ದಿಲ್ಲಿಯಲ್ಲಿ ರೆಕ್ಕೆ ಬಿಚ್ಚಿದ ಫಿಯೆಟ್ ಕಾಂಪಾಕ್ಟ್ ಕ್ರಾಸೋವರ್
ಇಟಲಿಯ ದೈತ್ಯ ವಾಹನ ತಯಾರಕ ಸಂಸ್ಥೆಯಾದ ಫಿಯೆಟ್, ದೆಹಲಿಯಲ್ಲಿ ನಡೆಯುತ್ತಿರುವ 12ನೇ ಆಟೋ ಎಕ್ಸ್ ಪೋದಲ್ಲಿ ನೂತನ ಕಾಂಪಾಕ್ಟ್ ಕ್ರಾಸೋವರ್ ಪ್ರದರ್ಶಿಸಿದೆ.
2014 ಆಟೋ ಎಕ್ಸ್ ಪೋ
ಫಿಯೆಟ್‌ನ ನೂತನ ಕಾಂಪಾಕ್ಟ್ ಕ್ರಾಸೋವರ್ ಕಾರು ಅವ್ವೆಂಚ್ಯೂರಾ (Avventura) ಎಂದು ಹೆಸರಿಸಿಕೊಳ್ಳಲಿದೆ. ಕಳೆದ ತಿಂಗಳಷ್ಟೇ ಇಟಲಿಯಲ್ಲಿ ರಸ್ತೆ ಪರೀಕ್ಷೆ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸಿಕ್ಕಿಬಿದಿದ್ದ ಅದೇ ಕಾರು ದೆಹಲಿಯಲ್ಲೂ ತನ್ನ ರೆಕ್ಕೆ ಬಿಚ್ಚಿದೆ.

ಫಿಯೆಟ್ ಪುಂಟೊಗಿಂತಲೂ ಹೆಚ್ಚು ಆಕ್ರಮಣಕಾರಿ ವಿನ್ಯಾಸ ಪಡೆದುಕೊಂಡಿರುವ ಅವ್ವೆಂಚ್ಯೂರಾ ಆವೃತ್ತಿಗಳು ಒಬ್ಬರನ್ನೊಬ್ಬರನ್ನು ನೆಚ್ಚಿಕೊಂಡಿದೆ.

ಅಂದರೆ ಕಾರಿನ ಬಹುತೇಕ ಬಿಡಿಭಾಗಗಳು ಹಾಗೂ ಸಮಾನ ಫ್ಯಾಟ್‌ಫಾರ್ಮ್ ಹಂಚಿಕೊಂಡಿದೆ.

ಟೊಯೊಟಾ ಎಟಿಯೋಸ್ ಕ್ರಾಸ್ ಹಾಗೂ ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಆವೃತ್ತಿಗಳಿಗೆ ನೂತನ ಫಿಯೆಟ್ ಅವ್ವೆಂಚ್ಯೂರಾಗೆ ಪ್ರಮುಖ ಎದುರಾಳಿಯಾಗಿರಲಿದೆ.

ಹಿಂದುಗಡೆ ಎಸ್‌ಯುವಿ ವಿನ್ಯಾಸ ಪಡೆದುಕೊಂಡಿರುವ ಅವ್ವೆಂಚ್ಯೂರಾ ಪರಿಪೂರ್ಣ ಕ್ರಾಸೋವರ್ ಕಾರಿನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದು 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 90 ಬಿಎಚ್‌ಪಿ ಉತ್ಪಾದಿಸುವ (200ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿರಲಿದೆ.

ಅಷ್ಟೇ ಅಲ್ಲದೆ ಮಗದೊಂದು 1.4 ಲೀಟರ್ ಫೈರ್ ಪೆಟ್ರೋಲ್ ಎಂಜಿನ್ ಕೂಡಾ ಫಿಯೆಟ್ ಅವ್ವೆಂಚ್ಯೂರಾ ಹೊಂದಿರಲಿದೆ.


Click it and Unblock the Notifications








