ಮಾರ್ಚ್‌ನಿಂದ ದೇಶದ ರಸ್ತೆಗಳಲ್ಲಿ ದಟ್ಸನ್ ಗೊ ಅಬ್ಬರ

By Nagaraja

ಕಳೆದ ವರ್ಷ ನಡೆದ ಆದ್ಧೂರಿ ಸಮಾರಂಭದಲ್ಲಿ ದಟ್ಸನ್ ಸಣ್ಣ ಕಾರು ಬ್ರಾಂಡ್‌ನ್ನು ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್ ಪರಿಚಯಿಸಿತ್ತು. ಇದರಂತೆ ಈ ಎಂಟ್ರಿ ಲೆವೆಲ್ ಕಾರು ದೇಶದ ಮಾರುಕಟ್ಟೆ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದೆ.

ಮುಂಬರುವ ಪ್ರತಿಷ್ಠಿತ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಲಿರುವ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರಿನ ವಿತರಣೆ ಮಾರ್ಚ್ ತಿಂಗಳಿಂದ ಆರಂಭವಾಗಲಿದೆ ಎಂದು ಸಂಸ್ಥೆ ಮೂಲಗಳು ತಿಳಿಸಿವೆ.

ಮಾರ್ಚ್‌ನಿಂದ ದೇಶದ ರಸ್ತೆಗಳಲ್ಲಿ ದಟ್ಸನ್ ಗೊ ಅಬ್ಬರ

ಜಾಗತಿಕ ಮಾರುಕಟ್ಟೆ ಪರಿಗಣಿಸಿದಾಗ ಕ್ಷಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಕಾರಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ದೇಶದ ಮಧ್ಯದ ಕುಟುಂಬದವರು ತಮ್ಮ ಮೊದಲ ಕಾರಾಗಿ ಎಂಟ್ರಿ ಲೆವೆಲ್ ಕಾರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಹಣಕಾಸು ದೃಷ್ಟಿಕೋನದಲ್ಲೂ ಜನಸಾಮಾನ್ಯರಿಗೆ ಹೆಚ್ಚು ಸೂಕ್ತವೆನಿಸುತ್ತದೆ.

ಮಾರ್ಚ್‌ನಿಂದ ದೇಶದ ರಸ್ತೆಗಳಲ್ಲಿ ದಟ್ಸನ್ ಗೊ ಅಬ್ಬರ

ಇದೇ ಕಾರಣದಿಂದಾಗಿಯೇ ಮಾರುತಿ ಆಲ್ಟೊ 800 ದೇಶದ ರಸ್ತೆಗಳಲ್ಲಿ ಅತಿ ಹೆಚ್ಚು ಯಶಸ್ಸನ್ನು ಕಂಡಿತ್ತು. ಈ ಮೂಲಕ ದೇಶದ ಮಧ್ಯಮ ವರ್ಗದವರು ತಮ್ಮ ಕಾರಿನ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ ದಟ್ಸನ್‌ನಂತಹ ಸಣ್ಣ ಬ್ರಾಂಡ್‌ಗಳು ಮಾರುತಿ ಎಂಟ್ರಿ ಲೆವೆಲ್ ಕಾರುಗಳಿಗೆ ಪ್ರತಿಸ್ಪರ್ಧಿ ಕಣಕ್ಕಿಳಿಸುತ್ತಿದೆ. ಇದು ದೇಶದ ರಸ್ತೆಗಳಲ್ಲಿ ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ದೊರಕಲಿದೆ.

ಮಾರ್ಚ್‌ನಿಂದ ದೇಶದ ರಸ್ತೆಗಳಲ್ಲಿ ದಟ್ಸನ್ ಗೊ ಅಬ್ಬರ

ನಿಸ್ಸಾನ್ ಮೈಕ್ರಾ ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ದಟ್ಸನ್ ಗೊ ಸಣ್ಣ ಕಾರು ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನು ಪಡೆದುಕೊಂಡಿದೆ. ಇದು ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಿದೆ.

ಮಾರ್ಚ್‌ನಿಂದ ದೇಶದ ರಸ್ತೆಗಳಲ್ಲಿ ದಟ್ಸನ್ ಗೊ ಅಬ್ಬರ

ಈ ಬಾರಿಯ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಒಟ್ಟು ನಾಲ್ಕು ಮಾದರಿಗಳನ್ನು ನಿಸ್ಸಾನ್ ಪರಿಚಯಿಸಲಿದೆ. ಇದರಲ್ಲಿ ದಟ್ಸನ್ ಬ್ರಾಂಡ್ ಸೇರಿದಂತೆ ಹೊಸತಾದ ಸನ್ನಿ ಹಾಗೂ ಎರಡು ಕಾನ್ಸೆಪ್ಟ್ ಕಾರುಗಳು ಇರಲಿದೆ.

ಮಾರ್ಚ್‌ನಿಂದ ದೇಶದ ರಸ್ತೆಗಳಲ್ಲಿ ದಟ್ಸನ್ ಗೊ ಅಬ್ಬರ

ಏಳು ಸೀಟಿನ ದಟ್ಸನ್ ಗೊ ಪ್ಲಸ್ ಎಂಪಿವಿ ಸಹ ಇದೇ ಮೊದಲ ಬಾರಿಗೆ ಭಾರತದಲ್ಲಿ ಪ್ರದರ್ಶನವಾಗಲಿದೆ. ಈಗಾಗಲೇ ಇಂಡೋನೋಷ್ಯಾದಲ್ಲಿ ಅನಾವರಣವಾಗಿರುವ ದಟ್ಸನ್ ಗೊ ಪ್ಲಸ್ ಎಂಪಿವಿ ಪ್ರಮುಖವಾಗಿಯೂ ಮಾರುತಿ ಎರ್ಟಿಗಾ ಪ್ರತಿಸ್ಪರ್ಧಿಯಾಗಿರಲಿದೆ.

ಮಾರ್ಚ್‌ನಿಂದ ದೇಶದ ರಸ್ತೆಗಳಲ್ಲಿ ದಟ್ಸನ್ ಗೊ ಅಬ್ಬರ

ಅಂದ ಹಾಗೆ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಒಟ್ಟಾರೆಯಾಗಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ.

More from DriveSpark

Article Published On: Friday, January 17, 2014, 10:04 [IST]
English summary
Datsun Go Small Car Sales Begins In March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+