ಎಂಟ್ರಿ ಲೆವೆಲ್ ಫಿಯೆಟ್ ಲಿನಿಯಾ ಕ್ಲಾಸಿಕ್ ಲಾಂಚ್

By Nagaraja

ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಫಿಯೆಟ್ ಗ್ರೂಪ್ ಆಟೋಮೊಬೈಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಫ್‌ಜಿಎಐಪಿಎಲ್), ದೇಶದ ಗ್ರಾಹಕರಿಗಾಗಿ ನೂತನ ಎಂಟ್ರಿ ಲೆವೆಲ್ ಫಿಯೆಟ್ ಲಿನಿಯಾ ಕ್ಲಾಸಿಕ್ ಸೆಡಾನ್ ಕಾರನ್ನು ಲಾಂಚ್ ಮಾಡಿದೆ.

ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಫಿಯೆಟ್ ಲಿನಿಯಾ ಕ್ಲಾಸಿಕ್ ಲಭ್ಯವಿರಲಿದ್ದು, ಎಕ್ಸ್ ಶೋ ರೂಂ ಪ್ರಾರಂಭಿಕ ದರ 5.99 ಲಕ್ಷ ರು.ಗಳಾಗಿವೆ.

ದರ ಹಾಗೂ ವೆರಿಯಂಟ್ ಮಾಹಿತಿ:

  • 1.4 ಲೀಟರ್ ಪೆಟ್ರೋಲ್ ಕ್ಲಾಸಿಕ್ 5.99 ಲಕ್ಷ ರು.
  • 1.3 ಲೀಟರ್ ಮಲ್ಟಿ-ಜೆಟ್ ಕ್ಲಾಸಿಕ್ 6.96 ಲಕ್ಷ ರು.
  • 1.3 ಲೀಟರ್ ಮಲ್ಟಿ-ಜೆಟ್ ಕ್ಲಾಸಿಕ್ ಪ್ಲಸ್ 7.51 ಲಕ್ಷ ರು.

ಲಿನಿಯಾ ಹಾಗೂ ಲಿನಿಯಾ ಪ್ಲಸ್

ಲಿನಿಯಾ ಹಾಗೂ ಲಿನಿಯಾ ಪ್ಲಸ್

ಫಿಯೆಟ್ ಲಿನಿಯಾ ಕ್ಲಾಸಿಕ್ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಇದು ಪೆಟ್ರೋಲ್‌ನಲ್ಲಿ ಲಿನಿಯಾ ಹಾಗೂ ಡೀಸೆಲ್‌ನಲ್ಲಿ ಲಿನಿಯಾ ಜತೆಗೆ ಲಿನಿಯಾ ಪ್ಲಸ್ ಕೂಡಾ ಲಭ್ಯವಿರಲಿದೆ.

ಉದ್ದವಾದ ಸೆಡಾನ್ ಕಾರು

ಉದ್ದವಾದ ಸೆಡಾನ್ ಕಾರು

ಇದೀಗ ಆಗಮನವಾಗಿರುವ ಫಿಯೆಟ್ ಲಿನಿಯಾ ಕ್ಲಾಸಿಕ್ ಸೆಡಾನ್ ಕಾರು, ಈ ಸೆಗ್ಮೆಂಟ್‌ನಲ್ಲಿರುವ ಕಾರುಗಳ ಪೈಕಿ ಅತಿ ಉದ್ದವಾದ ಕಾರೆನಿಸಿಕೊಂಡಿದ್ದು, ಉತ್ತಮ ವೀಲ್ ಬೇಸ್ ಹಾಗೆಯೇ ಒಟ್ಟು 500 ಲೀಟರ್ ಬೂಟ್ ಸ್ಪೇಸ್ ಹೊಂದಿರಲಿದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

1. 4 ಲೀಟರ್ F.I.R.E ಪೆಟ್ರೋಲ್ ಎಂಜಿನ್ (75 ಅಶ್ವಶಕ್ತಿ)

1.3 ಲೀಟರ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್

ಎಕ್ಸ್‌ಟೀರಿಯರ್

ಎಕ್ಸ್‌ಟೀರಿಯರ್

ಹೊರಮೈ ವಿನ್ಯಾಸವನ್ನು ಪರಿಗಣಿಸಿದಾಗ ಫಿಯೆಟ್ ಲಿನಿಯಾಗೆ ಸಮಾನವಾದ ವಿನ್ಯಾಸವನ್ನು ಪಡೆದುಕೊಂಡಿದೆ. ಹಾಗಿದ್ದರೂ ಪ್ರೀಮಿಯಂ ಸೌಲಭ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಿದೆ. ಹಾಗೆಯೇ ಬೂಟ್ ಲಿಡ್‌ನಲ್ಲಿ ಕ್ಲಾಸಿಕ್ ಬ್ಯಾಡ್ಜ್ ಇರಲಿದೆ.

ಇಂಟಿರಿಯರ್

ಇಂಟಿರಿಯರ್

ಡ್ಯಾಶ್‌ಬೋರ್ಡ್‌ನಲ್ಲಿ ಪ್ರೀಮಿಯಂ ಫಿನಿಶ್ ನೀಡಲಾಗಿದೆ. ಹಾಗಿದ್ದರೂ ಈ ಎಂಟ್ರಿ ಲೆವೆಲ್ ಕಾರು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್, ಫ್ರಂಟ್ ಆರ್ಮ್ ರೆಸ್ಟ್ ಹಾಗೂ ಎಲೆಕ್ಟ್ರಾನಿಕ್ ಒಆರ್‌ವಿಎಂಗಳಂತಹ ವೈಶಿಷ್ಟ್ಯಗಳ ಅಭಾವ ಕಾಡಲಿದೆ.

ಪ್ರತಿಸ್ಪರ್ಧಿ

ಪ್ರತಿಸ್ಪರ್ಧಿ

ಪ್ರಸ್ತುತ ಫಿಯೆಟ್ ಲಿನಿಯಾ ಕ್ಲಾಸಿಕ್ ಕಾರು, ಹೋಂಡಾ ಅಮೇಜ್, ಮಾರುತಿ ಸ್ವಿಫ್ಟ್ ಡಿಜೈರ್, ಟೊಯೊಟಾ ಎಟಿಯೋಸ್, ಷೆವರ್ಲೆ ಸೈಲ್ ಸೆಡಾನ್ ಹಾಗೂ ಫೋರ್ಡ್ ಕ್ಲಾಸಿಕ್ ಆವೃತ್ತಿಗಳಿಗೆ ಕಠಿಣ ಸ್ಪರ್ಧೆಯನ್ನು ಒಡ್ಡಲಿದೆ.

(ವಿ.ಸೂ: ಫಿಯೆಟ್ ಲಿನಿಯಾ ಕ್ಲಾಸಿಕ್ ಚಿತ್ರಗಳು ಇನ್ನು ಲಭ್ಯವಾಗಿಲ್ಲ. ಹಾಗಾಗಿ ಫೋಟೊ ಫೀಚರ್‌ನಲ್ಲಿ ಫಿಯೆಟ್ ಲಿನಿಯಾ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ.)

More from DriveSpark

Article Published On: Thursday, September 26, 2013, 6:02 [IST]
English summary
At a time when most Indian car manufacturers are fixated towards making compact cars, Fiat has made an unusual, but sound decision of marketing its new car as the longest car in the segment (4560mm). Fiat Linea, minus the amenities has resulted in the Linea Classic ‘budget sedan' that can compete with sub-4 meter compact cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+