರ ಸುದ್ದಿಗಳಿಗಾಗಿ ನಿಮ್ಮ ಕನ್ನಡ ಡ್ರೈವ್‌ಸ್ಪಾರ್ಕ್ ಓದುತ್ತಿರಿ.


Click it and Unblock the Notifications








