ನೀವು ಡ್ರೈವ್ ಮಾಡಲೇಬೇಕಾದ ಸೂಪರ್ ಕಾರುಗಳಿವು!

ಹೌದು, ಜೀವನದಲ್ಲಿ ಯಾವಾಗಲಾದರೂ ಒಂದು ಸಾರಿ ಇಂತಹ ಸೂಪರ್ ಕಾರುಗಳನ್ನು ಚಾಲನೆ ಮಾಡುವುದು ಪ್ರತಿಯೊಬ್ಬ ಕಾರು ಪ್ರಿಯನ ಕನಸಾಗಿರುತ್ತದೆ. ಇನ್ನು ಕೆಲವರಿಗಂತೂ ಇಂತಹ ಕಾರುಗಳು ಸಿಗದೇ ಹೋದಲ್ಲಿ ಜೀವನದಲ್ಲಿ ಏನನ್ನೋ ಕಳೆದುಕೊಂಡವರ ಹಾಗೆ ಕೊರಗಿ ಹೋಗುತ್ತಾರೆ.

ಅಂದ ಹಾಗೆ ಪ್ರಪಂಚದಲ್ಲಿ ಅನೇಕ ಅಂತಹ ಸೂಪರ್ ಕಾರುಗಳಿದ್ದು, ಅವುಗಳನ್ನು ಒಂದು ಬಾರಿಯಾದರೂ ಡ್ರೈವ್ ಮಾಡಬೇಕೆಂಬ ಆಸೆ ನಮ್ಮಲ್ಲಿರುತ್ತದೆ. ಕೆಲವು ಕಾರುಗಳಂತೂ ಅದರ ಅಂದತೆಗೆ ಹೆಸರುವಾಸಿಯಾಗಿದೆ. ಇನ್ನು ಕೆಲವು ಕಾರಗಳು ಅದ್ಭುತ ನಿರ್ವಹಣೆಯಿಂದ ಜನಪ್ರಿಯವೆನಿಸಿದೆ.

ಅತಿ ವೇಗದಲ್ಲಿ ಸಾಗುವ ಇಂತಹ ಕಾರುಗಳು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಈ ಪೈಕಿ ವಿಶ್ವದ ಕೆಲವು ಸೂಪರ್ ಕಾರುಗಳನ್ನು ಪಟ್ಟಿ ಮಾಡುವ ಪ್ರಯತ್ನವನ್ನು ನಮ್ಮ ಡ್ರೈವ್ ಸ್ಪಾರ್ಕ್ ತಂಡ ಮಾಡಿದೆ. ಪ್ರಸ್ತುತ ಪಟ್ಟಿಯಲ್ಲಿ ಯಾವುದೇ ನಂ.1 ಕಾರುಗಳಿಲ್ಲ. ಆದರೆ ಪ್ರತಿಯೊಂದು ಕಾರುಗಳು ಅದರದ್ದೇ ಆದ ವೈಶಿಷ್ಟ್ಯಗಳಿಂದ ವಿಶೇಷವೆನಿಸಿದೆ.

Cars You Can Die For

ಇಲ್ಲಿ ಜಗತ್ತಿನಾದ್ಯಂತದ ಕೆಲವು ಅತ್ಯಂತ ಅಪರೂಪದ, ಅತಿ ದುಬಾರಿ ಹಾಗೂ ವಿಲಕ್ಷಣ ಪ್ರಭಾವಶಾಲಿ ಕಾರುಗಳನ್ನು ಪಟ್ಟಿ ಮಾಡಿ ಕೊಡಲಾಗಿದೆ. ಖಂಡಿತವಾಗಿಯೂ ಕಾರು ಪ್ರಿಯರು ಇದನ್ನು ಡ್ರೈವ್ ಮಾಡಲು ಸಿಗುವ ಅವಕಾಶವನ್ನು ಮಿಸ್ ಮಾಡಲಾರರು!

Aston Martin Virage

Aston Martin Virage

ಜಗತ್ತಿನ ಅತಿ ಪುರಾತನ ಕಾರು ಕಂಪನಿಗಳಲ್ಲಿ ಒಂದಾಗಿರುವ ಆಸ್ಟನ್ ಮಾರ್ಟಿನ್‌ನ ವೈರಜ್ ನೀವು ಬಯಸಿದ ಎಲ್ಲವನ್ನು ನೀಡುತ್ತದೆ. ಇದರ 6 ಲೀಟರ್ ಎಂಜಿನ್ 570 ಎನ್‌ಎಂನಲ್ಲಿ 490 ಪವರ್ ಉತ್ಪಾದಿಸುತ್ತದೆ. ಆಸ್ಟನ್ ಮಾರ್ಟಿನ್ ವೈರಜ್ ಪ್ರತಿ ಗಂಟೆಗೆ ಗರಿಷ್ಠ 295 ಕೀ.ಮೀ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಇದರ ದರ 2.5 ಕೋಟಿ ರೂಪಾಯಿಗಳಾಗಿವೆ.

Audi R8 GT

Audi R8 GT

ಆಡಿ ಆರ್8 ಜಿಟಿ ಕಾರಿನ ವಿ10 ಎಂಜಿನ್ 560 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಪ್ರತಿ ಗಂಟೆಗೆ ಗರಿಷ್ಠ 320 ಕೀ.ಮೀ. ವೇಗದಲ್ಲಿ ಚಲಿಸಲಿದೆ. ಆಡಿ ಮಾಡೆಲ್‌ಗಳ ಪೈಕಿ ಅತಿ ಅಪರೂಪದ ಎನಿಸಿಕೊಂಡಿರುವ ಆರ್8 ಜಿಟಿ, ಭಾರತೀಯ ರುಪಾಯಿ ಪ್ರಕಾರ ಕೋಟಿ ಬೆಳೆಬಾಳುವ ಕಾರಾಗಿದೆ.

Lexus LFA Nurburgring

Lexus LFA Nurburgring

ಟೊಯೊಟಾದ ಪ್ರೀಮಿಯಂ ಬ್ರಾಂಡ್ ಲೆಕ್ಸಾಸ್‌ನಿಂದ ತಯಾರಿಸಲಾಗಿರುವ ಸೂಪರ್ ಕಾರು ಲೆಕ್ಸಸ್ ಎಲ್‌ಎಫ್‌ಎ ನರ್ಬರಿಂಗ್. ಇದರ 5 ಲೀಟರ್ ವಿ10 ಎಂಜಿನ್ 552 ಹಾರ್ಸ್ ಪವರ್ ಉತ್ಪಾದಿಸಲಿದ್ದು, ಗಂಟೆಗೆ ಗರಿಷ್ಠ 298 ಕೀ. ಮೀ. ವೇಗದಲ್ಲಿ ಚಲಿಸಲಿದೆ.

Maserati GranTurismo Sport and MC

Maserati GranTurismo Sport and MC

ದೀರ್ಘ ಪಯಣಕ್ಕೆ ಹೆಚ್ಚು ಸೂಕ್ತವಾದ ಕಾರು ಇದಾಗಿದೆ. ಇಂದೊಂದು ವಿಶಿಷ್ಟ ಯುರೋಪಿಯನ್ ಜಿಟಿ ಕಾರಾಗಿದ್ದು, ಆಕರ್ಷಕ ವಿನ್ಯಾಸ ಹಾಗೂ ನಿರ್ವಹಣೆಯನ್ನು ಹೊಂದಿದೆ. ಈ ಕಾರಿದ ದರ ಸುಮಾರು 1.4 ಕೋಟಿ ರುಪಾಯಿಗಳಾಗಿವೆ.

Mercedes-Benz SLS AMG Roadster

Mercedes-Benz SLS AMG Roadster

ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎಸ್ ಎಎಂಜಿ 6.2 ಲೀಟರ್ ವಿ8 ಎಂಜಿನ್ ನಿಯಂತ್ರಿಸಲ್ಪಡಲಿದ್ದು, 650 ಎನ್‌ಎಂ ಟರ್ಕ್ಯೂ‌ನಲ್ಲಿ 563 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಇದು ಗಂಟೆಗೆ ಗರಿಷ್ಠ 340 ಕೀ.ಮೀ. ವೇಗತೆಯಲ್ಲಿ ಚಲಿಸಲಿದೆ.

Bentley Continental GT Speed

Bentley Continental GT Speed

ಬ್ರಿಟನ್‌ನ ಲಗ್ಷುರಿ ಕಾರು ತಯಾರಕ ಕಂಪನಿಯಿಂದ ನಿರ್ಮಿತವಾಗಿರುವ ಅತಿ ದುಬಾರಿ ಕಾರು ಇದಾಗಿದೆ. ಬೆಂಟ್ಲಿ 2012ನೇ ಸಾಲಿನಲ್ಲಿ ಕಾಂಟಿನೆಂಟಲ್ ಜಿಟಿ ಕಾರನ್ನು ಲಾಂಚ್ ಮಾಡಿತ್ತು. ಇದರ 6 ಲೀಟರ್ ಡಬ್ಲ್ಯು12 ಎಂಜಿನ್ 6716 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ 330 ಕೀ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

Bugatti Veyron Super Sport

Bugatti Veyron Super Sport

ಬುಕಾಟಿ ವೆಯ್‌ರಾನ್ ಜಗತ್ತಿನ ಅತಿ ವೇಗದ ಕಾರುಗಳಲ್ಲಿ ಒಂದಾಗಿದೆ ಎಂಬುದು ನಮೆಗೆಲ್ಲ ತಿಳಿದ ವಿಚಾರ. ವೆಯ್‌ರಾನ್ ಸೂಪರ್ ಸ್ಪೋರ್ಟ್ಸ್ ಕಾರು ಮೂಲಕ ಬುಕಾಟಿ ತನ್ನ ವರ್ಚಸ್ಸನ್ನು ಹೆಚ್ಚಿಸಿದೆ. ಇದರ 8 ಲೀಟರ್ ಡಬ್ಲ್ಯು16 ಎಂಜಿನ್ 987 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ವೆಯ್‌ರಾನ್ ಸೂಪರ್ ಸ್ಪೋರ್ಟ್ಸ್ ಕಾರು ಗಂಟೆಗೆ ಗರಿಷ್ಠ 431 ಕೀ.ಮೀ ವೇಗದಲ್ಲಿ ಚಲಿಸಲಿದೆ. ಆದರೆ ದರ ಸ್ವಲ್ಪ ದುಬಾರಿಯಾಗಿದ್ದು 16 ಕೋಟಿ ಅಸುಪಾಸಿನಲ್ಲಿ ಲಭ್ಯವಾಗಲಿದೆ.

Chevrolet Corvette ZR1

Chevrolet Corvette ZR1

ಇದು ಅಮೆರಿಕ ಕಾರು ತಯಾರಕ ಕಂಪನಿಯಿಂದ ನಿರ್ಮಿತವಾಗಿರುವ ಸೂಪರ್ ಕಾರಾಗಿದೆ. ಇದು ಪ್ರತಿ ಗಂಟೆಗೆ 330 ಕೀ.ಮಿ ವೇಗದಲ್ಲಿ ಚಲಿಸಲಿದೆ.

Ferrari 458 Italia Spyder

Ferrari 458 Italia Spyder

ಜಗತ್ತಿನ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಫೆರಾರಿ ಮಾದರಿಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಹಾಗೆಯೇ ಫೆರಾರಿ 458 ಇಟಲಿಯಾ ಕೂಡಾ ಕಾರು ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಇದರ 4.5 ಲೀಟರ್ ವಿ8 ಎಂಜಿನ್ 562 ಹಾರ್ಸ್ ಪವರ್ ಉತ್ಪಾದಿಸಲಿದೆ. ಹಾಗೆಯೇ ಗಂಟೆಗೆ 319 ಕೀ.ಮೀ. ವೇಗದಲ್ಲಿ ಚಲಿಸಲಿದೆ.

Lamborghini Aventador LP700

Lamborghini Aventador LP700

ಲಂಬೊರ್ಗಿನಿ ಅವೆಂಟಡೋರ್ ಮತ್ತೊಂದು ಜನಪ್ರಿಯ ಕಾರಾಗಿದೆ. ಇದು ಲಂಬೊರ್ಗಿನಿಯಿಂದ ತಯಾರಿಸಲ್ಪಟ್ಟಿರುವ ಹೆಚ್ಚು ವೇಗದ, ಪವರ್‌ಫುಲ್ ಹಾಗೂ ಶ್ರೇಷ್ಠ ನಿರ್ವಹಣೆಯ ಕಾರಾಗಿದೆ. ಇದು ಪ್ರತಿ ಗಂಟೆಗೆ ಗರಿಷ್ಠ 354 ಕೀ.ಮೀ ವೇಗತೆಯಲ್ಲಿ ಚಲಿಸಲಿದೆ.

Lamborghini Gallardo LP 570-4 Superleggera

Lamborghini Gallardo LP 570-4 Superleggera

ಅಂದ ಹಾಗೆ ಹಲವಾರು ಗಾಲರ್ಡೊ ಸೂಪರ್ ಸ್ಪೆಷಲ್ ಅಡಿಷನ್ ಕಾರುಗಳನ್ನು ಲಂಬೊರ್ಗಿನಿ ಪರಿಚಯಿಸಿತ್ತು. ಇದು ಗಂಟೆಗೆ ಗರಿಷ್ಠ 250 ಕೀ.ಮೀ ವೇಗದಲ್ಲಿ ಚಲಿಸಲಿದೆ.

McLaren MP4-12C

McLaren MP4-12C

ಎಂಪಿ4-12ಸಿ ಮೂಲಕ ಸೂಪರ್ ಕಾರು ಸೆಗ್ಮೆಂಟ್‌ಗೆ ಮೆಕ್‌ಲಾರೆನ್ ಲಗ್ಗೆಯಿಟ್ಟಿತ್ತು. ಇದರ 3.8 ಲೀಟರ್ ವಿ8 ಎಂಜಿನ್ 616 ಹಾರ್ಸ್ ಪವರ್ ಉತ್ಪಾದಿಸಲಿದೆ. ಹಾಗೆಯೇ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 330 ಕೀ.ಮೀ ಆಗಿದೆ.

Porsche Boxster S Black Edition

Porsche Boxster S Black Edition

ಈ ಹಿಂದಿನ ಸಾಮಾನ್ಯ ಆವೃತ್ತಿಗಿಂತಲೂ ಪೋರ್ಷೆ ಬಾಕ್ಸ್‌ಸ್ಟರ್ ಎಸ್ ಬ್ಲ್ಯಾಕ್ ಅಡಿಷನ್ ಹೆಚ್ಚು ಪವರ್‌ಫುಲ್ ಎನಿಸಿಕೊಂಡಿದೆ. ಇದು ಕೇವಲ 5 ಸೆಕೆಂಡುಗಳಲ್ಲೇ 100 ಕೀ.ಮೀ ವೇಗ ವರ್ಧಿಸುವ ಸಾಮರ್ಥ್ಯ ಹೊಂದಿದ್ದು, ಪ್ರತಿ ಗಂಟೆಗೆ ಗರಿಷ್ಠ 276 ಕೀ.ಮೀ. ವೇಗದಲ್ಲಿ ಚಲಿಸಲಿದೆ.

SRT Viper

SRT Viper

ಇಲ್ಲಿದೆ ನೋಡಿ ಅಮೆರಿಕ ಕಾರು ತಯಾರಕ ಕಂಪನಿಯಿಂದ ನಿರ್ಮಾಣಗೊಂಡಿರುವ ಮತ್ತೊಂದು ಸೂಪರ್ ಕಾರು. ಎಸ್‌ಆರ್‌ಟಿ ವೈಪರ್ 8.4 ಲೀಟರ್ ವಿ10 ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದ್ದು, 640 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಅಂದರೆ ಎಸ್‌ಆರ್‌ಟಿ ವೈಪರ್ ಗಂಟೆಗೆ 325 ಕೀ.ಮೀ ಟಾಪ್ ಸ್ಪೀಡ್‌ನಲ್ಲಿ ಚಲಿಸಲಿದೆ.

Cars You Can Die For

ಮೇಲೆ ಕೊಡಲಾದ ಸೂಪರ್ ಕಾರುಗಳ ಹೊರತಾಗಿ ನಿಮ್ಮಲ್ಲಿ ಸೂಪರ್ ಕಾರುಗಳ ಪಟ್ಟಿ ಇದ್ದಲ್ಲಿ ಕಾಮೆಂಟ್ ಬಾಕ್ಸ್ ಮೂಲಕ ನಮ್ಮ ಜತೆ ಹಂಚಿಕೊಳ್ಳಬಹುದು.

New layer...

More from DriveSpark

Article Published On: Tuesday, January 29, 2013, 11:44 [IST]
English summary
Enjoy our list of exotic super cars in the photo feature below. Please note there is no best car or No.1 car in this list. Each of them have their own special characteristic. You can also suggest additions in this list by writing the car's name in the comments section after the article.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+