ರೆನೊ ಜೊತೆ ದಟ್ಸನ್ ಲಾಂಛನ 'ಅದಲು ಬದಲು' ಇಲ್ಲ!

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿರುವ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಹಾಗಿರುವಾಗ ತನ್ನ ಮಾತೃಸಂಸ್ಥೆ ನಿಸ್ಸಾನ್ ಪಾಲುದಾರಿಕೆ ಹೊಂದಿರುವ ರೆನೊ ಜತೆ ಲಾಂಛನ ಹಂಚಿಕೊಳ್ಳಲಾಗುವುದಿಲ್ಲ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿದೆ.

ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಿರುವುದು ದಟ್ಸನ್ ಗೊ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲು ನೆರವಾಗಲಿದೆ. ಸಣ್ಣ ಕಾರು ವಿಭಾಗದಲ್ಲಿ ಕಾಣಿಸಿಕೊಂಡಿರುವ ದಟ್ಸನ್ ಗೊ, ಆಲ್ಟೊ ಕೆ10 ಹಾಗೂ ಹ್ಯುಂಡೈ ಇಯಾನ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ರೆನೊ ಜೊತೆ ದಟ್ಸನ್ ಲಾಂಛನ 'ಅದಲು ಬದಲು' ಇಲ್ಲ!

ನಿಮ್ಮ ಮಾಹಿತಿಗಾಗಿ ದಟ್ಸನ್, ನಿಸ್ಸಾನ್‌ನ ಸಣ್ಣ ಕಾರು ಬ್ರಾಂಡ್ ಆಗಿದೆ. ಇನ್ನೊಂದೆಡೆ ಫ್ರಾನ್ಸ್ ಮೂಲದ ರೆನೊ ಜತೆ ನಿಸ್ಸಾನ್ ಫ್ಲ್ಯಾಟ್‌ಫಾರ್ಮ್‌ ಹಂಚಿಕೊಂಡಿದೆ.

ರೆನೊ ಜೊತೆ ದಟ್ಸನ್ ಲಾಂಛನ 'ಅದಲು ಬದಲು' ಇಲ್ಲ!

ಈ ವರೆಗೆ ನೀವು ನೋಡಿರುವಂತೆಯೇ ನಿಸ್ಸಾನ್ ಹಾಗೂ ರೆನೊ ಬ್ರಾಂಡ್‌ಗಳು ತಮ್ಮ ಲಾಂಛನವನ್ನು ಪರಸ್ಪರ ಹಂಚಿಕೊಂಡಿವೆ. ಉದಾಹರಣೆಗೆ ರೆನೊ ಪಲ್ಸ್/ನಿಸ್ಸಾನ್ ಮೈಕ್ರಾ, ಸ್ಕಾಲಾ/ಸನ್ನಿ ಹಾಗೂ ಟೆರೆನೊ/ಡಸ್ಟರ್ ಹೀಗೆ ಪಟ್ಟಿ ಬೆಳೆಯುತ್ತದೆ.

ರೆನೊ ಜೊತೆ ದಟ್ಸನ್ ಲಾಂಛನ 'ಅದಲು ಬದಲು' ಇಲ್ಲ!

ಹಾಗಿದ್ದರೂ ಹೊಸದಾಗಿ ಬಿಡುಗಡೆಯಾಗಿರುವ ದಟ್ಸನ್ ಗೊ ಇದರಿಂದ ಹೊರತಾಗಿರಲಿದ್ದು, ರೆನೊ ಜತೆ ಫ್ಲ್ಯಾಟ್‌ಫಾರ್ಮ್ ಹಂಚಿಕೊಳ್ಳಲಾಗುವುದಿಲ್ಲ ಎಂಬುದನ್ನು ತಿಳಿಸಿದೆ.

ರೆನೊ ಜೊತೆ ದಟ್ಸನ್ ಲಾಂಛನ 'ಅದಲು ಬದಲು' ಇಲ್ಲ!

ವರದಿಗಳ ಪ್ರಕಾರ ನಿಸ್ಸಾನ್, ಭವಿಷ್ಯದಲ್ಲಿ ರೆನೊ ಜತೆ ಲಾಂಛನ ಹಂಚಿಕೊಳ್ಳುವ ಸಾಧ್ಯತೆ ಕ್ಷೀಣಿಸಿವೆ. ಇಂತಹದೊಂದು ಬೆಳವಣಿಗೆಯನ್ನು ಗ್ರಾಹಕರು ಸಹ ಇಷ್ಟಪಡುವುದಿಲ್ಲ ಎಂಬುದನ್ನು ನಿಸ್ಸಾನ್ ಮನಗಂಡಿದೆ.

ರೆನೊ ಜೊತೆ ದಟ್ಸನ್ ಲಾಂಛನ 'ಅದಲು ಬದಲು' ಇಲ್ಲ!

ಚೆನ್ನೈ ಘಟಕ ಹಂಚಿಕೊಂಡಿರುವ ನಿಸ್ಸಾನ್ ಹಾಗೂ ರನೊ ವಾರ್ಷಿಕವಾಗಿ ನಾಲ್ಕು ಲಕ್ಷ ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಂದ ಹಾಗೆ ದಟ್ಸನ್ ಸದ್ಯದಲ್ಲೇ ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಹಾಗೂ ರಷ್ಯಾಗೆ ಪ್ರವೇಶಿಸಲಿದೆ. ಇದಲ್ಲದೆ ರಷ್ಯಾಗೆ ವಿಶೇಷ ಸೆಡಾನ್ ಕಾರು ಸಹ ಪರಿಚಯವಾಗಲಿದೆ.

ರೆನೊ ಜೊತೆ ದಟ್ಸನ್ ಲಾಂಛನ 'ಅದಲು ಬದಲು' ಇಲ್ಲ!

ಭಾರತದಲ್ಲಿ ಗೊ ಸೇರಿದಂತೆ ಮೂರು ಮಾದರಿಗಳನ್ನು ಪರಿಚಯಿಸುವ ಯೋಜನೆಯನ್ನು ದಟ್ಸನ್ ಹೊಂದಿದೆ. ಇನ್ನುಳಿದಂತೆ ಗೊ ಪ್ಲಸ್ ಎಂಪಿವಿ ಕಾರು ನಿಕಟ ಭವಿಷ್ಯದಲ್ಲೇ ಲಾಂಚ್ ಆಗಲಿದೆ. ಇದರಂತೆ ತನ್ನದೇ ಆದ ಸ್ವತಂತ್ರ ವಿತರಕ ಜಾಲ ಆರಂಭಿಸಲು ಸಂಸ್ಥೆ ಯೋಜನೆ ಹೊಂದಿದೆ. ಸದ್ಯ ನಿಸ್ಸಾನ್ ಅಧಿಕೃತ ಡೀಲರ್‌ಶಿಪ್ ಮುಖಾಂತರ ಗೊ ಹ್ಯಾಚ್‌ಬ್ಯಾಕ್ ಕಾರು ಮಾರಾಟಕ್ಕೆ ಲಭ್ಯವಿರಲಿದೆ.

More from DriveSpark

Article Published On: Saturday, March 22, 2014, 8:02 [IST]
English summary
Datsun recently launched their first offering to Indian citizens in the form of GO! The have been excellent at pricing the car aggressively and have a good product in their hand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+