ದೇಶದ ಮೊದಲ ಸ್ಪೋರ್ಟ್ಸ್ ಕಾರು ನೋಡಲು ಸೂಪರ್
ಭಾರತದ ಕಾರು ಉತ್ಸಾಹಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ಪ್ರತಿಷ್ಠಿತ ವಿನ್ಯಾಸ ಕಂಪನಿಯಾದ ಡಿಸಿ ಡಿಸೈನ್, ದೇಶದ ಮೊದಲ ಸ್ಪೋರ್ಟ್ಸ್ ಕಾರನ್ನು ನಿಕಟ ಭವಿಷ್ಯದಲ್ಲಿ ಬಿಡುಗಡೆಗೊಳಿಸಲಿದೆ.
ಗುಜರಾತ್‌ನ ಸನಂದ್ ಘಟಕದಲ್ಲಿ ಡಿಸಿ ಡಿಸೈನ್ ಅವಂತಿ ಸ್ಪೋರ್ಟ್ಸ್ ಕಾರು ಉತ್ಪಾದನೆಯಾಗಲಿದ್ದು, ಈ ನಿಟ್ಟಿನಲ್ಲಿ 60 ಕೋಟಿ ರುಪಾಯಿಗಳ ಬೃಹತ್ ಹೂಡಿಕೆ ಮಾಡಲಾಗುತ್ತಿದೆ. ವರ್ಷಾಂತ್ಯದಲ್ಲಿ ಸ್ಪೋರ್ಟ್ಸ್ ಕಾರಿನ ಉತ್ಪಾದನೆ ಆರಂಭವಾಗಲಿದ್ದು, ಇದರ ಬೆನ್ನಲ್ಲೇ 2014 ಎಸ್‌ಯುವಿ ಸ್ಪೋರ್ಟ್ಸ್ ಕಾರಿನ ಎಂಟ್ರಿ ಕೂಡಾ ಆಗಲಿದೆ.
ದೇಶದ ಮೊದಲ ಸ್ಪೋರ್ಟ್ಸ್ ಕಾರಿನ ಹಿಂದಿನ ಮಾಸ್ಟರ್ ಮೈಂಡ್ ಡಿಸಿ ಡಿಸೈನ್ ಮುನ್ನಡೆಸುತ್ತಿರುವ ಹೆಸರಾಂತ ವಿನ್ಯಾಸಗಾರ ದಿಲೀಪ್ ಛಾಬ್ರಿಯಾ ಅವರಾಗಿದ್ದಾರೆ. ಹಿಂದೆ ಅಮೆರಿಕದ ಜನರಲ್ ಮೋಟಾರ್ಸ್‌ನಲ್ಲಿ ಸೇವೆ ಸಲ್ಲಿಸಿದ್ದ ಛಾಬ್ರಿಯಾ ಆ ಬಳಿಕ ತಮ್ಮದೇ ಸ್ವಂತ ದೇಶಿ ಕಸ್ಟಮೈಸ್ಡ್ ಡಿಸೈನ್ ಸಂಸ್ಥೆಯನ್ನು ಆರಂಭಿಸಿದ್ದರು.

2012ರಲ್ಲಿ ದೆಹಲಿ ವಾಹನ ಪ್ರದರ್ಶನದಲ್ಲಿ ಡಿಸಿ ಡಿಸೈನ್ ಪ್ರಪ್ರಥಮ ಸ್ಪೋರ್ಟ್ಸ್ ಕಾರಿನ ಕಾನ್ಸೆಪ್ಟ್ ಪ್ರದರ್ಶಿಸಲಾಗಿತ್ತು. ಇದನ್ನು ಬಾಲಿವುಡ್ ಮೆರು ನಟ ಅಮಿತಾಬ್ ಬಚ್ಚನ್ ಅನಾವರಣಗೊಳಿಸಿದ್ದಾರೆ.

ಸೂಪರ್ ಕಾರು ಶೈಲಿಯನ್ನು ಹೊಂದಿರುವ ಸ್ಪೋರ್ಟ್ಸ್ ಕಾರು ಮಿಡ್ ಮೌಂಟೆಡ್ ಎಂಜಿನ್ ಹೊಂದಿರಲಿದ್ದು, ಎರಡು ಸೀಟ್ ಹೊಂದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಫೋರ್ಡ್ ತಲಹದಿಯ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಎಂಜಿನ್ ಲಗತ್ತಿಸುವ ಸಾಧ್ಯತೆಯಿದೆ.

ಕ್ರಮೇಣ ಹೋಂಡಾ ವಿ6 ಎಂಜಿನ್‌ನಿಂದ ಬದಲಾಯಿಸುವ ಸಾಧ್ಯತೆಯಿದೆ. ಇದು 400ರಿಂದ 500 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಡಿಸಿ ಡಿಸೈನ್ ಅವಂತಿ ಆರು ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಪಡೆಯಲಿದೆ

ಕಾರಿನ ಹೊರವಚ ಅಲ್ಯೂಮಿನಿಯಂನಿಂದ ನಿರ್ಮಾಣವಾಗಲಿದೆ. ಹಾಗೆಯೇ ಫೈಬರ್ ಗ್ಲಾಸ್ ಇರಲಿದೆ.

ಇನ್ನು ಅಲ್ಯೂಮಿನಿಯಂ ಬಳಕೆಯಿಂದ ಕಾರಿನ ಭಾರ ಹೆಚ್ಚಾಗಲಿದ್ದು, ಒಟ್ಟು 1563 ಕೆ.ಜಿ ಆಗಲಿದೆ.

ಕಂಪನಿಯ ಪ್ರಕಾರ 0ರಿಂದ 100 ಕೀ.ಮೀ. ವೇಗತೆಯನ್ನು ಕೇವಲ ಏಳು ಸೆಕೆಂಡುಗಳಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಅಂತಿಮವಾಗಿ ಡಿಸಿ ಡಿಸೈನ್ ಅವಂತಿ ಸ್ಪೋರ್ಟ್ಸ್ ಕಾರಿನ ದರ 25ರಿಂದ 30 ಲಕ್ಷ ರು.ಗಳ ವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.





Click it and Unblock the Notifications








