ಕೋಟಿ ಬೆಳೆಬಾಳುವ ಆಡಿ ಕಾರು ನಮ್ಮ ದೇಶದಲ್ಲಿ ಲಾಂಚ್

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಆಡಿ ಇಂಡಿಯಾ, ದೇಶದಲ್ಲಿ ಸೂಪರ್ ಸ್ಪೋರ್ಟ್ಸ್‌ ಕಾರಿನ ಹೊಸ ಆವೃತ್ತಿಯಾದ ಆರ್8 (R8) ಕಾರನ್ನು ಲಾಂಚ್ ಮಾಡಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ): 1.35 - 1.74 ಕೋಟಿ ರು.

ಹೊಸ ವರ್ಷದ ಸಂಭ್ರಮದಲ್ಲಿರುವ ಗ್ರಾಹಕರಿಗೆ ಆಡಿ ಇಂಡಿಯಾ ಈಗಾಗಲೇ ಕ್ಯೂ5 ಕಾರನ್ನು ಪರಿಚಯಿಸಿದೆ. ಇದೀಗ ಆರ್8 ಬಿಡುಗಡೆ ಮಾಡುವ ಮೂಲಕ ಸೂಪರ್ ಸ್ಪೋರ್ಟ್ಸ್ ಕಾರು ಸೆಗ್ಮೆಂಟ್‌ನಲ್ಲಿ ನಮ್ಮ ಸ್ಥಾನ ಇನ್ನಷ್ಟು ಸುಭದ್ರವಾಗಿಸುವ ನಂಬಿಕೆಯಿದೆ ಎಂದು ಆಡಿ ಇಂಡಿಯಾ ಹೇಳಿಕೊಂಡಿದೆ.

ಪ್ರಸಕ್ತ ಸಾಲು ಆಡಿ ಪಾಲಿಗೆ ಮಹತ್ವದೆನಿಸಿದ್ದು, ಎರಡನೇ ತ್ರೈಮಾಸಿಕ ಅವಧಿಯಲ್ಲಿ ಎಸ್6 ಆವೃತ್ತಿಯನ್ನು ಪರಿಚಯಿಸುವ ಇರಾದೆ ಹೊಂದಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ನಡುವೆ ಕ್ಯೂ5 ಆವೃತ್ತಿಯು 250 ಬುಕ್ಕಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ಉತ್ತಮ ಮಾರಾಟವನ್ನು ಕಾಯ್ದುಕೊಂಡಿದೆ. ಈ ಮೂಲಕ ದೇಶದ ಲಗ್ಷುರಿ ಕಾರು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸ್ಥಾಪಿಸುತ್ತಿದ್ದು, 2015ರ ವೇಳೆಗೆ ಜಾಗತಿಕ ಆಡಿ ಮಾರುಕಟ್ಟೆಯಲ್ಲಿ ಭಾರತವು ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದು ಗುರಿಯಾಗಿದೆ.

ವಸಕ್ತ ಸಾಲಿನಲ್ಲಿ ಶೇಕಡಾ 20ರಷ್ಟು ವೃದ್ಧಿ ದರ ನಿರೀಕ್ಷಿಸುತ್ತಿರುವ ಆಡಿ ಇಂಡಿಯಾ 10,500ರಿಂದ 10,800 ಕಾರುಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ. 2012ರಲ್ಲಿ ಆಡಿ 9,003 ಕಾರುಗಳನ್ನು ಸೇಲ್ ಮಾಡಿದ್ದವು.

2013 Audi R8

ನೂತನ ಆಡಿ ಆರ್8 ಕಾರು 4.2 ಲೀಟರ್ ವಿ8 ಹಾಗೂ 5.2 ಲೀಟರ್ ವಿ10 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

2013 Audi R8

ಈ ಹಿಂದಿನ ಆವೃತ್ತಿಯ ಮ್ಯಾನುವಲ್ ಗೇರ್ ಬಾಕ್ಸ್ ಬದಲು ಹೆಚ್ಚು ವೇಗವರ್ಧಿತ 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಬಳಕೆಯಾಗಲಿದೆ.

2013 Audi R8

ಹಾಗೆಯೇ ಆರ್8 ವಿ10 ಕೇವಲ ನಾಲ್ಕು ಸೆಕೆಂಡುಗಳಲ್ಲಿ 100 ಕೀ.ಮೀ. ವೇಗ ವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.

2013 Audi R8

ಹೊಸ 2013 ಆಡಿ ಆರ್8 ಸ್ಪೋರ್ಟ್ಸ್ ಕಾರಿನ ಸ್ಮಾರ್ಟ್ ಎಲ್‌ಇಡಿ ಹೆಡ್‌ಲೈಟ್‌ಗಳು

2013 Audi R8

ಆಡಿ ಆರ್8 ರೇಸ್ ಟ್ರ್ಯಾಕ್‌ನಲ್ಲೂ ಅತಿ ಹೆಚ್ಚು ವೇಗವನ್ನು ಪಡೆಯಲಿದೆ.

2013 Audi R8

5.2 ಲೀಟರ್ ವಿ10 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿರುವ ಆಡಿ ಆರ್8 ಕಾರು ಪ್ರತಿ ಗಂಟೆಗೆ ಗರಿಷ್ಠ 314 ಕೀ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

2013 Audi R8
2013 Audi R8
2013 Audi R8
2013 Audi R8
2013 Audi R8

More from DriveSpark

Article Published On: Wednesday, January 23, 2013, 8:04 [IST]
English summary
Luxury car maker Audi launched a new version of super sports car R8 in India, priced between Rs 1.35 crore and Rs 1.74 crore (ex-showroom, Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+