ಇನ್ನು ಡ್ರೈವಿಂಗ್ ಮಾಡಲು ಚಾಲಕ ಬೇಕಾಗಿಲ್ಲ!

By Nagaraja

ನೀವು ಕಾರು ಡ್ರೈವಿಂಗ್ ಕರಗತ ಮಾಡಿಕೊಂಡಿಲ್ಲವೇ? ಕಾರು ಡ್ರೈವಿಂಗ್ ಕಲಿಯಲು ದುಡ್ಡಿನ ಸಮಸ್ಯೆಯೇ? ಚಿಂತೆ ಇಲ್ಲ ಬಿಡಿ, ಇನ್ನು ಮುಂದೆ ಡ್ರೈವರ್ ಇಲ್ಲದೆಯೇ ಕಾರು ಚಲಿಸಲಿದೆ.

ಹೌದು, ಡ್ರೈವರ್ ಇಲ್ಲದೆ ಚಲಾಯಿಸಬಹುದಾದ ಕಾರೊಂದನ್ನು ಬ್ರಿಟನ್ ಸರಕಾರ ಅಭಿವೃದ್ಧಿಪಡಿಸುತ್ತಿದೆ. ಈ ಡ್ರೈವರ್ ಲೆಸ್ ಕಾರುಗಳು ಸೆನ್ಸಾರ್‌ ಹಾಗೂ ಕ್ಯಾಮೆರಾದಿಂದ ಕಾರ್ಯ ನಿರ್ವಹಿಸಲಿದ್ದು, ಹೆಚ್ಚು ಸುರಕ್ಷಿತವಾಗಿ ಸಾಗಲು ಸಕ್ಷಮವೆನಿಸಿದೆ.

ಸಾಮಾನ್ಯ ಕಾರುಗಳಿಗಿಂತಲೂ ಹೆಚ್ಚು ಸುರಕ್ಷಿತ ಮಾನದಂಡಗಳನ್ನು ಹೊಂದಿರುವ ಇಂತಹ ಡ್ರೈವರ್ ಲೆಸ್ ಕಾರುಗಳು ಪ್ರಯಾಣಿಕ ಸ್ನೇಹಿ ಎನಿಸಿಕೊಳ್ಳಲಿದೆ. ಈ ಡ್ರೈವರ್ ಲೆಸ್ ಕಾರುಗಳು ಪ್ರಸ್ತುತ ಟೆಸ್ಟಿಂಗ್ ಹಂತದಲ್ಲಿದ್ದು, ನಿಕಟ ಭವಿಷ್ಯದಲ್ಲಿ ಆಗಮನವಾಗುವ ಸಾಧ್ಯತೆಯಿದೆ. ಇದರೊಂದಿಗೆ ರಸ್ತೆನಿಬಿಡತೆ ಕಡಿಮೆ ಮಾಡಲು ಗುರಿಯಿರಿಸಿಕೊಳ್ಳಲಾಗಿದೆ.

ಇನ್ನು ಡ್ರೈವಿಂಗ್ ಮಾಡಲು ಚಾಲಕ ಬೇಕಾಗಿಲ್ಲ!

ಡ್ರೈವರ್ ರಹಿತ ಕಾರುಗಳು ರಸ್ತೆಗಳಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲಿದ್ದು, ಲೇನ್‌ನಲ್ಲಿ ಸಂಚರಿಸುತ್ತಾ ಸ್ಪೀಡ್ ವ್ಯತಯವನ್ನು ನಿಯಂತ್ರಿಸಲಿದೆ.

ಇನ್ನು ಕಾರು ಸಂಚರಿಸಲು ಚಾಲಕನ ಅಗತ್ಯವಿಲ್ಲ

ಸದ್ಯ ಈ ಕಾರು ಪ್ರಖ್ಯಾತ ನಿಸ್ಸಾನ್ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ಗ್ರಾಮೀಣ ಹಾಗೂ ಉಪನಗರಗಳಲ್ಲಿ ಪರೀಕ್ಷಿಸುತ್ತಿದೆ.

ಟೆಸ್ಟ್ ರನ್

ಟೆಸ್ಟ್ ರನ್

ಸಯನ್ಸ್ ಪಾರ್ಕ್ ರೋಡ್‌ನಲ್ಲಿ ಟೆಸ್ಟಿಂಗ್ ರನ್ ಯಶಸ್ವಿ ಕಂಡಿದ್ದು, ಪ್ರಸಕ್ತ ವರ್ಷಾಂತ್ಯದಲ್ಲಿ ಹೆಚ್ಚಿನ ಪ್ರಯೋಗಾರ್ಥ ಪರೀಕ್ಷೆಗಳು ನಡೆಯಲಿದೆ.

ಇನ್ನು ಡ್ರೈವಿಂಗ್ ಮಾಡಲು ಚಾಲಕ ಬೇಕಾಗಿಲ್ಲ!

ಪ್ರಸ್ತುತ ಈ ಆಟೋಮ್ಯಾಟಿಕ್ ಕಾರಿನ ಪರೀಕ್ಷೆ ಖಾಸಗಿ ಪ್ರದೇಶದಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ರಸ್ತೆಗಳಿಗೂ ಪ್ರವೇಶ ಪಡೆಯಲಿದೆ. ಟೆಸ್ಟಿಂಗ್ ಹಂತದಲ್ಲಿ ಕಾರು ಪರೀಕ್ಷೆ ವೇಳೆ ಬ್ಯಾಕ್‌ಅಪ್ ಚಾಲಕ ಜತೆಗಿರಲಿದ್ದಾರೆ. ಇವರು ತುರ್ತು ಪರಿಸ್ಥಿತಿಯಲ್ಲಿ ನೆರವಿಗೆ ಬರಲಿದ್ದಾರೆ.

ಸೆಲ್ಫ್ ರೈಡಿಂಗ್ ಗೂಗಲ್ ಕಾರ್

ಈ ಹಿಂದೆ ಡ್ರೈವರ್ ಲೆಸ್ ಕಾರೊಂದನ್ನು ಗೂಗಲ್ ಅಭಿವೃದ್ಧಿಪಡಿಸಿತ್ತು. ಇದು 1,60,934 ಕೀ.ಮೀ. ದೂರವನ್ನು ಕ್ರಮಿಕರಿಸುವಲ್ಲಿ ಯಶಸ್ಸನ್ನು ಕಂಡಿತ್ತು.

More from DriveSpark

Article Published On: Thursday, July 18, 2013, 17:10 [IST]
English summary
Driverless cars will be tested on public roads by the end of 2013, says the UK government.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+